Delhi Chalo : ರೈತರ ಟ್ರ್ಯಾಕ್ಟರ್ ಗುಡುಗಿಗೆ ದೆಹಲಿ ಗಡಿ ಗಡಗಡ
ದೆಹಲಿಯ ಗಡಿಭಾಗಗಳಲ್ಲಿ ಟ್ರ್ಯಾಕ್ಟರ್ಗಳ ಸದ್ದು..ಸುಮಾರು 3500ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳಲ್ಲಿ ಪಂಜಾಬ್ ರೈತರು ರಾಜಧಾನಿಯ ಗಡಿಗಳಲ್ಲಿ ಮೆರವಣಿಗೆ ನಡೆಸುತ್ತಿದ್ದಾರೆ.

ದೆಹಲಿ: ಸಿಂಘು, ಟಿಕ್ರಿ ಮತ್ತು ಘಾಜಿಪುರ ಗಡಿ ಭಾಗಗಳಿಂದ ಹೊರಟಿರುವ ಪಂಜಾಬ್ ರೈತರ 3,500ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳ ಮೆರವಣಿಗೆಯ ಮುಂದಾಳತ್ವವನ್ನು ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ವಹಿಸಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಬೃಹತ್ ಪ್ರಮಾಣದಲ್ಲಿ ಪೊಲೀಸರನ್ನು ಸಹ ಹೆದ್ದಾರಿ ಮತ್ತು ಗಡಿ ಭಾಗಗಳಲ್ಲಿ ನಿಯೋಜಿಸಲಾಗಿದೆ.
ತಾವು ವಾಸ್ತವ್ಯ ಹೂಡಿದ್ದ ಗಡಿ ಪ್ರದೇಶಗಳಿಂದ ಕುಂಡ್ಲಿ-ಮನೇಸರ್-ಪಲ್ವಾಲ್ ಹೆದ್ದಾರಿ ತುಂಬ ರೈತರ ಟ್ರ್ಯಾಕ್ಟರ್ಗಳ ಸದ್ದಿಗೆ ದೆಹಲಿ ಸಾಕ್ಷಿಯಾಗುತ್ತಿದೆ. ಟಿಕ್ರಿ, ಘಾಜಿಪುರ್, ಸಿಂಘು ಗಡಿ ಭಾಗಗಳಿಂದ ದೆಹಲಿಯ ಹೆದ್ದಾರಿಗುಂಟ ರೈತರ ಟ್ರ್ಯಾಕ್ಟರ್ಗಳು ಹೊರಟಿವೆ.
ಇದು ಗಣರಾಜ್ಯೋತ್ಸವದಂದು ನಡೆಯಲಿರುವ ಟ್ರ್ಯಾಕ್ಟರ್ ಪರೇಡ್ನ ತಾಲೀಮು ಎಂದು ಭಾವಿಸಬಹುದು. ಹರಿಯಾಣ- ಪಂಜಾಬ್ನಿಂದ ಜನವರಿ 26ರಂದು ನಡೆಯಲಿರುವ ಮೆರವಣಿಗೆಯಲ್ಲಿ ಇನ್ನಷ್ಟು ಹೆಚ್ಚಿನ ಟ್ರ್ಯಾಕ್ಟರ್ಗಳು ಭಾಗವಹಿಸಲಿವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ಅಭಿಮನ್ಯು ಕೋಹರ್ ತಿಳಿಸಿದ್ದಾರೆ.
Farmers protesting against the three farm laws hold tractor rally at Burari in Delhi pic.twitter.com/UcnGSafiNH
— ANI (@ANI) January 7, 2021
ಟ್ರ್ಯಾಕ್ಟರ್ ಪೆರೇಡ್ಗೆ ಹರಿಯಾಣ ಯುವತಿಯರ ಸಿದ್ಧತೆ; ಗಣರಾಜ್ಯೋತ್ಸವದಂದು ಇವರೂ ದೆಹಲಿಗೆ ಧಾವಿಸಲಿದ್ದಾರೆ