ಭಾರತದ ಗಡಿಯಲ್ಲಿ ಟ್ಯಾಂಕ್ ನಿಯೋಜನೆ, ಸನ್ನದ್ಧ ಸ್ಥಿತಿಯಲ್ಲಿರಲು ಚೀನಾ ಸೇನೆಗೆ ಷಿ ಜಿನ್ಪಿಂಗ್ ಆದೇಶ
ಯಾವುದೇ ಕ್ಷಣದಲ್ಲೂ ಕಾರ್ಯಾಚರಣೆ ಆರಂಭಿಸಬಲ್ಲ ಸನ್ನದ್ಧ ಸ್ಥಿತಿಯಲ್ಲಿ ಪೀಪಲ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಇರಬೇಕು. ತಾಲೀಮಿನಲ್ಲಿ ತಂತ್ರಜ್ಞಾನದ ಬಳಕೆಯನ್ನು ಗಣನೀಯವಾಗಿ ಹೆಚ್ಚಿಸಬೇಕು ಎಂದು ಷಿ ಜಿನ್ಪಿಂಗ್ ಆದೇಶಿಸಿದ್ದಾರೆ.

ಬೀಜಿಂಗ್: ಕಳೆದ ವರ್ಷ ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದ್ದ ಚೀನಾ ನಂತರ ಸ್ವಲ್ಪ ಸುಮ್ಮನಾಗಿತ್ತು. ಆದರೆ, ಈಗ ಚೀನಾ ತನ್ನ ಕೊಂಕು ಬುದ್ಧಿಯನ್ನು ಮತ್ತೆ ತೋರಿಸಲು ಶುರು ಮಾಡಿದೆ. ಗಡಿ ಭಾಗದಲ್ಲಿ ಸದಾ ಸನ್ನದ್ಧರಾಗಿರುವಂತೆ ಅಲ್ಲಿನ ಅಧ್ಯಕ್ಷ ಷಿ ಜಿನ್ಪಿಂಗ್ ಸೇನೆಗೆ ಆದೇಶ ನೀಡಿದ್ದಾರೆ. ಇದು, ಮತ್ತೆ ಯುದ್ಧ ಭೀತಿಯನ್ನು ಸೃಷ್ಟಿಸಿದೆ.
ಯಾವುದೇ ಕ್ಷಣದಲ್ಲೂ ಕಾರ್ಯಾಚರಣೆ ಆರಂಭಿಸಬಲ್ಲ ಸನ್ನದ್ಧ ಸ್ಥಿತಿಯಲ್ಲಿ ಪೀಪಲ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಇರಬೇಕು. ತಾಲೀಮಿನಲ್ಲಿ ತಂತ್ರಜ್ಞಾನದ ಬಳಕೆಯನ್ನು ಗಣನೀಯವಾಗಿ ಹೆಚ್ಚಿಸಬೇಕು ಎಂದು ಷಿ ಜಿನ್ಪಿಂಗ್ ಆದೇಶಿಸಿದ್ದಾರೆ.
ಗಡಿಯಲ್ಲಿ ಸೇನೆ ನಿಯೋಜನೆ ವಾಸ್ತವ ಗಡಿರೇಖೆಯಲ್ಲಿ (ಎಲ್‌ಎಸಿ) ಉಂಟಾದ ಉದ್ವಿಗ್ನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಿರುವಾಗಲೇ, ಚೀನಾ ಭಾರತೀಯ ಪೋಸ್ಟ್‌ಗಳ ಮುಂದೆ ಟ್ಯಾಂಕರ್ ನಿಯೋಜಿಸಿದೆ. ರೆಜಾಂಗ್ ಲಾ, ರೆಚಿನ್ ಲಾ ಮತ್ತು ಮುಖೋಸ್ರಿ ಸ್ಥಳಗಳ ಚೀನಾ ಸೇನೆ ಕಾರ್ಯಪ್ರವೃತ್ತವಾಗಿದೆ.
ಈ ಭಾಗದಲ್ಲಿ 30-35 ಟ್ಯಾಂಕ್ ನಿಯೋಜನೆ ಮಾಡಲಾಗಿದೆ. ಈ ಟ್ಯಾಂಕ್‌ಗಳು ತುಂಬಾನೇ ಹಗುರವಾಗಿವೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿ ತಯಾರಿಸಲ್ಪಟ್ಟಿದೆ ಎಂದು ವರದಿಯಾಗಿದೆ. ಭಾರತೀಯ ಸೇನೆ ಕೂಡ ರೆಜಾಂಗ್ ಲಾ, ರೆಚಿನ್ ಲಾ ಮತ್ತು ಮುಖೋಸ್ರಿ ಬೆಟ್ಟಗಳಲ್ಲಿ ಟ್ಯಾಂಕ್‌ಗಳನ್ನು ನಿಯೋಜಿಸಿದೆ.
ಅಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಬಳಕೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಭಾರತೀಯ ಸೈನಿಕರ ವಿರುದ್ಧ ಅಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಬಳಸುವುದರ ಮೂಲಕ ವಾಸ್ತವ ಗಡಿರೇಖೆಯಲ್ಲಿ (ಎಲ್‌ಎಸಿ) ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿತ್ತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಪ್ರಮುಖ ಬೆಳವಣಿಗೆಗಳ ವರ್ಷಾಂತ್ಯದ ವಿಮರ್ಶೆಯಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಹೇಳಿದೆ.
ಬಳಸಿದ ಅಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಬಗ್ಗೆ ಸಚಿವಾಲಯವು ವಿಸ್ತಾರವಾಗಿ ಹೇಳಿಲ್ಲ. ಆದರೆ, ಕಳೆದ ವರ್ಷ ಪಂಗೊಂಗ್ ತ್ಸೋ ಮತ್ತು ಗಾಲ್ವಾನ್ ಕಣಿವೆಯಲ್ಲಿ ನಡೆದ ಮಾತಿನ ಚಕಮಕಿಯಲ್ಲಿ ಪಿಎಲ್‌ಎ ಪಡೆಗಳು ಭಾರತೀಯ ಸೈನಿಕರ ಮೇಲೆ ಕಲ್ಲು, ಕಬ್ಬಿಣದ ಕಡ್ಡಿಯಿಂದ ಹಲ್ಲೆ ಮಾಡಿದ್ದವು.
ಕಳೆದ ವರ್ಷ ನಡೆದಿತ್ತು ಘರ್ಷಣೆ ಕಳೆದ ವರ್ಷ ಜೂನ್ 15-16ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಪಡೆಗಳ ನಡುವೆ ತಿಕ್ಕಾಟ ನಡೆದಿತ್ತು. ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆಗೆ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಚೀನಾದ ಸೈನಿಕರು ಕೂಡ ಮೃತಪಟ್ಟ ಬಗ್ಗೆ ವರದಿಯಾಗಿತ್ತು. ಆದರೆ, ಚೀನಾದ ವಿದೇಶಾಂಗ ಸಚಿವಾಲಯವು ಸಾವು-ನೋವನ್ನು ಬಹಿರಂಗಪಡಿಸಲು ನಿರಾಕರಿಸಿತ್ತು.
ಪ್ಯಾಂಗೋಂಗ್ ಸರೋವರಕ್ಕೆ ಶೀಘ್ರದಲ್ಲೇ ಇಳಿಯಲಿವೆ ಭಾರತೀಯ ಸೇನೆಯ ಅತ್ಯುತ್ತಮ 12 ಗಸ್ತು ಬೋಟ್ಗಳು; ಚೀನಾಕ್ಕೆ ಸೆಡ್ಡು