AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ ಕಿರಿಕ್‌ ನಡುವೆಯೇ ಭಾರತದಿಂದ ಪಿನಾಕಾ ಮಲ್ಟಿ ರಾಕೆಟ್‌ ಲಾಂಚರ್ಸ್‌ಗೆ ಆರ್ಡರ್‌

ನವದೆಹಲಿ: ಮೊದಲೇ ಪಾಕಿಸ್ತಾನದ ಭಯೋತ್ಪಾದನೆಯಿಂದ ಕಿರಿಕಿರಿ ಅನುಭವಿಸುತ್ತಿದ್ದ ಭಾರತ ಈಗ ಚೀನಾದೊಂದಿಗಿನ ಗಡಿ ತಂಟೆಯಿಂದಾಗಿ ಎಚ್ಚೆತ್ತುಕೊಂಡಿದೆ. ಮುಂದಿನ ದಿನಗಳಲ್ಲಿ ಇಂಥದ್ದಕ್ಕೆಲ್ಲಾ ಅವಕಾಶ ಮಾಡಿಕೊಡದಿರಲು ಪ್ಲಾನ್‌ ಮಾಡಿದ್ದು, ಇದರಂಗವಾಗಿ ಈಗ ಪಿನಾಕಾ ರಾಕೆಟ್‌ ಲಾಂಚರ್‌ನ್ನು ಸೇನೆಗೆ ಸೇರಿಸಲು ಸಜ್ಜಾಗಿದೆ. ಸಂಪೂರ್ಣವಾಗಿ ದೇಸಿಯವಾಗಿಯೇ ತಯಾರಾಗುತ್ತಿರುವ ಈ ಪಿನಾಕಾ ರಾಕೆಟ್‌ ಲಾಂಚರ್‌ ಏಕ ಕಾಲದಲ್ಲಿ ಹಲವಾರು ರಾಕೆಟ್‌ಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ BEL ಅಂದ್ರೆ ಭಾರತ್‌ ಅರ್ಥ್‌ ಮೂವರ್ಸ್‌, ಲಾರ್ಸನ್‌ ಌಂಡ್‌ ಟರ್ಬೋ ಮತ್ತು ಟಾಟಾ ಪವರ್‌ ಕಂಪನಿಗಳಿಗೆ ಗುತ್ತಿಗೆ […]

ಚೀನಾ ಕಿರಿಕ್‌ ನಡುವೆಯೇ ಭಾರತದಿಂದ ಪಿನಾಕಾ ಮಲ್ಟಿ ರಾಕೆಟ್‌ ಲಾಂಚರ್ಸ್‌ಗೆ ಆರ್ಡರ್‌
Guru
|

Updated on:Sep 01, 2020 | 2:36 PM

Share

ನವದೆಹಲಿ: ಮೊದಲೇ ಪಾಕಿಸ್ತಾನದ ಭಯೋತ್ಪಾದನೆಯಿಂದ ಕಿರಿಕಿರಿ ಅನುಭವಿಸುತ್ತಿದ್ದ ಭಾರತ ಈಗ ಚೀನಾದೊಂದಿಗಿನ ಗಡಿ ತಂಟೆಯಿಂದಾಗಿ ಎಚ್ಚೆತ್ತುಕೊಂಡಿದೆ. ಮುಂದಿನ ದಿನಗಳಲ್ಲಿ ಇಂಥದ್ದಕ್ಕೆಲ್ಲಾ ಅವಕಾಶ ಮಾಡಿಕೊಡದಿರಲು ಪ್ಲಾನ್‌ ಮಾಡಿದ್ದು, ಇದರಂಗವಾಗಿ ಈಗ ಪಿನಾಕಾ ರಾಕೆಟ್‌ ಲಾಂಚರ್‌ನ್ನು ಸೇನೆಗೆ ಸೇರಿಸಲು ಸಜ್ಜಾಗಿದೆ.

ಸಂಪೂರ್ಣವಾಗಿ ದೇಸಿಯವಾಗಿಯೇ ತಯಾರಾಗುತ್ತಿರುವ ಈ ಪಿನಾಕಾ ರಾಕೆಟ್‌ ಲಾಂಚರ್‌ ಏಕ ಕಾಲದಲ್ಲಿ ಹಲವಾರು ರಾಕೆಟ್‌ಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ BEL ಅಂದ್ರೆ ಭಾರತ್‌ ಅರ್ಥ್‌ ಮೂವರ್ಸ್‌, ಲಾರ್ಸನ್‌ ಌಂಡ್‌ ಟರ್ಬೋ ಮತ್ತು ಟಾಟಾ ಪವರ್‌ ಕಂಪನಿಗಳಿಗೆ ಗುತ್ತಿಗೆ ನೀಡಿದೆ.

ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ತಯಾರಾಗುತ್ತಿರುವ ಈ ಪಿನಾಕಾ ರಾಕೆಟ್‌ ಲಾಂಚರ್ಸ್‌ಗಳಿಗಾಗಿ ಭಾರತ 2,580 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಗತ್ಯ ಮಂಜೂರಾತಿ ನೀಡಿದ್ದಾರೆ.

ಎಲ್ಲವೂ ಅಂದು ಕೊಂಡಂತೆ ನಡೆದ್ರೆ 2024ಕ್ಕೆ ಈ ಪಿನಾಕಾ ಮಲ್ಟಿಪಲ್‌ ರಾಕೆಟ್‌ ಲಾಂಚರ್ಸ್‌ ಭಾರತೀಯ ಸೇನೆ ಸೇರಿಕೊಳ್ಳಲಿವೆ. ಶತೃಗಳ ಚಲನವಲನಗಳನ್ನು ಮತ್ತು ಅವರ ಸೈನ್ಯದ ಗತಿಯನ್ನು ಗುರಿಯಾಗಿಟ್ಟುಕೊಂಡು ರಾಕೆಟ್‌ ದಾಳಿ ನಡೆಸಲು ಈ ಪಿನಾಕಾ ಬಹು ಉಪಯೋಗಿಯಾಗಲಿದೆ.

ಹೀಗಾಗಿ ಇನ್ನು ಮುಂದೆ ಭಾರತದೊಂದಿಗೆ ತಗಾದೆ ತೆಗೆಯುವುದಕ್ಕಿಂತ ಮೊದಲು ಶತ್ರಗಳು ಹತ್ತು ಬಾರಿ ಯೋಚಿಸುವ ಕಾಲ ಸನ್ನಿಹಿತವಾಗುತ್ತಿದೆ.

Published On - 2:05 pm, Tue, 1 September 20

ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ