AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪಾಂಗಾಂಗ್‌ ಸರೋವರದ ಕಣಿವೆಯ ಎತ್ತರ ಭಾಗ ನಮ್ಮದು’

ದೆಹಲಿ: ಮುಂದೆ ತಲೆ ಸವರಿ, ಮೆತ್ತಗೆ ಬೆನ್ನಿಗೆ ಚೂರಿ ಹಾಕುವುದು ಚೀನಾ ಹುಟ್ಟುಗುಣ. ಅದ್ರಲ್ಲೂ ಭಾರತವನ್ನ ಕಂಡರೆ ಸಾಕು ಏನಾದರೂ ಒಂದು ಮಸಲತ್ತು ಮಾಡುವ ಹೇಡಿ ಡ್ಯಾಗನ್, ಈಗ ಮತ್ತೊಂದು ದುಸ್ಸಾಹಸಕ್ಕೆ ಕೈಹಾಕಿ ಮುಖಭಂಗ ಅನುಭವಿಸಿದೆ. ಜಟ್ಟಿ ಮಣ್ಣಿಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅಂದಂತೆ ಮುಖಭಂಗ ಅನುಭವಿಸಿದ್ದರೂ ಭಾರತದ ಗಡಿ ಬಿಟ್ಟು ಹೋಗಲು ಹೊಸ ಬೇಡಿಕೆ ಇಟ್ಟಿದೆ. ಪೂರ್ವ ಲಡಾಕ್ ಗಡಿಯಲ್ಲಿ ಚೀನಾ ಸೇನೆ ಕಿರಿಕಿರಿ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣ್ತಿಲ್ಲ. ಗಾಲ್ವಾನ್ ವಿವಾದ ನಂತ್ರ ಸುಮಾರು […]

‘ಪಾಂಗಾಂಗ್‌ ಸರೋವರದ ಕಣಿವೆಯ ಎತ್ತರ ಭಾಗ ನಮ್ಮದು’
ಆಯೇಷಾ ಬಾನು
|

Updated on: Sep 01, 2020 | 7:24 AM

Share

ದೆಹಲಿ: ಮುಂದೆ ತಲೆ ಸವರಿ, ಮೆತ್ತಗೆ ಬೆನ್ನಿಗೆ ಚೂರಿ ಹಾಕುವುದು ಚೀನಾ ಹುಟ್ಟುಗುಣ. ಅದ್ರಲ್ಲೂ ಭಾರತವನ್ನ ಕಂಡರೆ ಸಾಕು ಏನಾದರೂ ಒಂದು ಮಸಲತ್ತು ಮಾಡುವ ಹೇಡಿ ಡ್ಯಾಗನ್, ಈಗ ಮತ್ತೊಂದು ದುಸ್ಸಾಹಸಕ್ಕೆ ಕೈಹಾಕಿ ಮುಖಭಂಗ ಅನುಭವಿಸಿದೆ. ಜಟ್ಟಿ ಮಣ್ಣಿಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅಂದಂತೆ ಮುಖಭಂಗ ಅನುಭವಿಸಿದ್ದರೂ ಭಾರತದ ಗಡಿ ಬಿಟ್ಟು ಹೋಗಲು ಹೊಸ ಬೇಡಿಕೆ ಇಟ್ಟಿದೆ.

ಪೂರ್ವ ಲಡಾಕ್ ಗಡಿಯಲ್ಲಿ ಚೀನಾ ಸೇನೆ ಕಿರಿಕಿರಿ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣ್ತಿಲ್ಲ. ಗಾಲ್ವಾನ್ ವಿವಾದ ನಂತ್ರ ಸುಮಾರು 1 ತಿಂಗಳ ಬಳಿಕ ಮತ್ತೆ ಗಡಿಯಲ್ಲಿ ಕಿರಿಕ್ ಶುರು ಮಾಡಿರುವ ಚೀನಾ ಈಗ ‘ಪಾಂಗಾಂಗ್‌ ಕಣಿವೆಯ ಭಾರತದ ಗಡಿ ಮೇಲೆ ಕಣ್ಣಿಟ್ಟು ಒಳಗೆ ನುಗ್ಗಿದೆ. ಇನ್ನು ಒಳಗೆ ನುಗ್ಗಿದ್ದೂ ಅಲ್ಲದೆ ಹೊಸ ತಗಾದೆಯನ್ನೂ ತೆಗೆದಿದೆ.

ಹೌದು.. ಕೈಲಾಗದೆ ಮೈ ಪರಚಿಕೊಳ್ಳುತ್ತಿರುವ ಚೀನಾಗೆ ಭಾರತದ ಪಾಂಗಾಂಗ್‌ ಸರೋವರದ ಕಣಿವೆಯ ಎತ್ತರದಲ್ಲಿನ ಪ್ರದೇಶ ಬೇಕಂತೆ. ಕಳೆದ ಬಾರಿ ಗಾಲ್ವಾನ್ ನದಿ ಕಣಿವೆ ಭಾಗದಲ್ಲಿ ಅತಿಕ್ರಮಣಕ್ಕೆ ಮುಂದಾಗಿದ್ದ ಚೀನಾ ಸದ್ಯ ಭಾರತದ ಎಲ್‌ಎಸಿಯ ಎತ್ತರದ ಭಾಗ ನಮ್ಮದು ಎಂದಿದೆ. ಅಲ್ಲದೇ ಒತ್ತುವರಿಗೂ ಯತ್ನಿಸಿದೆ.

ಆ.29ರ ರಾತ್ರಿ ಆಗಿದ್ದೇನು? ಆಗಸ್ಟ್ 29ರ ರಾತ್ರಿ ಪಾಂಗಾಂಗ್‌ ಕಣಿವೆ ಒತ್ತುವರಿಗೆ ಚೀನಾ ಸೇನೆ ಯತ್ನಿಸಿತ್ತು.. ಆದ್ರೆ, ಈ ದಾಳಿಯನ್ನ ಮೊದಲೇ ನಿರೀಕ್ಷಿಸಿದ್ದ ಭಾರತೀಯ ಸೇನೆ ಚೀನಾದ ಯತ್ನವನ್ನ ವಿಫಲಗೊಳಿಸಿತ್ತು.. ಇದಾದ ಬಳಿಕ, ಆಗಸ್ಟ್ 29 ರ ರಾತ್ರಿಯೇ ಗಡಿಯಲ್ಲಿ ಮಹತ್ವದ ಸಭೆ ನಡೆಸಲಾಗಿತ್ತು. ಚುಶುಲ್ ಮತ್ತು ಮೊಲ್ಡೊದಲ್ಲಿ ಬ್ರಿಗೇಡ್ ಕಮಾಂಡರ್ ಮಟ್ಟದ ಸಭೆ ನಡೆಸಲಾಗಿತ್ತು..

ಆದ್ರೆ ಸಭೆಯಲ್ಲಿ ಚೀನಾ ಸೇನೆ ಹೊಸ ಡಿಮ್ಯಾಂಡ್ ಇಟ್ಟಿದ್ದು, ಭಾರತದ ವ್ಯಾಪ್ತಿಯ ಎಲ್‌ಎಸಿಯಲ್ಲಿನ ಎತ್ತರ ಪ್ರದೇಶ ಚೀನಾ ವ್ಯಾಪ್ತಿಗೆ ಸೇರಿದ್ದು ಎಂದು ವಾದಿಸಿದೆ. ಆದ್ರೆ ಚೀನಾ ವಾದವನ್ನ ತಳ್ಳಿಹಾಕಿದ ಭಾರತ, ಹಕ್ಕು ಮಂಡಿಸಿದೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಭಾರತೀಯ ಸೇನೆ ಪಾಂಗೊಂಗ್ ತ್ಸೊ ಸರೋವರದ ದಕ್ಷಿಣ ತಟ ಹಾಗೂ ಸುತ್ತಮುತ್ತಲಿನ ಎತ್ತರದ ಪ್ರದೇಶ ಆವರಿಸಿಕೊಂಡಿದೆ. ಇದೇ, ಪ್ರದೇಶದಲ್ಲಿ ಕೆಲವೇ ಮೀಟರ್ ದೂರದಲ್ಲಿರುವ ಫಿಂಗರ್ 4 ಮತ್ತು 8 ರಲ್ಲಿ ಚೀನಾ ಸೇನೆ ಇದೆ.

ಭಾರತೀಯ ಸೇನೆ ಸೂಕ್ತ ತಯಾರಿ ಮಾಡಿಕೊಂಡು ಚೀನಾ ಸೇನೆಯನ್ನ ಸದ್ಯಕ್ಕೆ ಹಿಮ್ಮೆಟಿಸಿದೆ. ಇದ್ರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ, ಯಾವ ಕ್ಷಣದಲ್ಲಾದ್ರು ಭಾರತ ಚೀನಾ ಸೈನಿಕರು ಮುಖಾಮುಖಿಯಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.