ಕೋವಿಡ್ ಸಮಯದಲ್ಲಿ ಭಾರತದ ಒಕ್ಕೂಟ ವ್ಯವಸ್ಥೆ ಮಾದರಿಯಾಗಿದೆ: ನೀತಿ ಆಯೋಗ ಸಭೆಯಲ್ಲಿ ಮೋದಿ

NITI Aayog Meet ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಒಕ್ಕೂಟ ರಚನೆ ಮತ್ತು ಸಹಕಾರಿ ಒಕ್ಕೂಟ ಜಗತ್ತಿಗೆ ಮಾದರಿಯಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ಹೇಳಿದರು

ಕೋವಿಡ್ ಸಮಯದಲ್ಲಿ ಭಾರತದ ಒಕ್ಕೂಟ ವ್ಯವಸ್ಥೆ ಮಾದರಿಯಾಗಿದೆ: ನೀತಿ ಆಯೋಗ ಸಭೆಯಲ್ಲಿ ಮೋದಿ
ನರೇಂದ್ರ ಮೋದಿ
TV9kannada Web Team

| Edited By: Rashmi Kallakatta

Aug 07, 2022 | 7:22 PM

ದೆಹಲಿ:  ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಭಾನುವಾರ ನೀತಿ ಆಯೋಗದ (NITI Aayog) ಏಳನೇ ಆಡಳಿತ ಮಂಡಳಿ ಸಭೆ ನಡೆದಿದ್ದು ವಿವಿಧ ರಾಜ್ಯಗಳ ಮುಖ್ಯಮಂತ್ರಿ ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳು ತಮ್ಮ ರಾಜ್ಯಗಳ ಉತ್ತಮ ಕಾರ್ಯಗಳನ್ನು ಪ್ರಸ್ತುತಪಡಿಸಿದರು ಎಂದು ನೀತಿ ಆಯೋಗದ ಸಿಇಒ ಪರಮೇಶ್ವರನ್ ಅಯ್ಯರ್ ಹೇಳಿದ್ದಾರೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ವೈವಿಧ್ಯೀಕರಣದ ಪ್ರಾಮುಖ್ಯತೆ ಮತ್ತು ವಿಶೇಷವಾಗಿ ಖಾದ್ಯ ತೈಲಗಳಲ್ಲಿ ಸ್ವಾವಲಂಬನೆಯ ಅಗತ್ಯವನ್ನು ವ್ಯಕ್ತಪಡಿಸಿದರು ಎಂದು ನೀತಿ ಆಯೋಗದ ಚಿಂತಕ ರಮೇಶ್ ಚಂದ್ ಅವರು ಸಭೆಯ ನಂತರದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ನಾವು  ಆಮದುಗಳಿಂದ ಖಾದ್ಯ ತೈಲಕ್ಕಾಗಿ ನಮ್ಮ ಒಟ್ಟು ಬೇಡಿಕೆಯ ಅರ್ಧದಷ್ಟು ಭಾಗವನ್ನು ಪೂರೈಸುತ್ತಿದ್ದೇವೆ. ಒಟ್ಟಾರೆಯಾಗಿ ರಾಜ್ಯಗಳು ಸಾಕಷ್ಟು ಸಹಕಾರಿಯಾಗಿದ್ದವು ಮತ್ತು ಈ ಅಂಶದಲ್ಲಿ ಕಾರ್ಯನಿರ್ವಹಿಸುತ್ತಿವೆ” ಎಂದು ಚಂದ್ ಹೇಳಿದ್ದಾರೆ. ರಾಷ್ಟೀಯ ಶಿಕ್ಷಣ ನೀತಿ 2020, G20 ಮತ್ತು ರಫ್ತುಗಳ ಪ್ರಾಮುಖ್ಯತೆಯ ಕುರಿತು ಪ್ರಸ್ತುತಿ ನೀಡಲಾಗಿದೆ. ಭಾರತದ ಕೋವಿಡ್ ನಂತರದ ಪರಿಸ್ಥಿತಿ, ಮುಂದಿನ ವರ್ಷದ ಕಾರ್ಯಯೋಜನೆ ಮತ್ತು ನೀತಿ ಆಯೋಗದ ಸಭೆಯಿಂದ ಅವರ ನಿರೀಕ್ಷೆಯ ಕುರಿತು ಪ್ರಧಾನಮಂತ್ರಿಯವರು ಪ್ರಮುಖ ಅಂಶಗಳನ್ನು ತಿಳಿಸಿದ್ದಾರೆ ಎಂದು ಉಪಾಧ್ಯಕ್ಷ ಸುಮನ್ ಬೆರಿ ಹೇಳಿದರು.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯಗಳು ಪರಸ್ಪರ ಒಟ್ಟಾಗಿ ನಿರ್ಧಾರಗಳನ್ನು ತೆಗೆದುಕೊಂಡ ವಿಧಾನವನ್ನು ಮೋದಿ ಶ್ಲಾಘಿಸಿದ್ದಾರೆ ಎಂದು ಬೆರಿ ಹೇಳಿದ್ದಾರೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಒಕ್ಕೂಟ ರಚನೆ ಮತ್ತು ಸಹಕಾರಿ ಒಕ್ಕೂಟ ಜಗತ್ತಿಗೆ ಮಾದರಿಯಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ಹೇಳಿದರು. ಅವರು 2047 ರ ಭಾರತದ ಗುರಿಯ ಬಗ್ಗೆಯೂ ಮಾತನಾಡಿದರು ಎಂದಿದ್ದಾರೆ ಬೆರಿ.

ರಾಷ್ಟ್ರದಲ್ಲಿ ಕ್ಷಿಪ್ರ ನಗರೀಕರಣದ ವಿಷಯದ ಕುರಿತು ಮಾತನಾಡಿದ ಮೋದಿ,  ಜೀವನಶೈಲಿ, ಪಾರದರ್ಶಕ ಸೇವೆ ವಿತರಣೆ ಮತ್ತು ಜೀವನದ ಗುಣಮಟ್ಟದಲ್ಲಿ ಸುಧಾರಣೆಯನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಅದನ್ನು ದೌರ್ಬಲ್ಯದ ಬದಲಿಗೆ ಶಕ್ತಿ ಎಂದು ಪರಿಗಣಿಸಬೇಕು ಎಂದು ಹೇಳಿದರು. ಅದೇ ವೇಳೆ  ಖಾದ್ಯ ತೈಲ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಬೇಕು ಎಂದರು.

2023 ರಲ್ಲಿ ಮುಂಬರುವ ಭಾರತದ ಜಿ-20 ಅಧ್ಯಕ್ಷ ಸ್ಥಾನದ ಕುರಿತು  ಮಾತನಾಡಿದ ಮೋದಿ,  ಭಾರತವು 1 ಡಿಸೆಂಬರ್ 2022 ರಿಂದ 30 ನವೆಂಬರ್ 2023 ರವರೆಗೆ G20 ಅಧ್ಯಕ್ಷ ಸ್ಥಾನವನ್ನು ಹೊಂದಿರುತ್ತದೆ. G20 ವಿಶ್ವದ ಪ್ರಮುಖ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳನ್ನು ಒಳಗೊಂಡಿದೆ, ಇದು ಜಾಗತಿಕ GDP ಯ ಶೇ85, ಅಂತರರಾಷ್ಟ್ರೀಯ ವ್ಯಾಪಾರದ ಶೇ  75 ಮತ್ತು ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು ಭಾಗವನ್ನು ಹೊಂದಿದೆ. ಇದು ಅಂತರರಾಷ್ಟ್ರೀಯ ಆರ್ಥಿಕ ಸಹಕಾರಕ್ಕಾಗಿ ಪ್ರಧಾನ ವೇದಿಕೆಯಾಗಿದೆ.

ಉಪಕ್ರಮದಿಂದ ಗರಿಷ್ಠ ಸಂಭವನೀಯ ಪ್ರಯೋಜನವನ್ನು ಪಡೆಯುವ ದೃಷ್ಟಿಯಿಂದ, G-20 ಗಾಗಿ ಮೀಸಲಾದ ತಂಡಗಳನ್ನು ಸ್ಥಾಪಿಸಲು ರಾಜ್ಯಗಳಿಗೆ ಪಿಎಂ ಮೋದಿ ಹೇಳಿದ್ದಾರೆ. ಸಭೆಯಲ್ಲಿ 23 ಮುಖ್ಯಮಂತ್ರಿಗಳು, 3 ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು 2 ಆಡಳಿತಾಧಿಕಾರಿಗಳು ಮತ್ತು ಕೇಂದ್ರ ಸಚಿವರು ಭಾಗವಹಿಸಿದ್ದರು.

ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada