Delhi Air Pollution: ದೆಹಲಿಯಲ್ಲಿ ನಿಷೇಧವಿದ್ದರೂ ಪಟಾಕಿ ಹಚ್ಚಿ ಸಂಭ್ರಮ, ಮಿತಿಮೀರುತ್ತಿದೆ ವಾಯುಮಾಲಿನ್ಯ
ದೆಹಲಿಯಲ್ಲಿ ಪಟಾಕಿಯ ನಿಷೇಧವಿದ್ದರೂ ಹಚ್ಚಿ ಜನರು ಸಂಭ್ರಮಿಸುತ್ತಿದ್ದಾರೆ, ಇದರ ಪರಿಣಾಮ ಗಾಳಿಯು ತೀರಾ ವಿಷವಾಗಿ ಮಾರ್ಪಟ್ಟಿದೆ.
ದೆಹಲಿಯಲ್ಲಿ ಪಟಾಕಿಯ ನಿಷೇಧವಿದ್ದರೂ ಹಚ್ಚಿ ಜನರು ಸಂಭ್ರಮಿಸುತ್ತಿದ್ದಾರೆ, ಇದರ ಪರಿಣಾಮ ಗಾಳಿಯು ತೀರಾ ವಿಷವಾಗಿ ಮಾರ್ಪಟ್ಟಿದೆ. ದೆಹಲಿ, ನೋಯ್ಡಾ, ಗುರುಗ್ರಾಮದಲ್ಲಿಯೂ ವಿಷಗಾಳಿ ಮುಂದುವರೆದಿದೆ, ಜನರ ಆರೋಗ್ಯದ ಕುರಿತು ಆತಂಕ ಶುರುವಾಗಿದೆ.
ದೆಹಲಿಯಲ್ಲಿ ಮಾಲಿನ್ಯದ ಮಟ್ಟ ಇಂದು ಅತ್ಯಂತ ಕಳಪೆಯಾಗಿತ್ತು. ಹೆಚ್ಚುತ್ತಿರುವ ಮಾಲಿನ್ಯವು ಜನರ ಸಮಸ್ಯೆಗಳನ್ನು ಹೆಚ್ಚಿಸಬಹುದು, ವಿಶೇಷವಾಗಿ ಕೆಲವು ಉಸಿರಾಟದ ಸಮಸ್ಯೆಯನ್ನು ತಂದೊಡ್ಡಬಹುದು.
ಗಾಳಿ ಪ್ರಮಾಣ ಕಡಿಮೆಯಾದುದರಿಂದ ಮಾಲಿನ್ಯಕಾರಕಗಳ ಶೇಖರಣೆಗೆ ಸಹಾಯ ಮಾಡಿದೆ, ಆದರೆ ಪಟಾಕಿಗಳು ಮತ್ತು ಹುಲ್ಲಿನ ಸುಡುವಿಕೆಯಿಂದಾಗಿ ಪರಿಸ್ಥಿತಿಯು ಮತ್ತಷ್ಟು ಹದಗೆಟ್ಟಿದೆ.
ದೆಹಲಿಯಲ್ಲಿ ಎಕ್ಯೂಐ (ವಾಯು ಗುಣಮಟ್ಟ ಸೂಚ್ಯಂಕ) ಬೆಳಿಗ್ಗೆ 5 ಗಂಟೆಗೆ 323 ರಷ್ಟಿತ್ತು. 323 ಅನ್ನು ಅತ್ಯಂತ ಕಳಪೆ ಮಟ್ಟವೆಂದು ಪರಿಗಣಿಸಲಾಗಿದೆ. ಇದು ಇಡೀ ದೆಹಲಿಯ ಸ್ಥಿತಿ ಬಗ್ಗೆ ಗಮನಿಸುವುದಾದರೆ, ಕೆಲವು ಪ್ರದೇಶಗಳಲ್ಲಿ AQI 400 ದಾಟಿದೆ. ನೋಯ್ಡಾದಲ್ಲಿ ಮಾಲಿನ್ಯವು ತುಂಬಾ ಹೆಚ್ಚಾಗಿದೆ ಮತ್ತು ಇಲ್ಲಿ AQI 342 ಆಗಿದೆ.
0 ರಿಂದ 50 ರ ನಡುವಿನ AQI ಅನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ, 51 ರಿಂದ 100 “ತೃಪ್ತಿದಾಯಕ”, 101 ರಿಂದ 200 “ಮಧ್ಯಮ”, 201 ರಿಂದ 300 ಕಳಪೆ, 301 ರಿಂದ 400 ಅತ್ಯಂತ ಕಳಪೆ ಮತ್ತು 401 ರಿಂದ 500 ತೀವ್ರ ಎಂದು ಹೇಳಲಾಗಿದೆ.
ರಾಷ್ಟ್ರ ರಾಜಧಾನಿಯ 24-ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು (AQI) ಅಕ್ಟೋಬರ್ 23 ರ ಭಾನುವಾರ ಸಂಜೆ 259 ಆಗಿತ್ತು, ಇದು ಏಳು ವರ್ಷಗಳಲ್ಲಿ ದೀಪಾವಳಿಯ ಹಿಂದಿನ ದಿನದ ಅತ್ಯಂತ ಕಡಿಮೆಯಾಗಿದೆ.
ವರದಿಗಳ ಪ್ರಕಾರ, ರಾತ್ರಿಯಲ್ಲಿ ಜನರು ರಾಜಧಾನಿಯ ವಿವಿಧ ಭಾಗಗಳಲ್ಲಿ ಪಟಾಕಿಗಳನ್ನು ಸಿಡಿಸುವುದರಿಂದ ಮತ್ತು ತಾಪಮಾನದ ಕುಸಿತ ಮತ್ತು ಗಾಳಿಯ ವೇಗದ ನಡುವೆ ಮಾಲಿನ್ಯದ ಮಟ್ಟವು ಮತ್ತಷ್ಟು ಹೆಚ್ಚಾಯಿತು.
ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಅಧೀನದಲ್ಲಿರುವ ಮುನ್ಸೂಚಕ ಏಜೆನ್ಸಿಯಾದ SAFAR, ಶಾಂತವಾದ ಗಾಳಿ ಮತ್ತು ಕಡಿಮೆ ತಾಪಮಾನದಿಂದಾಗಿ ಗಾಳಿಯಲ್ಲಿ ಮಾಲಿನ್ಯಕಾರಕಗಳ ತ್ವರಿತ ಶೇಖರಣೆಗೆ ಅನುವು ಮಾಡಿಕೊಡುವ ಕಾರಣದಿಂದಾಗಿ ಗಾಳಿಯ ಗುಣಮಟ್ಟವು ಹದಗೆಡಬಹುದು ಎಂದು ಊಹಿಸಲಾಗಿತ್ತು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ