ಕೇರಳದ ಮಾಜಿ ಸಚಿವ ಕೆ.ಕೆ. ರಾಮಚಂದ್ರನ್ ಮಾಸ್ಟರ್ ವಿಧಿವಶ
ಮಾಸ್ಟರ್ ಎಂದು ಜನಪ್ರಿಯವಾಗಿರುವ 78 ವರ್ಷದ ಕಾಂಗ್ರೆಸ್ ನಾಯಕ ಕೆ.ಕೆ. ರಾಮಚಂದ್ರನ್ರವರು ಆರು ಭಾರಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕಲ್ಪೆಟ್ಟಾದಿಂದ ಮೂರು ಬಾರಿ ಮತ್ತು ಸುಲ್ತಾನ್ ಬಾಥೆ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದರು.

ತಿರುವನಂತಪುರಂ: ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಕೆ.ಕೆ. ರಾಮಚಂದ್ರನ್ ಮಾಸ್ಟರ್ ಗುರುವಾರ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ.
ಮಾಸ್ಟರ್ ಎಂದು ಜನಪ್ರಿಯವಾಗಿರುವ 78 ವರ್ಷದ ಕಾಂಗ್ರೆಸ್ ನಾಯಕ ಕೆ.ಕೆ. ರಾಮಚಂದ್ರನ್ರವರು ಆರು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕಲ್ಪೆಟ್ಟಾದಿಂದ ಮೂರು ಬಾರಿ ಮತ್ತು ಸುಲ್ತಾನ್ ಬಾಥೆರಿ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದರು.
ಕಣ್ಣೂರು ಜಿಲ್ಲೆಯ ಕೂತ್ತುಪರಂಬಾ ಮೂಲದ ರಾಮಚಂದ್ರನ್ ಮಾಸ್ಟರ್ 1980ರಲ್ಲಿ ಶಿಕ್ಷಕ ಹುದ್ದೆಯನ್ನು ತ್ಯಜಿಸಿ, ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು.
1995 ರಿಂದ ಎ ಕೆ ಆಂಟನಿ ಸಚಿವಾಲಯದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು 2004 ರಿಂದ ಉಮ್ಮನ್ ಚಾಂಡಿ ಸಚಿವಾಲಯದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಕೆ.ಕೆ. ರಾಮಚಂದ್ರನ್ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದು, ಹಿರಿಯ ನಾಯಕನ ನಿಧನಕ್ಕೆ ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿಥಾಲಾ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದರು.
ಮಾಜಿ ಮುಖ್ಯಮಂತ್ರಿ ಎಸ್.ಆರ್. ಕಂಠಿ ಅವರ ಪತ್ನಿ, ಶತಾಯುಷಿ ಮರಿಬಸಮ್ಮ ವಿಧಿವಶ