AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gautam Gambhir ಬಿಜೆಪಿ ಸಂಸದ ಗೌತಮ್ ಗಂಭೀರ್​​ಗೆ ಮತ್ತೊಮ್ಮೆ ಪಾಕಿಸ್ತಾನದಿಂದ ಜೀವ ಬೆದರಿಕೆ ಇಮೇಲ್

ಗೌತಮ್ ಗಂಭೀರ್ ಮತ್ತು ಅವರ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ಇ-ಮೇಲ್ ಭಾನುವಾರ ಬಂದಿದೆ. ಭಾನುವಾರದ ಸಂದೇಶವು " ISIS Kashmir " ಎಂಬ ಇಮೇಲ್ ಐಡಿಯಿಂದ ಬಂದಿದೆ. ಈ ಬಾರಿಯ ಮೇಲ್‌ನಲ್ಲಿ "ದೆಹಲಿ ಪೊಲೀಸರು ಮತ್ತು ಐಪಿಎಸ್ ಶ್ವೇತಾ ಚೌಹಾಣ್(ಡಿಸಿಪಿ)(Shweta Chauhan) ಅವರಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ" ಎಂದು ಹೇಳಲಾಗಿದೆ.

Gautam Gambhir ಬಿಜೆಪಿ ಸಂಸದ ಗೌತಮ್ ಗಂಭೀರ್​​ಗೆ ಮತ್ತೊಮ್ಮೆ ಪಾಕಿಸ್ತಾನದಿಂದ ಜೀವ ಬೆದರಿಕೆ ಇಮೇಲ್
ಗೌತಮ್ ಗಂಭೀರ್
TV9 Web
| Edited By: |

Updated on: Nov 28, 2021 | 11:34 AM

Share

ದೆಹಲಿ: ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ (Gautam Gambhir) ಅವರಿಗೆ ಪಾಕಿಸ್ತಾನದ (Pakistan)  ಕರಾಚಿಯಿಂದ (Karachi)  ಜೀವ ಬೆದರಿಕೆ ನೀಡುವ ಸಂದೇಶಗಳು ಬಂದ ಕೆಲವು ದಿನಗಳ ನಂತರ ಅವರನ್ನು ಮತ್ತು ಅವರ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ಇ-ಮೇಲ್ ಭಾನುವಾರ ಬಂದಿದೆ. ಭಾನುವಾರದ ಸಂದೇಶವು ” ISIS Kashmir ” ಎಂಬ ಇಮೇಲ್ ಐಡಿಯಿಂದ ಬಂದಿದೆ. ಈ ಬಾರಿಯ ಮೇಲ್‌ನಲ್ಲಿ “ದೆಹಲಿ ಪೊಲೀಸರು ಮತ್ತು ಐಪಿಎಸ್ ಶ್ವೇತಾ ಚೌಹಾಣ್(ಡಿಸಿಪಿ)(Shweta Chauhan) ಅವರಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ” ಎಂದು ಹೇಳಲಾಗಿದೆ. ಮಧ್ಯರಾತ್ರಿ  1.37 ರ ಸುಮಾರಿಗೆ isiskasmir@yahoo.com ನಿಂದ ಇಮೇಲ್ ಬಂದಿದೆ ಎಂದು ಮೂಲಗಳು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ. “ಇಮೇಲ್‌ನಲ್ಲಿ ದೆಹಲಿ ಪೊಲೀಸರು ಮತ್ತು ಐಪಿಎಸ್ ಶ್ವೇತಾ ಅವರ ಗೂಢಚಾರರು ಸಹ ಪಡೆಗಳಲ್ಲಿ ಇರುವುದರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ” ಮೂಲಗಳು ತಿಳಿಸಿವೆ. ನವೆಂಬರ್ 24 ರಂದು ಗಂಭೀರ್ ಅವರ ಪರ್ನನಲ್ ಸೆಕ್ರೆಟರಿ ಗೌರವ್ ಅರೋರಾ ಅವರು ಡಿಸಿಪಿ ಚೌಹಾಣ್ ಅವರಿಗೆ ಬರೆದ ಪತ್ರದಲ್ಲಿ, “ಇಂದು ರಾತ್ರಿ 9.32 ಕ್ಕೆ ಎಂಪಿ (ಗಂಭೀರ್) ಸರ್ ಅವರ ಅಧಿಕೃತ ಇಮೇಲ್‌ನಲ್ಲಿ ಐಸಿಸ್ ಕಾಶ್ಮೀರದಿಂದ ನಮಗೆ ಇಮೇಲ್ ಬಂದಿದೆ. ಸಂಸದ ಮತ್ತು ಅವರ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಮೇಲ್‌ನಲ್ಲಿ ಹೇಳಲಾಗಿದೆ.

ದಯವಿಟ್ಟು ಈ ವಿಷಯವನ್ನು ಪರಿಶೀಲಿಸಲು ಮತ್ತು ಎಫ್‌ಐಆರ್ ದಾಖಲಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಮಾಡುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ಅರೋರಾ  ಬರೆದಿದ್ದರು.  ಈ ಹಿಂದೆ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಗಂಭೀರ್ ಮನೆಯ ಹೊರಗೆ ಭದ್ರತೆ ಹೆಚ್ಚಿಸಲಾಗಿತ್ತು.

ಎರಡನೇ ಇಮೇಲ್‌ನಲ್ಲಿ, ಆರೋಪಿಯು ಗಂಭೀರ್‌ನ ಮನೆಯನ್ನು ತೋರಿಸುವ ವಿಡಿಯೊದೊಂದಿಗೆ ಕೊಲೆ ಬೆದರಿಕೆಗಳನ್ನು ಕಳುಹಿಸಿದ್ದಾರೆ. ಆದಾಗ್ಯೂ, ಇದು ಅವರ ಮನೆಯ ಹೊರಗೆ ಚಿತ್ರೀಕರಿಸಿದ ಹಳೆಯ ವಿಡಿಯೊ ಎಂದು ಪೊಲೀಸರು ಹೇಳಿದ್ದಾರೆ. ಅದೇ ವೇಳೆ ಐಪಿ ವಿಳಾಸವನ್ನು ಪಡೆಯಲು Google ಗೆ ಇಮೇಲ್ ಕಳುಹಿಸಿದ್ದಾರೆ.  ಸೆಂಟ್ರಲ್ ಡಿಸ್ಟ್ರಿಕ್ಟ್ ಪೊಲೀಸರ ಸೈಬರ್ ಸೆಲ್ ತಂಡ ವಿಶೇಷ ಸೆಲ್‌ನೊಂದಿಗೆ ಕಾರ್ಯಾಚರಣೆ ನಡೆಸಿದ ನಂತರ ಇಮೇಲ್ ಅನ್ನು ಮೂಲತಃ ಪಾಕಿಸ್ತಾನದ ಕರಾಚಿಯ ವ್ಯಕ್ತಿಯೊಬ್ಬರು ಕಳುಹಿಸಿದ್ದಾರೆ ಎಂದು ಕಂಡುಹಿಡಿದಿದೆ.

ಇದನ್ನೂ ಓದಿ: Gautam Gambhir ಐಸಿಸ್​​ನಿಂದ ಜೀವ ಬೆದರಿಕೆ ಕರೆ: ಪೊಲೀಸರಿಗೆ ದೂರು ನೀಡಿದ ಬಿಜೆಪಿ ಸಂಸದ ಗೌತಮ್ ಗಂಭೀರ್