AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯ ಬುರಾರಿ ಮೈದಾನ: ಆಗ ತೆರೆದ ಜೈಲು, ಈಗ ಕೃಷಿ ಭೂಮಿ

ದೆಹಲಿ ಚಲೋ ಆರಂಭವಾದಾಗ ಬುರಾರಿ ಮೈದಾನದಲ್ಲಿ ಪ್ರತಿಭಟನೆ ನಡೆಸುವಂತೆ ಕೇಂದ್ರ ಸರ್ಕಾರ ಪಂಜಾಬ್ ರೈತರ ಬಳಿ ಕೋರಿತ್ತು. ಒಂದೊಮ್ಮೆ ಬುರಾರಿಯಲ್ಲಿ ಎಲ್ಲ ರೈತರು ವಾಸ್ತವ್ಯ ಹೂಡಿದ್ದರೆ ಅದು ‘ತೆರೆದ ಜೈಲಾ’ಗಿ ಮಾರ್ಪಡುವ ಸಂಭವವಿತ್ತು. ನಂತರದ ದಿನಗಳಲ್ಲಿ ಕೆಲ ರೈತರಷ್ಟೇ ಬುರಾರಿಗೆ ತೆರಳಿದ್ದರು.

ದೆಹಲಿಯ ಬುರಾರಿ ಮೈದಾನ: ಆಗ ತೆರೆದ ಜೈಲು, ಈಗ ಕೃಷಿ ಭೂಮಿ
ಬುರಾರಿ ಮೈದಾನದಲ್ಲಿ ಕೃಷಿಯಲ್ಲಿ ನಿರತ ಪಂಜಾಬ್ ರೈತರು
guruganesh bhat
| Edited By: |

Updated on: Jan 07, 2021 | 3:48 PM

Share

ದೆಹಲಿ: ಒಮ್ಮೆ ತೆರೆದ ಕಾರಾಗೃಹವಾಗುವ ಸಂಭವವಿದ್ದ ರಾಷ್ಟ್ರ ರಾಜಧಾನಿಯ ಬುರಾರಿ ಮೈದಾನ ಈಗ ಕೃಷಿ ಭೂಮಿಯಂತೆ ಬದಲಾಗುತ್ತಿದೆ! ಪಂಜಾಬ್ ರೈತರು ಚಳುವಳಿ ಆರಂಭಿಸಿ ದೆಹಲಿಗೆ ತಲುಪಿದಾಗ ಕೇಂದ್ರ ಸರ್ಕಾರ ಬುರಾರಿ ಮೈದಾನದಲ್ಲಿ ಪ್ರತಿಭಟನೆ ನಡೆಸಲು ರೈತ ಒಕ್ಕೂಟಗಳ ಬಳಿ ಮನವಿ ಮಾಡಿತ್ತು. ಆದರೆ, ಅದಕ್ಕೊಪ್ಪದ ರೈತರು ದೆಹಲಿಯ ಗಡಿಭಾಗಗಳಲ್ಲೇ ವಾಸ್ತವ್ಯ ಹೂಡಿದ್ದರು. ಕೆಲ ರೈತರು ಮಾತ್ರ ದೆಹಲಿ ಪ್ರವೇಶಿಸಿ ಬುರಾರಿ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ಒಂದೊಮ್ಮೆ ಎಲ್ಲ ರೈತರೂ ಬುರಾರಿ ಮೈದಾನ ಪ್ರವೇಶಿಸಿ ಪ್ರತಿಭಟನೆ ನಡೆಸಿದ್ದರೆ ಬುರಾರಿ ಮೈದಾನ ತೆರೆದ ಜೈಲಾಗಿ ಪರಿವರ್ತನೆಯಾಗುವ ಸಂಭವವಿದೆ ಎಂದು ರೈತ ಒಕ್ಕೂಟಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ತಮ್ಮನ್ನು ಒಂದೆಡೆ ಕೂಡಿ ಹಾಕಲು ಕೇಂದ್ರ ಸರ್ಕಾರ ಬುರಾರಿ ಮೈದಾನದಲ್ಲಿ ಪ್ರತಿಭಟನೆ ಆಯೋಜಿಸಲು ತಿಳಿಸಿದೆ ಎಂದು ರೈತ ನಾಯಕರು ದೂರಿದ್ದವು. ಹೀಗಾಗಿ, ನಂತರದ ದಿನಗಳಲ್ಲಿ ಕೆಲ ರೈತರಷ್ಟೇ ಬುರಾರಿ ಮೈದಾನದಲ್ಲಿ ವಸತಿ ಹೂಡಿದ್ದರು.

ಆಗ ತೆರೆದ ಜೈಲು, ಈಗ ಕೃಷಿ ಭೂಮಿ! ಬುರಾರಿ ಮೈದಾನ ಇದೀಗ, ಪಂಜಾಬ್ ರೈತರಿಗೆ ಕೃಷಿ ಭೂಮಿಯಾಗಿದೆ. 60 ದಿನಗಳ ಬೆಳೆಯಾದ ಈರುಳ್ಳಿಯನ್ನು ಬೆಳೆದಿರುವ ರೈತ ಗುರುದೇವ್ ಸಿಂಗ್ ಬುರಾರಿಯ ನೆಲದಲ್ಲಿ ಬೆಳೆದಿದ್ದಾರೆ. ಈಗಾಗಲೇ ಈರುಳ್ಳಿ ಬೆಳೆದು 12 ದಿನಗಳಾಗಿದ್ದು, ನಾವು ನಮ್ಮ ಬೇಡಿಕೆ ಈಡೇರುವವರೆಗೂ ದೆಹಲಿ ಬಿಟ್ಟು ಕದಲುವುದಿಲ್ಲ ಎಂಬುದರ ಸಂಕೇತವಾಗಿದೆ ಎಂದು ಗುರುದೇವ್ ಸಿಂಗ್ ಅಭಿಪ್ರಾಯಪಡುತ್ತಾರೆ.

ಹತ್ತಿರದ ಕೃಷಿ ನರ್ಸರಿಯಿಂದ ಅಗತ್ಯ ಬೀಜಗಳನ್ನು ಖರೀದಿಸಿದ್ದೇವೆ. ಟೊಮೆಟೋ, ಈರುಳ್ಳಿ ಸೇರಿದಂತೆ ಕೆಲ ತರಕಾರಿಗಳನ್ನು ಬೆಳೆದಿದ್ದೇವೆ. ಹವಾಮಾನ ಸ್ವಲ್ಪ ಬೆಚ್ಚಗಾದಂತೆ ಭತ್ತ ಮತ್ತು ಇನ್ನಿತರ ತರಕಾರಿಗಳನ್ನು ಬೆಳೆಯಲಿದ್ದೇವೆ ಎಂದು ಫಿರೋಜ್​ಪುರದ ಜಸ್ಕರಣ್ ಸಿಂಗ್ ಕಹನ್ ವಿವರಿಸುತ್ತಾರೆ.

ಚಳುವಳಿ ನಿರತರಾದ ನಮಗೆ ಪಂಜಾಬ್​ ಅಥವಾ ಇತರ ಭಾಗಗಳಿಂದ ಆಹಾರ ಸಾಮಾಗ್ರಿಗಳು ಹೇರಳವಾಗಿ ಹರಿದುಬರುತ್ತಿದೆ. ಆದರೆ, ಸ್ವತಃ ನಾವೇ ನಮ್ಮ ಆಹಾರವನ್ನು ಬೆಳೆದುಕೊಳ್ಳಬೇಕು ಎಂಬ ಇಚ್ಛೆಯಿಂದ ಸ್ವತಃ ಕೃಷಿ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Follow Us
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು ಆರೋಪ!
ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು ಆರೋಪ!
ಬಿಯರ್ ಬಾಕ್ಸ್ ಲಾರಿ ಪಲ್ಟಿ, ಅಡಿಕೆ ತೋಟದಲ್ಲಿ ಬಿಯರ್ ಬಾಟಲಿಗಳ ಸುರಿಮಳೆ!
ಬಿಯರ್ ಬಾಕ್ಸ್ ಲಾರಿ ಪಲ್ಟಿ, ಅಡಿಕೆ ತೋಟದಲ್ಲಿ ಬಿಯರ್ ಬಾಟಲಿಗಳ ಸುರಿಮಳೆ!
ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ
ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ
ಚಹಾಲ್ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಂಡ ಉಲ್ಲು ನಟಿ ತಾನಿಯಾ
ಚಹಾಲ್ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಂಡ ಉಲ್ಲು ನಟಿ ತಾನಿಯಾ