ಅತ್ಯಾಚಾರ ಅಪರಾಧಕ್ಕೆ ಮರಣದಂಡನೆ ಶಿಕ್ಷೆಯಿಂದಾಗಿಯೇ​​ ಸಂತ್ರಸ್ತರ ಹತ್ಯೆಗಳು ಹೆಚ್ಚಾಗಿದ್ದು: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

| Updated By: ರಶ್ಮಿ ಕಲ್ಲಕಟ್ಟ

Updated on: Aug 07, 2022 | 6:24 PM

ನಿರ್ಭಯಾ ಪ್ರಕರಣದ ನಂತರ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನಿನಿಂದಾಗಿ, ಅತ್ಯಾಚಾರದ ನಂತರ ಕೊಲೆ ಘಟನೆಗಳು ಹೆಚ್ಚಾಗುತ್ತಿವೆ. ಇದು ದೇಶದಲ್ಲಿ ಅಪಾಯಕಾರಿ ಪ್ರವೃತ್ತಿಯಾಗಿದೆ.

ಅತ್ಯಾಚಾರ ಅಪರಾಧಕ್ಕೆ ಮರಣದಂಡನೆ ಶಿಕ್ಷೆಯಿಂದಾಗಿಯೇ​​ ಸಂತ್ರಸ್ತರ ಹತ್ಯೆಗಳು ಹೆಚ್ಚಾಗಿದ್ದು: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್
Follow us on

ಅತ್ಯಾಚಾರದ ಅಪರಾಧಕ್ಕೆ ಮರಣದಂಡನೆ ಶಿಕ್ಷೆ ನೀಡುವುದರಿಂದಾಗಿಯೇ ಲೈಂಗಿಕ ದೌರ್ಜನ್ಯಕ್ಕೊಳಗಾದವರ ಹತ್ಯೆಗಳು ಹೆಚ್ಚಾಗಲು ಕಾರಣ ಎಂದು ರಾಜಸ್ಥಾನ (Rajasthan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಹೇಳಿದ್ದು, ಇದು ವಿವಾದಕ್ಕೀಡಾಗಿದೆ. ನಿರ್ಭಯಾ ಪ್ರಕರಣದ ನಂತರ, ಆರೋಪಿಗಳನ್ನು ಗಲ್ಲಿಗೇರಿಸಬೇಕೆಂಬ ಬೇಡಿಕೆ ಹೆಚ್ಚಿತು. ಇದಾದ ನಂತರ ಕಾನೂನು ಜಾರಿಗೆ ಬಂದಿತು. ಅಂದಿನಿಂದ ಅತ್ಯಾಚಾರದ ನಂತರ ಸಂತ್ರಸ್ತೆಯರ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಗೆಹ್ಲೋಟ್ ಹೇಳಿದ್ದಾರೆ. ನಿರ್ಭಯಾ ಪ್ರಕರಣದ (Nirbhaya case) ನಂತರ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನಿನಿಂದಾಗಿ, ಅತ್ಯಾಚಾರದ ನಂತರ ಕೊಲೆ ಘಟನೆಗಳು ಹೆಚ್ಚಾಗುತ್ತಿವೆ. ಇದು ದೇಶದಲ್ಲಿ ಅಪಾಯಕಾರಿ ಪ್ರವೃತ್ತಿಯಾಗಿದೆ.

ಅತ್ಯಾಚಾರವೆಸಗುವ ವ್ಯಕ್ತಿ ಸಂತ್ರಸ್ತೆ ತನ್ನ ವಿರುದ್ಧ ಸಾಕ್ಷಿಯಾಗುತ್ತಾಳೆ ಎಂದು ಭಾವಿಸುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ಆರೋಪಿಯು ಸಂತ್ರಸ್ತೆಯನ್ನು ಕೊಲ್ಲುವುದು ಸರಿ ಎಂದು ಅಂದುಕೊಳ್ಳುತ್ತಾನೆ. ದೇಶದಾದ್ಯಂತ ಬರುತ್ತಿರುವ ವರದಿಗಳು ಅತ್ಯಂತ ಅಪಾಯಕಾರಿ ಪ್ರವೃತ್ತಿ, ದೇಶದ ಪರಿಸ್ಥಿತಿ ಚೆನ್ನಾಗಿಲ್ಲ ಎಂದಿದ್ದಾರೆ.


ಇಂಥಾ ಘಟನೆಗಳು ಹೆಚ್ಚಾಗಲು ಕಾನೂನು ಮತ್ತು ಸರ್ಕಾರವನ್ನು ಕಾಂಗ್ರೆಸ್ ನಾಯಕರು ದೂಷಿಸುತ್ತಿರುವಂತಿದೆ.
ಘೋರ ಅಪರಾಧವನ್ನು ಕ್ಷುಲ್ಲಕಗೊಳಿಸುವುದಕ್ಕಾಗಿ ಮತ್ತು ಮರಣದಂಡನೆಯ ವಿರುದ್ಧ ಗೆಹ್ಲೋಟ್ ಮಾತನಾಡಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ. ಇನ್ನು ಕೆಲವರು ಮರಣ ದಂಡನೆ ಶಿಕ್ಷೆಯನ್ನು ಅವರು ಶ್ಲಾಘಿಸಿದ್ದು ಎಂದು ಸಮರ್ಥಿಸಿಕೊಂಡಿದ್ದಾರೆ.

ಅಶೋಕ್ ಗೆಹ್ಲೋಟ್ ಹೇಳಿಕೆ ದುರದೃಷ್ಟಕರ. ಕಳೆದ ಮೂರು ವರ್ಷಗಳಲ್ಲಿ, ರಾಜಸ್ಥಾನವು ಹುಡುಗಿಯರ ಮೇಲೆ ದೌರ್ಜನ್ಯಗಳನ್ನು ನಡೆಸುವ ಕೇಂದ್ರವಾಗಿದೆ. ತಮ್ಮ ವೈಫಲ್ಯಗಳನ್ನು ಮರೆಮಾಚಲು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ವಿಷಯ ಬದಲಿಸುವವರ ದುರದೃಷ್ಟಕರ ಬೇರೇನೂ ಇರಲಾರದು,’’ ಎಂದು ಕೇಂದ್ರ ಸಚಿವ ಗಜೇಂದ್ರ ಎಸ್ ಶೇಖಾವತ್ ಹೇಳಿದ್ದಾರೆ.

ಗೆಹ್ಲೋಟ್ ಹೇಳಿಕೆ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮೌನವನ್ನು ಬಿಜೆಪಿ ಪ್ರಶ್ನಿಸಿದೆ.

“ಅತ್ಯಾಚಾರಿಗಳನ್ನು ದೂಷಿಸುವ ಬದಲು ಕಟ್ಟುನಿಟ್ಟಾದ ಅತ್ಯಾಚಾರ ಕಾನೂನುಗಳನ್ನು ದೂಷಿಸುತ್ತಿದ್ದಾರೆ ಗೆಹ್ಲೋಟ್! ನಿರ್ಭಯಾ ಪ್ರಕರಣ ನಂತರ ಕಾನೂನುಗಳನ್ನು ಬಿಗಿಗೊಳಿಸಿದ ನಂತರ ಅತ್ಯಾಚಾರ-ಸಂಬಂಧಿತ ಕೊಲೆಗಳು ಹೆಚ್ಚಿವೆ ಎಂದು ಹೇಳುತ್ತಾರೆ! ಇದು ಮೊದಲನೆಯದಲ್ಲ! ಹೆಚ್ಚಿನ ಅತ್ಯಾಚಾರ ಪ್ರಕರಣಗಳು ನಕಲಿ ಎಂದು ಅವರು ಹೇಳಿದರು.

ಮರ್ದೋಂಕಾ ಪ್ರದೇಶ್ ಹಾಗಾಗಿ ಅತ್ಯಾಚಾರಗಳು ನಡೆಯುತ್ತವೆ. ಪ್ರಿಯಾಂಕಾ ಜೀ ಮೌನವಾಗಿದ್ದಾರೆಯೇ?” ಎಂದು ಬಿಜೆಪಿ ನಾಯಕ ಶೆಹಜಾದ್ ಪೂನವಾಲಾ ಟ್ವೀಟ್ ಮಾಡಿದ್ದಾರೆ. ಮೇ ತಿಂಗಳಲ್ಲಿ, ಗೆಹ್ಲೋಟ್ ಅವರು ನಿರುದ್ಯೋಗವನ್ನು ಅತ್ಯಾಚಾರಕ್ಕೆ ಲಿಂಕ್ ಮಾಡಿ ಹೇಳಿಕೆ ನೀಡಿದ್ದು ಭಾರೀ ಟೀಕೆಗೊಳಗಾಗಿತ್ತು.

ಹೆಚ್ಚಿನ ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:56 pm, Sun, 7 August 22