ದೆಹಲಿ: ಚೀನಾದ ಅತೀ ದೊಡ್ಡ ರಾಕೆಟ್ ಭಾನುವಾರ ಬೆಳಗ್ಗೆ ಮಾಲ್ಡೀವ್ಸ್ ಬಳಿ ಹಿಂದೂ ಮಹಾ ಸಾಗರಕ್ಕೆ ಬಂದು ಬಿದ್ದಿದೆ. The Long March-5B ರಾಕೆಟ್ ಭೂಮಿಯ ಪದರಕ್ಕೆ ಪ್ರವೇಶಿಸುತ್ತಿದ್ದಂತೆ ಅದರ ಕೆಲವು ಭಾಗಗಳು ನಾಶವಾಗಿವೆ. ಕಳೆದ ವರ್ಷ ಉಡಾವಣೆಯಾಗಿದ್ದ 5ಬಿಯ ಮೊದಲ ರಾಕೆಟ್ ನ ಭಾಗಗಳು ಐವರಿಕೋಸ್ಟ್ ನ ಭೂಭಾಗದಲ್ಲಿ ಬಿದ್ದಿತ್ತು. ಹೀಗಾಗಿ ಈ ಬಾರಿ ರಾಕೆಟ್ ಎಲ್ಲಿ ಬಂದು ಬೀಳಬಹುದು ಎಂಬ ಕುತೂಹಲವೂ ಆತಂಕವೂ ಸೃಷ್ಟಿಯಾಗಿತ್ತು. ಆದರೆ ಇದೀಗ ರಾಕೆಟ್‌ನ ಅವಶೇಷಗಳು ಹಿಂದೂ ಮಹಾ ಸಾಗರಕ್ಕೆ ಬಂದು ಅಪ್ಪಳಿಸಿದ ಕಾರಣ ಅನಾಹುತಗಳು ತಪ್ಪಿದೆ.
ಏಪ್ರಿಲ್ 29 ರಂದು ಚೀನಾದ ಹೊಸ ಟಿಯಾನ್ಹೆ ಬಾಹ್ಯಾಕಾಶ ಕೇಂದ್ರದ ಮೊದಲ ಮೊಡ್ಯೂಲ್ ಅನ್ನು ಭೂಮಿಯ ಕಕ್ಷೆಗೆ ಉಡಾಯಿಸಿದ ಲಾಂಗ್ ಮಾರ್ಚ್ -5 ಬಿ ರಾಕೆಟ್, ಬೀಜಿಂಗ್ ಸಮಯ (0224 ಜಿಎಂಟಿ) ಬೆಳಿಗ್ಗೆ 10: 24 ಕ್ಕೆ ಮತ್ತೆ ಭೂಮಿಗೆ ಪ್ರವೇಶಿಸಿತು. 72.47 ಡಿಗ್ರಿ ಪೂರ್ವ ರೇಖಾಂಶ ಮತ್ತು 2.65 ಡಿಗ್ರಿ ಉತ್ತರ ಅಕ್ಷಾಂಶದಲ್ಲಿ ಬಂದಿಳಿಯಿತು.
ಮೇಲ್ವಿಚಾರಣೆ ಮತ್ತು ವಿಶ್ಲೇಷಣೆಯ ನಂತರ, ಮೇ 9, 2021 ರಂದು 10:24 (0224 GMT) ನಲ್ಲಿ, ಲಾಂಗ್ ಮಾರ್ಚ್ 5 ಬಿ ಯಾವೋ -2 ಉಡಾವಣಾ ವಾಹನದ ಕೊನೆಯ ಹಂತದ ಅವಶೇಷವು ಭೂಮಿಗೆ ಮತ್ತೆ ಪ್ರವೇಶಿಸಿದೆ ಎಂದು ಚೀನಾ ಮ್ಯಾನ್ಡ್ ಸ್ಪೇಸ್ ಎಂಜಿನಿಯರಿಂಗ್ ಕಚೇರಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.
ಭೂಮಿಗೆ ಮತ್ತೆ ಪ್ರವೇಶಿಸುವ ಹೊತ್ತಲ್ಲಿ ಅದರ ಬಹುಪಾಲು ಘಟಕಗಳು ಸುಟ್ಟುಹೋಗಿವೆ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆಯ ಮಾಹಿತಿ ಉಲ್ಲೇಖಿಸಿ ಚೀನಾದ ಮಾಧ್ಯಮಗಳು ವರದಿ ಮಾಡಿದೆ.
ರಾಕೆಟ್ ಮತ್ತೆ ಭೂಮಿಗೆ ಅಪ್ಪಳಿಸಿರುವುದರ ಬಗ್ಗೆ ದೃಢೀಕರಿಸಿ ಅಮೆರಿಕದ ಮಿಲಿಟರಿ ಡೇಟಾವನ್ನು ಬಳಸುವ ಮಾನಿಟರಿಂಗ್ ಸೇವೆ ಸ್ಪೇಸ್-ಟ್ರ್ಯಾಕ್, ಟ್ವೀಟ್ ಮಾಡಿದೆ. ಲಾಂಗ್‌ಮಾರ್ಚ್ 5 ಬಿ ಅಪ್ಪಳಿಸುವ ಬಗ್ಗೆ ಆತಂಕಗೊಂಡವರು ಈಗ ಸಮಾಧಾನಿಸಬಹುದು. ರಾಕೆಟ್ ಬಿದ್ದಿದೆ ಎಂದಾಗಿತ್ತು ಆ ಟ್ವೀಟ್.
@18SPCS confirms that CZ-5B (#LongMarch5B) (48275 / 2021-035B) reentered atmosphere 9 May at 0214Z and fell into the Indian ocean north of the Maldives at lat 22.2, long 50.0. That’s all we have on this re-entry; thanks for the wild ride and 30K more followers. Good night!
— Space-Track (@SpaceTrackOrg) May 9, 2021
Yes, we know that the TIP coords (lat 22.2, long 50.0) plot in Saudi Arabia. That was the last place that the @18SPCS computer system recorded it. Operators confirm that the rocket actually went into the Indian Ocean north of the Maldives. We just report the data, folks!
— Space-Track (@SpaceTrackOrg) May 9, 2021
ಕಳೆದ ಕೆಲವು ದಿನಗಳಿಂದ 18 ಟನ್ ತೂಕದ ವಸ್ತು ಎಲ್ಲಿ ಬೀಳುತ್ತದೆ ಎಂಬ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ರಾಕೆಟ್‌ನ ಅನಿಯಂತ್ರಿತ ಮರು ಪ್ರವೇಶವು ಸಂಭವನೀಯ ಹಾನಿ ಮತ್ತು ಸಾವುನೋವುಗಳ ಬಗ್ಗೆ ಕಳವಳವನ್ನು ಉಂಟುಮಾಡಿತು.
ಅಮೆರಿಕ ಮತ್ತು ಯುರೋಪಿಯನ್ ಬಾಹ್ಯಾಕಾಶ ಅಧಿಕಾರಿಗಳು ರಾಕೆಟ್ ನ ಪಥವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದರು.
ಚೀನಾದ ನಿರ್ಲಕ್ಷ್ಯವೇ ರಾಕೆಟ್ ಕಕ್ಷೆಯಿಂದ ಬೀಳಲು ಕಾರಣ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಈ ಹಿಂದೆ ಹೇಳಿದ್ದರು. ರಾಕೆಟ್ ನೆಲಕ್ಕಪ್ಪಳಿಸಿದರೆ ಹಾನಿಯುಂಟಾಗುವ ಸಾಧ್ಯತೆ ಇದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದರು.
(Debris of China largest space rocket Long March-5B landed in the Indian Ocean near the Maldives on Sunday)
Published On - 11:51 am, Sun, 9 May 21