2 ವಾರಗಳ ಗದ್ದಲ, ಪ್ರತಿಭಟನೆಗಳ ನಂತರ ಸೋಮವಾರ ಲೋಕಸಭೆಯಲ್ಲಿ ಬೆಲೆ ಏರಿಕೆ ಚರ್ಚೆ

| Updated By: ರಶ್ಮಿ ಕಲ್ಲಕಟ್ಟ

Updated on: Jul 29, 2022 | 9:00 PM

ಮುಂಗಾರು ಅಧಿವೇಶನದ ಮೊದಲ ಎರಡು ವಾರಗಳ ನಂತರ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ  ಪ್ರತಿಭಟನೆಗಳು ನಡೆದ ನಂತರ  ಆಗಸ್ಟ್ 1ರಂದು ಬೆಲೆ ಏರಿಕೆ  ಚರ್ಚೆಯಾಗಲಿದೆ.

2 ವಾರಗಳ ಗದ್ದಲ, ಪ್ರತಿಭಟನೆಗಳ ನಂತರ ಸೋಮವಾರ ಲೋಕಸಭೆಯಲ್ಲಿ ಬೆಲೆ ಏರಿಕೆ ಚರ್ಚೆ
ವಿಪಕ್ಷಗಳ ಪ್ರತಿಭಟನೆ
Follow us on

ದೆಹಲಿ: ಸೋಮವಾರ ಲೋಕಸಭೆಯಲ್ಲಿ (Loksabha) ಬೆಲೆ ಏರಿಕೆ (Price hike) ಕುರಿತು ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಆ ಚರ್ಚೆಗಳಲ್ಲಿ ಕೇಳುವ ಪ್ರಶ್ನೆಗೆ ಉತ್ತರಿಸಲಿದ್ದಾರೆ. ಮುಂಗಾರು ಅಧಿವೇಶನದ ಮೊದಲ ಎರಡು ವಾರಗಳ ನಂತರ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ  ಪ್ರತಿಭಟನೆಗಳು ನಡೆದ ನಂತರ  ಆಗಸ್ಟ್ 1ರಂದು ಬೆಲೆ ಏರಿಕೆ  ಚರ್ಚೆಯಾಗಲಿದೆ.  ಮುಂಗಾರು ಅಧಿವೇಶನ ಆರಂಭವಾದದಿಂದಿನಿಂದ ವಿಪಕ್ಷಗಳು ಹಣದುಬ್ಬರದ ಬಗ್ಗೆ ಚರ್ಚೆಗೆ ಒತ್ತಾಯಿಸುತ್ತಲೇ ಇದ್ದವು. ಜೂನ್‌ನಲ್ಲಿ ಭಾರತದ ವಾರ್ಷಿಕ ಚಿಲ್ಲರೆ ಹಣದುಬ್ಬರವು ಕಳೆದ ವರ್ಷ ಶೇ 6.26 ರಿಂದ ಈ ವರ್ಷ ಜೂನ್‌ನಲ್ಲಿ ಶೇ7.01 ಕ್ಕೆ ಏರಿದೆ. ಇದಕ್ಕಿಂತ ಮುನ್ನ ದಿನಬಳಕೆ ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (GST) ವಿಧಿಸುವುದರ ವಿರುದ್ಧವೂ ಪ್ರತಿಭಟನೆಗಳು ನಡೆದಿವೆ. ಸಂಸತ್ತಿನಲ್ಲಿ ಈ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಉಳಿದೆಲ್ಲವನ್ನೂ ಬದಿಗಿಡಬೇಕು ಎಂದು ವಿಪಕ್ಷಗಳು ಹೇಳಿವೆ. ಸರ್ಕಾರವು “ಎಲ್ಲಾ ಸಮಸ್ಯೆಗಳ” ಚರ್ಚೆಗೆ ಸಿದ್ಧ ಎಂದು ಪದೇ ಪದೇ ಹೇಳಿಕೊಂಡಿದೆ. ಆದರೆ ನಿರ್ಮಲಾ ಸೀತಾರಾಮನ್ ಅವರ ಅನುಪಸ್ಥಿತಿಯು ಸರ್ಕಾರ ನುಣುಚಿಕೊಳ್ಳುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ವಿಪಕ್ಷಗಳು ಹೇಳಿವೆ.

ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಕೂಗಿ ಮತ್ತು ಫಲಕಗಳನ್ನು ಸದನದೊಳಗೆ ತಂದು ಸರ್ಕಾರವು ನೈಜ ಸಮಸ್ಯೆಗಳನ್ನು ಚರ್ಚಿಸುವುದಿಲ್ಲ ಎಂದು ಆರೋಪಿಸಿದ್ದರು. ವಿಪಕ್ಷ ಸದಸ್ಯರ ವಿರುದ್ದ ಸಭಾಪತಿ ಓಂ ಬಿರ್ಲಾ ಕ್ರಮ ತೆಗೆದುಕೊಂಡಿದ್ದು ಹಲವಾರು ಸಂಸದರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ.

Published On - 8:54 pm, Fri, 29 July 22