ದೆಹಲಿ ನಿವಾಸಿಗಳಿಗೆ ಉಚಿತ ಪಡಿತರ; ಆಟೊ,ಟ್ಯಾಕ್ಸಿ ಚಾಲಕರಿಗೆ ₹5000 ಆರ್ಥಿಕ ನೆರವು: ಅರವಿಂದ್ ಕೇಜ್ರಿವಾಲ್ ಘೋಷಣೆ

|

Updated on: May 04, 2021 | 2:29 PM

Arvind Kejriwal: ಕೊವಿಡ್ ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ನಿಯಂತ್ರಣ ಹೇರಲಾಗಿದೆ. ಇದರರ್ಥ ಇನ್ನೆರಡು ತಿಂಗಳು ಲಾಕ್​ಡೌನ್ ಮುಂದುರಿಯುತ್ತದೆ ಎಂದಲ್ಲ. ಆರ್ಥಿಕ ಸಮಸ್ಯೆ ಇರುವ ಬಡಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ ಕೇಜ್ರಿವಾಲ್.

ದೆಹಲಿ ನಿವಾಸಿಗಳಿಗೆ ಉಚಿತ ಪಡಿತರ; ಆಟೊ,ಟ್ಯಾಕ್ಸಿ ಚಾಲಕರಿಗೆ ₹5000 ಆರ್ಥಿಕ ನೆರವು: ಅರವಿಂದ್ ಕೇಜ್ರಿವಾಲ್ ಘೋಷಣೆ
ಅರವಿಂದ್ ಕೇಜ್ರಿವಾಲ್
Follow us on

ದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ವಾಸಿಸುತ್ತಿರುವ ಪಡಿತರ ಚೀಟಿ ಹೊಂದಿರುವ ಎಲ್ಲ ನಾಗರಿಕರಿಗೆ ಉಚಿತ ಪಡಿತರ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಘೋಷಿಸಿದ್ದಾರೆ. ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿದವರ ಸಂಖ್ಯೆ 72 ಲಕ್ಷ ಇದೆ ಎಂದು ಹೇಳಿದ ಕೇಜ್ರಿಲಾಲ್ ಮುಂದಿನ ಎರಡು ತಿಂಗಳುಗಳ ಕಾಲ ಇವರಿಗೆ ಉಚಿತ ಪಡಿತರ ನೀಡಲಾಗುವುದು ಎಂದಿದ್ದಾರೆ.

ಕೊವಿಡ್ ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ನಿಯಂತ್ರಣ ಹೇರಲಾಗಿದೆ. ಇದರರ್ಥ ಇನ್ನೆರಡು ತಿಂಗಳು ಲಾಕ್​ಡೌನ್ ಮುಂದುರಿಯುತ್ತದೆ ಎಂದಲ್ಲ. ಆರ್ಥಿಕ ಸಮಸ್ಯೆ ಇರುವ ಬಡಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ ಕೇಜ್ರಿವಾಲ್.

ಏಪ್ರಿಲ್ 19ರಿಂದ ದೆಹಲಿಯಲ್ಲಿ ಲಾಕ್​ಡೌನ್  ಜಾರಿಯಾಗಿದ್ದು, ಲಾಕ್​ಡೌನ್​ನಿಂದ ಸಂಕಷ್ಟಕ್ಕೊಳಗಾಗಿರುವ ಆಟೊ ಮತ್ತು ರಿಕ್ಷಾ ಚಾಲಕರಿಗೆ 5,000 ನಗದು ಆರ್ಥಿಕ ನೆರವು ನೀಡುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಮನೀಶ್ ಸಿಸೊಡಿಯಾ, ಪ್ರಧಾನ ಕಾರ್ಯದರ್ಶಿ ಮತ್ತು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಜತೆ ಕೊವಿಡ್ -19 ಅವಲೋಕನ ಸಭೆ ನಡೆಸಿದ ನಂತರ ಕೇಜ್ರಿವಾಲ್ ಈ ನಿರ್ಧಾರ ಪ್ರಕಟಿಸಿದ್ದಾರೆ.

ಸಭೆಯಲ್ಲಿ ಕೇಜ್ರಿವಾಲ್ ಅವರು ಹೋಮ್ ಐಸೋಲೇಷನ್ ವ್ಯವಸ್ಥೆಯನ್ನು ಬಲಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದಾಗಿ ರೋಗಿಗಳು ಸಮಯೋಚಿತ ಸಮಾಲೋಚನೆಯೊಂದಿಗೆ ಉತ್ತಮ ಚಿಕಿತ್ಸೆಯನ್ನು ಪಡೆಯಬಹುದು ಮತ್ತು ಹೋಮ್ ಐಸೋಲೇಷನ್ ನಲ್ಲಿದ್ದು ಚಿಕಿತ್ಸೆಗೆ ಒಳಗಾಗುವ ರೋಗಿಗಳೊಂದಿಗೆ ಸಂಪರ್ಕದಲ್ಲಿರಿ ಎಂದಿದ್ದಾರೆ.


ಎಷ್ಟು ಮಂದಿ ಕೊವಿಡ್ ರೋಗಿಗಳು ಆಸ್ಪತ್ರೆಗೆ ಹೋಗುತ್ತಿದ್ದಾರೆ ಮತ್ತು ಎಷ್ಟು ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟ ದಾಖಲೆಯನ್ನು ಇರಬೇಕು ಎಂದು ಹೇಳಿದರು.
ದೆಹಲಿಯ ಕೊವಿಡ್ ನಾಲ್ಕನೇ ಅಲೆಯಿಂದ ತತ್ತರಿಸಿದೆ ಇದು ಈಗಾಗಲೇ ಹೊರೆಯಾಗಿರುವ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಕಂಗಾಲಾಗಿಸಿದೆ . ಹಾಸಿಗೆಗಳು, ವೆಂಟಿಲೇಟರ್‌ಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳ ಕೊರತೆಯಿಂದ ರೋಗಿಗಳು ಸಂಕಷ್ಟಕ್ಕೀಡಾಗಿದ್ದಾರೆ . ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಒಬ್ಬ ವ್ಯಕ್ತಿಯು ತಮ್ಮ ಮನೆಯಲ್ಲಿ ಕೊವಿಡ್ -19 ಪರೀಕ್ಷೆಯನ್ನು ಮಾಡಲು ಬಯಸಿದರೆ ಸುಮಾರು 7 ದಿನಗಳ ಕಾಲ ಕಾಯಬೇಕಾಗುತ್ತದೆ.

ಕಳೆದ 24 ಗಂಟೆಗಳಲ್ಲಿ 18,043 ಹೊಸ ಕೊರೊನಾವೈರಸ್ ಪ್ರಕರಣಗಳು ದಾಖಲಾಗಿದ್ದು 448 ಸಾವುಗಳು ಸಂಭವಿಸಿವೆ ಎಂದು ದೆಹಲಿಯ ಆರೋಗ್ಯ ಬುಲೆಟಿನ್ ಮಾಹಿತಿ ನೀಡಿದೆ.

ಕಳೆದ ವರ್ಷ ಸಾಂಕ್ರಾಮಿಕ ರೋಗ ಸಂಭವಿಸಿದ ನಂತರ ನಗರದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದ ದಿನವಾಗಿಗೆ . ನಗರದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು ಈಗ 89,592 ರಷ್ಟಿದೆ.ಸಕ್ರಿಯ ಪ್ರಕರಣಗಳು ಈಗ 12,12,989 ರಷ್ಟಿದ್ದು, ಇದರಲ್ಲಿ 11,05,983 ಚೇತರಿಸಿಕೊಂಡಿದ್ದಾರೆ. ಒಟ್ಟು 17,414 ಮಂದಿ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: ಜನ ಜೀವ ಕಳೆದುಕೊಳ್ಳದಿರುವುದು ಮುಖ್ಯ; ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ತಪರಾಕಿ

Published On - 2:11 pm, Tue, 4 May 21