ಜನವರಿ 26ರ ಹಿಂಸಾಚಾರ ಪ್ರಕರಣದಲ್ಲಿ ದೀಪ್​ ಸಿಧುಗೆ ಜಾಮೀನು ನೀಡಿದ ದೆಹಲಿ ಕೋರ್ಟ್​

ಜನವರಿ 26ರ ಹಿಂಸಾಚಾರ ಪ್ರಕರಣದಲ್ಲಿ ದೀಪ್​ ಸಿಧುಗೆ ಜಾಮೀನು ನೀಡಿದ ದೆಹಲಿ ಕೋರ್ಟ್​
ದೀಪ್ ಸಿಧು

ಇನ್ನು ಜನವರಿ 26ರಂದು ಹಿಂಸಾಚಾರ ನಡೆಸುವಂತೆ ರೈತರಿಗೆ ನಾನು ಯಾವುದೇ ಕರೆ ಕೊಟ್ಟಿರಲಿಲ್ಲ. ಕೆಂಪುಕೋಟೆಗೆ ಹೋಗಿ ಗಲಭೆ ಸೃಷ್ಟಿಸುವಂತೆ ಪ್ರಚೋದಿಸಿರಲಿಲ್ಲ ಎಂದು ದೀಪ್ ಸಿಧು ಕೋರ್ಟ್​ಗೆ ತಿಳಿಸಿದ್ದರು.

Lakshmi Hegde

|

Apr 17, 2021 | 12:03 PM


ದೆಹಲಿ: ಜನವರಿ 26ರಂದು ರೈತರ ಟ್ರ್ಯಾಕ್ಟರ್​ ರ‍್ಯಾಲಿ ಹೆಸರಲ್ಲಿ ನಡೆದ ಹಿಂಸಾಚಾರ, ದೆಹಲಿ ಕೆಂಪುಕೋಟೆ ಮೇಲೆ ದಾಂಧಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ನಟ ದೀಪ್​ ಸಿಧುಗೆ ದೆಹಲಿಯ ನ್ಯಾಯಾಲಯ ಜಾಮೀನು ನೀಡಿದೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಜನವರಿ 26, ಗಣರಾಜ್ಯೋತ್ಸವದಂದು ಹಿಂಸಾತ್ಮಕ ರೂಪ ತಳೆದಿತ್ತು. ದೆಹಲಿಯ ಕೆಂಪುಕೋಟೆ ಮೇಲೆ ಸಿಖ್​ ಧ್ವಜವನ್ನೂ ಹಾರಿಸಲಾಗಿತ್ತು. ಈ ಹಿಂಸಾಚಾರದ ಪ್ರಮುಖ ಆರೋಪಿ ದೀಪ್​ ಸಿಧುವನ್ನು ಪೊಲೀಸರು ಫೆಬ್ರವರಿಯಲ್ಲಿ ಬಂಧಿಸಿದ್ದರು.

ದೀಪ್​​ ಸಿಧು ಜಾಮೀನು ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು. ದೀಪ್​ ಸಿಧು ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಂಡಿರಲಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರಷ್ಟೇ ಎಂದು ಸಿಧು ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ದೆಹಲಿ ಪೊಲೀಸರ ಪರ ವಾದ ಮಂಡನೆ ಮಾಡಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್​, ಸಿಧು ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದಾರೆ ಮತ್ತು ಕೆಂಪುಕೋಟೆಯ ಬಳಿ ನಡೆದ ಗಲಭೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಕೋರ್ಟ್​​ಗೆ ಹೇಳಿದ್ದರು.

ಇನ್ನು ಜನವರಿ 26ರಂದು ಹಿಂಸಾಚಾರ ನಡೆಸುವಂತೆ ರೈತರಿಗೆ ನಾನು ಯಾವುದೇ ಕರೆ ಕೊಟ್ಟಿರಲಿಲ್ಲ. ಕೆಂಪುಕೋಟೆಗೆ ಹೋಗಿ ಗಲಭೆ ಸೃಷ್ಟಿಸುವಂತೆ ಪ್ರಚೋದಿಸಿರಲಿಲ್ಲ. ರೈತರನ್ನು ಪ್ರತಿಭಟನೆಗೆ ಕರೆದಿದ್ದು, ರೈತ ಸಂಘದ ಮುಖಂಡರು. ನಾನು ಯಾವುದೇ ರೈತ ಸಂಘದ ಸದಸ್ಯನೂ ಅಲ್ಲ ಎಂಬ ದಾಖಲೆಯನ್ನು ಸಿಧು ತನ್ನ ವಕೀಲರ ಮೂಲಕ ಕೋರ್ಟ್​ಗೆ ಸಲ್ಲಿಸಿದ್ದರು. ಅಲ್ಲದೆ, ಗಲಭೆಗೆ ಸಿಧು ಕಾರಣ ಎಂಬುದಕ್ಕೆ ಯಾವುದೇ ಪುರಾವೆಯೇ ಇಲ್ಲ ಎಂಬುದನ್ನೂ ಕೋರ್ಟ್​ಗೆ ತಿಳಿಸಿದ್ದರು. ಒಂದೇ ಒಂದು ನಾನು ಮಾಡಿದ ತಪ್ಪೆಂದರೆ, ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು. ಈ ವಿಡಿಯೋದಿಂದಾಗಿ ನನ್ನನ್ನೇ ಅಪರಾಧಿ ಎಂಬಂತೆ ಬಿಂಬಿಸಲಾಯಿತು ಎಂದು ಸಿಧು ಕೋರ್ಟ್​ಗೆ ಹೇಳಿದ್ದರು.

ಇದನ್ನೂ ಓದಿ: Republic Day Violence: ಆರೋಪಿ ದೀಪ್ ಸಿಧುಗೆ 14 ದಿನಗಳ ನ್ಯಾಯಾಂಗ ಬಂಧನ

ಸ್ವಯಂ ಲಾಕ್ ಡೌನ್! ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶವಿದ್ರೂ ಜನ ಬರ್ತಿಲ್ಲ: ಪ್ರವಾಸಿ ಕೇಂದ್ರಗಳು ಬಿಕೋ ಅನ್ನುತ್ತಿವೆ!


Follow us on

Related Stories

Most Read Stories

Click on your DTH Provider to Add TV9 Kannada