ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಐತಿಹಾಸಿಕ ಬದಲಾವಣೆಗೊಳಗಾಗುತ್ತಿದೆ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ಕಳೆದ 8 ವರ್ಷಗಳ ಅಧಿಕಾರಾವಧಿಯಲ್ಲಿ ಪ್ರಾರಂಭಿಸಿದ ವಿವಿಧ ನೀತಿಗಳು ಮತ್ತು ಯೋಜನೆಗಳ ಮೂಲಕ ಸಾಮಾನ್ಯ ಜನರ ಜೀವನವನ್ನು ಉತ್ತಮಪಡಿಸಲು ಪ್ರಯತ್ನಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಐತಿಹಾಸಿಕ ಬದಲಾವಣೆಗೆ ಒಳಗಾಗುತ್ತಿದೆ...

ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಐತಿಹಾಸಿಕ ಬದಲಾವಣೆಗೊಳಗಾಗುತ್ತಿದೆ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ
ಮೆಲ್ಬೋರ್ನ್‌ನಲ್ಲಿ ಎನ್‌ಐಡಿ ಫೌಂಡೇಶನ್ ಆಯೋಜಿಸಿದ್ದ 'ವಿಶ್ವ ಸದ್ಭಾವನಾ' ಕಾರ್ಯಕ್ರಮದಲ್ಲಿ ಲೇಖಿ
TV9kannada Web Team

| Edited By: Rashmi Kallakatta

Aug 07, 2022 | 8:53 PM

ಭಾರತದಲ್ಲಿ ಅರ್ಥಶಾಸ್ತ್ರಜ್ಞರು ಪ್ರಧಾನಿಯಾಗಿದ್ದರು. ಆದರೆ ಭಾರತದ ಬಡವರನ್ನು ಔಪಚಾರಿಕ ಆರ್ಥಿಕತೆಗೆ ಸೇರಿಸಿದ್ದು ನರೇಂದ್ರ ಮೋದಿ (Narendra Modi) ಮಾತ್ರ. ಮೋದಿಯವರ ನಾಯಕತ್ವದಲ್ಲಿ ಭಾರತವು ಐತಿಹಾಸಿಕ ಬದಲಾವಣೆಗೆ ಒಳಗಾಗುತ್ತಿದೆ. ಮೋದಿಯವರು  ಸಾಮಾನ್ಯ ಜನರ ಜೀವನವನ್ನು ಉತ್ತಮಪಡಿಸಲು ಪ್ರಯತ್ನಿಸಿದ್ದಾರೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ (Meenakshi Lekhi) ಭಾನುವಾರ ಹೇಳಿದ್ದಾರೆ. ಮೆಲ್ಬೋರ್ನ್‌ನಲ್ಲಿ ಎನ್‌ಐಡಿ ಫೌಂಡೇಶನ್ ಆಯೋಜಿಸಿದ್ದ ‘ವಿಶ್ವ ಸದ್ಭಾವನಾ’ (Vishwa Sadbhavana)ಕಾರ್ಯಕ್ರಮದಲ್ಲಿ ಮಾತನಾಡಿದ ಲೇಖಿ ‘ಹಾರ್ಟ್‌ಫೆಲ್ಟ್-ದಿ ಲೆಗಸಿ ಆಫ್ ಫೇತ್’ ಮತ್ತು ‘ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ’ ಎಂಬ ಎರಡು ಪುಸ್ತಕಗಳನ್ನು ಅನಾವರಣಗೊಳಿಸಿದ್ದಾರೆ.  ಪ್ರತಿ ಬಾರಿಯೂ ಭಾರತಕ್ಕೆ ಬದಲಾವಣೆಯ ಅಗತ್ಯವಿದೆ. ನೀವು ಇತಿಹಾಸವನ್ನು ಪರಿಶೀಲಿಸಿದರೆ ಒಬ್ಬ ಮಹಾನ್ ಬಂದು ಅಗತ್ಯವಿರುವ ಬದಲಾವಣೆಯನ್ನು ತರುತ್ತಾನೆ ಎಂದು ನಿಮಗೆ ತಿಳಿಯುತ್ತದೆ. ಮಹಾರಾಜ ರಂಜಿತ್ ಸಿಂಗ್ ಮತ್ತು ಮರಾಠಾ ರಾಣಿ ಅಹಲ್ಯಾ ಬಾಯಿ ಹೋಳ್ಕರ್ ಅವರ ನಂತರ ಯಾರಾದರೂ ಅಂತಹ ಬೃಹತ್ ಬದಲಾವಣೆಯನ್ನು ತರಲು ಸಮರ್ಥರಾಗಿದ್ದರೆ ಎನ್ನುವುದಾದರೆ ಅದು ನಮ್ಮ ಪ್ರಧಾನಿ ನರೇಂದ್ರ ಮೋದಿ ಎಂದಿದ್ದಾರೆ ಲೇಖಿ.

ಕಳೆದ 8 ವರ್ಷಗಳ ಅಧಿಕಾರಾವಧಿಯಲ್ಲಿ ಪ್ರಾರಂಭಿಸಿದ ವಿವಿಧ ನೀತಿಗಳು ಮತ್ತು ಯೋಜನೆಗಳ ಮೂಲಕ ಸಾಮಾನ್ಯ ಜನರ ಜೀವನವನ್ನು ಉತ್ತಮಪಡಿಸಲು ಪ್ರಯತ್ನಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಐತಿಹಾಸಿಕ ಬದಲಾವಣೆಗೆ ಒಳಗಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಮತ್ತು ಸಂಸ್ಕೃತಿ ಇಲಾಖೆಯ ರಾಜ್ಯ ಸಚಿವೆ ಲೇಖಿ ಹೇಳಿದ್ದಾರೆ.

ಹಿಂದಿನ ಸರ್ಕಾರಗಳಿಗಿಂತ ಭಿನ್ನವಾಗಿ ಈ ದೇಶದ ಸಾಮಾನ್ಯ ನಾಗರಿಕರಿಗೆ ಶೌಚಾಲಯದ ಅಗತ್ಯವಿದೆ ಎಂದು ಲೆಕ್ಕಾಚಾರ ಮಾಡಲು ಅವರಿಗೆ 70 ವರ್ಷಗಳು ಬೇಕಾಗಲಿಲ್ಲ. ಮೋದಿ ಸರ್ಕಾರದ ಅವಧಿಯಲ್ಲಿ 20 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಭಾರತದಲ್ಲಿ ಅರ್ಥಶಾಸ್ತ್ರಜ್ಞರು ಪ್ರಧಾನ ಮಂತ್ರಿಗಳಾಗಿದ್ದರು. ಆದರೆ ಈ ದೇಶದ ಬಡವರನ್ನು ಔಪಚಾರಿಕ ಆರ್ಥಿಕತೆಗೆ ಸೇರಿಸಿದ್ದು ನರೇಂದ್ರ ಮೋದಿ ಮಾತ್ರ. ಕಳೆದ 70 ವರ್ಷಗಳಲ್ಲಿ ತೆರೆದ 12 ಕೋಟಿ ಬ್ಯಾಂಕ್ ಖಾತೆ ತೆರೆಯುವಿಕೆಗೆ ಹೋಲಿಸಿದರೆ ನಾಲ್ಕು ತಿಂಗಳೊಳಗೆ 38 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಇದು ರಾಷ್ಟ್ರ ನಿರ್ಮಾಣದಲ್ಲಿ ಶ್ರೀಸಾಮಾನ್ಯನೂ ಒಳಗೊಳ್ಳುವುದನ್ನು ಖಾತ್ರಿಪಡಿಸಿತು. ಅದರ ಜತೆಗೇ ನೇರ ಬ್ಯಾಂಕ್ ವರ್ಗಾವಣೆಯನ್ನು ಖಾತ್ರಿಪಡಿಸಿತು. ಇದು ಭ್ರಷ್ಟಾಚಾರವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಎಂದು ಲೇಖಿ ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ವಿಶ್ವ ಸದ್ಭಾವನಾ ಆಯೋಜಿಸಲಾಗಿದೆ. ಆಸ್ಟ್ರೇಲಿಯಾ ಮತ್ತು ಭಾರತದ ಗಣ್ಯ ವ್ಯಕ್ತಿಗಳು, ಕಾರ್ಪೊರೇಟ್ ನಾಯಕರು, ಶಿಕ್ಷಣ ತಜ್ಞರು ಮತ್ತು ಆಧ್ಯಾತ್ಮಿಕ ನಾಯಕರು ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಹೈಕಮಿಷನರ್ ಮನ್‌ಪ್ರೀತ್ ವೋಹ್ರಾ, ಆಸ್ಟ್ರೇಲಿಯಾದಲ್ಲಿರುವ ಭಾರತೀಯ ವಲಸಿಗರು ಸಂಖ್ಯೆಯಲ್ಲಿ ಮಾತ್ರ ಬೆಳೆದಿಲ್ಲ, ಆದರೆ ಎರಡು ಸಮುದಾಯಗಳ ನಡುವಿನ ಸಂಬಂಧವು ಹಿಂದೆಂದಿಗಿಂತಲೂ ಬಲವಾಗಿ ಬೆಳೆದಿದೆ ಎಂದಿದ್ದಾರೆ.

ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada