Delhi Chalo: ರಾಷ್ಟ್ರ ರಾಜಧಾನಿಯ ಗಡಿ ಭಾಗಗಳಲ್ಲಿ ಟ್ರ್ಯಾಕ್ಟರ್ ಮೆರವಣಿಗೆಗೆ ಕ್ಷಣಗಣನೆ

|

Updated on: Jan 07, 2021 | 11:49 AM

ಜನವರಿ 26ರಂದು ಟ್ರ್ಯಾಕ್ಟರ್ ಪರೇಡ್ ನಡೆಸುವುದಾಗಿ ಘೋಷಿಸಿರುವ ರೈತ ಒಕ್ಕೂಟಗಳು ಇಂದು ದೆಹಲಿಯ ಗಡಿಭಾಗಗಳಲ್ಲಿ ತಾಲೀಮು ನಡೆಸಲಿವೆ. ಸಾವಿರಾರು ಟ್ರ್ಯಾಕ್ಟರ್​ಗಳು ರಾಜಧಾನಿಯ ಗಡಿಗಳಿಗೆ ಮುತ್ತಿಗೆ ಹಾಕುವ ನಿರೀಕ್ಷೆಯಿದೆ.

Delhi Chalo: ರಾಷ್ಟ್ರ ರಾಜಧಾನಿಯ ಗಡಿ ಭಾಗಗಳಲ್ಲಿ ಟ್ರ್ಯಾಕ್ಟರ್ ಮೆರವಣಿಗೆಗೆ ಕ್ಷಣಗಣನೆ
ಪಂಜಾಬ್​ ರೈತರ ಟ್ರ್ಯಾಕ್ಟರ್​ಗಳಲ್ಲಿ ದೆಹಲಿಗೆ ತೆರಳುತ್ತಿರುವುದು
Follow us on

ದೆಹಲಿ: ಪಂಜಾಬ್ ರೈತರ ಟ್ರ್ಯಾಕ್ಟರ್​ಗಳು ರಾಷ್ಟ್ರ ರಾಜಧಾನಿಯ ಗಡಿ  ಭಾಗಗಳಿಗೆ ಮುತ್ತಿಗೆ ಹಾಕಲು ಸಜ್ಜಾಗಿವೆ. ಘಾಜಿಪುರ ಗಡಿಯಲ್ಲಿ ರೈತರ ಸುಮಾರು 500 ಟ್ರ್ಯಾಕ್ಟರ್​ಗಳು ಪಲ್ವಾಲ್​ನತ್ತ ತೆರಳಲಿದ್ದು, ಪಲ್ವಾಲ್​ನಿಂದ ಘಾಜಿಪುರದತ್ತಲೂ ರೈತರು ಮೆರವಣಿಗೆ ಹೊರಡಲಿದ್ದಾರೆ. ಸಿಂಘು ಗಡಿಯಿಂದ ಸೋನಾಪತ್-ಘಾಜಿಯಾಬಾದ್-ನೋಯ್ಡಾಗಳಿಂದಲೂ ಘಾಜಿಪುರ್ ಗಡಿಯತ್ತ ರೈತರು ಟ್ರ್ಯಾಕ್ಟರ್​ಗಳಲ್ಲಿ ಧಾವಿಸಲಿದ್ದಾರೆ. 11 ಘಂಟೆಗೆ ಟಿಕ್ರಿ ಗಡಿಯಿಂದ ಸಿಂಘು ಗಡಿ ಭಾಗದತ್ತ ರೈತರು ಸಾಗಲಿದ್ದಾರೆ.

ನಾಳೆ ಕೇಂದ್ರ ಸರ್ಕಾರದ ಜೊತೆ 8ನೇ ಸುತ್ತಿನ ಸಭೆ ನಡೆಯಲಿದೆ. ಅದಕ್ಕೂ ಒಂದು ದಿನ ಮೊದಲೇ ನಡೆಸುತ್ತಿರುವ ಟ್ರ್ಯಾಕ್ಟರ್​ ಮೆರವಣಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿದೆ. ಜೊತೆಗೆ, ಜನವರಿ 26ರಂದು ದೆಹಲಿ ನಗರದಲ್ಲಿ ಟ್ರ್ಯಾಕ್ಟರ್​ ಮೆರವಣಿಗೆ ನಡೆಸುವುದಾಗಿ ರೈತ ಒಕ್ಕೂಟಗಳು ಘೋಷಿಸಿವೆ. ಇಂದಿನ ಟ್ರ್ಯಾಕ್ಟರ್ ಮೆರವಣಿಗೆ ಗಣರಾಜ್ಯೋತ್ಸವದ ದಿನದ ಟ್ರ್ಯಾಕ್ಟರ್ ಪರೇಡ್​ಗೆ ತಾಲೀಮು ಎಂದೇ ರೈತ ಒಕ್ಕೂಟಗಳು ಘೋಷಿಸಿವೆ.

 

Delhi Chalo | ಸರ್ಕಾರ-ರೈತರ ನಡುವಿನ 7ನೇ ಸುತ್ತಿನ ಸಭೆಯಲ್ಲಿ ನಡೆದ 5 ಮುಖ್ಯ ಬೆಳವಣಿಗೆಗಳು

Published On - 10:43 am, Thu, 7 January 21