ದೆಹಲಿ ಮದ್ಯ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್‌ಗೆ 6ನೇ ಬಾರಿಗೆ ಇಡಿ ಸಮನ್ಸ್

|

Updated on: Feb 14, 2024 | 8:42 PM

2024ರ ಲೋಕಸಭಾ ಚುನಾವಣೆಗೆ ಮುನ್ನವೇ ಬಿಜೆಪಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಸುತ್ತಿದೆ ಎಂದು ಹೇಳುವ ಮೂಲಕ ಎಎಪಿ ಈ ಆದೇಶವನ್ನು ಸ್ವಾಗತಿಸಿದೆ. ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಪಕ್ಷದ ಮೂಲಗಳು "ಸಮನ್ಸ್‌ಗಳು ಹೇಗೆ ಕಾನೂನುಬಾಹಿರವೆಂದು ನಾವು ನ್ಯಾಯಾಲಯಕ್ಕೆ ತಿಳಿಸುತ್ತೇವೆ" ಎಂದಿವೆ.

ದೆಹಲಿ ಮದ್ಯ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್‌ಗೆ 6ನೇ ಬಾರಿಗೆ ಇಡಿ ಸಮನ್ಸ್
ಅರವಿಂದ್ ಕೇಜ್ರಿವಾಲ್
Follow us on

ದೆಹಲಿ ಫೆಬ್ರುವರಿ 14 : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಜಾರಿ ನಿರ್ದೇಶನಾಲಯ(Enforcement Directorate) ಆರನೇ ಬಾರಿ ಸಮನ್ಸ್ ನೀಡಿದೆ. ದೆಹಲಿಯಲ್ಲಿ ಮದ್ಯ ನೀತಿ ಪ್ರಕರಣಕ್ಕೆ (liquor excise policy) ಸಂಬಂಧಿಸಿದಂತೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಹೇಳಲಾಗಿದೆ. ಕೇಜ್ರಿವಾಲ್ ಅವರು ಈ ಹಿಂದಿನ ಐದು ಸಮನ್ಸ್‌ಗಳಿಗೆ ಗೈರಾಗಿದ್ದು, ತನಿಖಾ ಸಂಸ್ಥೆಗಳು ಇದನ್ನು ಕಾನೂನು ಮೂಲಕ ಎದುರಿಸುವುದಾಗಿ ಹೇಳಿವೆ. ಅಕ್ರಮ ಹಣ ವ್ಯವಹಾರ ಆರೋಪಗಳ ತನಿಖೆಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಕೇಜ್ರಿವಾಲ್ ಅವರನ್ನು ಶನಿವಾರ ಹಾಜರಾಗುವಂತೆ ನಿರ್ದೇಶಿಸಿದ ಒಂದು ವಾರದ ನಂತರ ಇಡಿಯಿಂದ ಆರನೇ ಸಮನ್ಸ್ ಬಂದಿದೆ. ಕೇಜ್ರಿವಾಲ್ ಸಮನ್ಸ್‌ಗಳಿಗೆ ಯಾಕೆ ಗೈರಾಗುತ್ತಿದ್ದಾರೆ ಎಂದು ನ್ಯಾಯಾಲಯ ವಿವರಣೆ ಕೇಳಿದೆ.

2024ರ ಲೋಕಸಭಾ ಚುನಾವಣೆಗೆ ಮುನ್ನವೇ ಕೇಜ್ರಿವಾಲ್ ಅವರನ್ನು ಬಿಜೆಪಿ ಗುರಿಯಾಗಿಸುತ್ತಿದೆ ಎಂದು ಹೇಳುವ ಮೂಲಕ ಎಎಪಿ ಈ ಆದೇಶವನ್ನು ಸ್ವಾಗತಿಸಿದೆ. ಈ ಬಗ್ಗೆ ಎನ್‌ಡಿಟಿವಿ ಜತೆ ಮಾತನಾಡಿದ ಪಕ್ಷದ ಮೂಲಗಳು “ಸಮನ್ಸ್‌ಗಳು ಹೇಗೆ ಕಾನೂನುಬಾಹಿರವೆಂದು ನಾವು ನ್ಯಾಯಾಲಯಕ್ಕೆ ತಿಳಿಸುತ್ತೇವೆ” ಎಂದಿವೆ.

ಕೇಜ್ರಿವಾಲ್ ಫೆಬ್ರವರಿ 2 ರಂದು ಐದನೇ ಸಮನ್ಸ್ ಅನ್ನು ನಿರಾಕರಿಸಿದರು. ಅವರು ಜನವರಿ 31 ರಂದು ಇನ್ನೊಂದನ್ನು ಬಿಟ್ಟುಬಿಟ್ಟರು. ಇದಕ್ಕಿಂತ ಮುಂಚೆ ಜನವರಿ 19, ಡಿಸೆಂಬರ್ 21 ಮತ್ತು ನವೆಂಬರ್ 2 ರಂದು ನೀಡಲಾದ ಸಮನ್ಸ್ ಗೂ ಗೈರಾಗಿದ್ದರು. ಎಎಪಿ ನಾಯಕರು ಮಧ್ಯಪ್ರದೇಶ ಚುನಾವಣೆಗೆ ಪ್ರಚಾರ ಸೇರಿದಂತೆ ವಿವಿಧ ಕಾರಣಗಳನ್ನು ಉಲ್ಲೇಖಿಸಿ ಸಮನ್ಸ್ ಗೆ ಗೈರಾಗಿರುವುದಾಗಿ ಹೇಳಿದ್ದಾರೆ.

ಕೇಜ್ರಿವಾಲ್ ಅವರನ್ನು ಏಪ್ರಿಲ್ ನಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ವಿಚಾರಣೆಗೊಳಪಡಿಸಿದ್ದು ಅವರು ಇಲ್ಲಿಯವರೆಗೆ ಆರೋಪಿ ಅಲ್ಲ. “ಸಿಬಿಐ 56 ಪ್ರಶ್ನೆಗಳನ್ನು ಕೇಳಿದೆ (ಆದರೆ) ಎಲ್ಲವೂ ನಕಲಿ. ಅವರ ಬಳಿ ಒಂದೇ ಒಂದು ಪುರಾವೆ ಇಲ್ಲ ಎಂದು ನನಗೆ ಮನವರಿಕೆಯಾಗಿದೆ” ಎಂದಿದ್ದಾರೆ ಕೇಜ್ರಿವಾಲ್.

ಆದಾಗ್ಯೂ, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಇಬ್ಬರು ಹಿರಿಯ ಎಎಪಿ ಸದಸ್ಯರನ್ನು ಬಂಧಿಸಲಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಸಿಸೋಡಿಯಾ ಮತ್ತು ಅಕ್ಟೋಬರ್‌ನಲ್ಲಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಲಾಗಿತ್ತು.

ಈ ಪ್ರಕರಣವು ದೆಹಲಿ ಮತ್ತು ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಎಎಪಿ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಡುವೆ ತೀವ್ರ ಜಗಳವನ್ನು ಉಂಟುಮಾಡಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮಜಾ ಮಾಡಿ ಮೋದಿ ಬಳಿ ಹೋಗಿ ಹಣ ಕೇಳುತ್ತಿದ್ದಾರೆ: ಶಿವಮೊಗ್ಗದಲ್ಲಿ ಸಿಎಂ ವಿರುದ್ಧ ಶಾಸಕ ಬಸನಗೌಡ ಯತ್ನಾಳ್ ವಾಗ್ದಾಳಿ

ಕಳೆದ ವಾರ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ವ್ಯಕ್ತಿ – ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತನಾಗಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ”ತನಗೆ ಸಮನ್ಸ್ ನೀಡಿದಷ್ಟು ಶಾಲೆಗಳನ್ನು ನಗರದಲ್ಲಿ ತೆರೆಯುತ್ತೇನೆ. ನೀವು ನಿಮ್ಮ ಧರ್ಮವನ್ನು ಮಾಡಿ, ನಾವು ನಮ್ಮದನ್ನು ಮಾಡುತ್ತೇವೆ” ಎಂದು ತಿರುಗೇಟು ನೀಡಿದ್ದರು.
ಎಎಪಿ ಸದಸ್ಯರ ಮನೆಗಳ ಮೇಲೆ ದಾಳಿ ನಡೆಸಿದ ನಂತರ ಇಡಿಯನ್ನು ಟೀಕಿಸಿದ ದೆಹಲಿ ಸಚಿವೆ ಅತಿಶಿ, ಕೇಂದ್ರವು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪಕ್ಷವನ್ನು “ಹೆದರಿಸಲು ಮತ್ತು ಮೌನಗೊಳಿಸಲು” ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಏನಿದು ದೆಹಲಿ ಮದ್ಯದ ಅಬಕಾರಿ ನೀತಿ ಪ್ರಕರಣ?

ಎಎಪಿ ಸರಕಾರದ ಪರಿಷ್ಕೃತ ಮದ್ಯ ಮಾರಾಟ ನೀತಿಯು ಕಾರ್ಟೆಲ್‌ಗಳಿಂದ ಕೋಟಿಗಟ್ಟಲೆ ಕಿಕ್‌ಬ್ಯಾಕ್‌ಗಳನ್ನು ಸ್ವೀಕರಿಸಲು ಅವಕಾಶ ಮಾಡಿಕೊಟ್ಟಿದೆ ಮತ್ತು ಈ ಹಣವನ್ನು ಗೋವಾ ಮತ್ತು ಇತರ ರಾಜ್ಯಗಳಲ್ಲಿ ಚುನಾವಣಾ ವೆಚ್ಚಗಳಿಗೆ ಧನಸಹಾಯಕ್ಕಾಗಿ ಬಳಸಲಾಗಿದೆ ಎಂಬ ಆರೋಪ ಮಾಡಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ಇಡಿ ಮತ್ತು ಸಿಬಿಐ, ಈ ಎರಡೂ ನೀತಿಯು ಕಾರ್ಟೆಲೈಸೇಶನ್ ಅನ್ನು ಅನುಮತಿಸಿದೆ. ಮದ್ಯ ಮಾರಾಟ ಪರವಾನಗಿಗಾಗಿ ಲಂಚವನ್ನು ನೀಡಿದ ಕೆಲವು ಡೀಲರ್‌ಗಳಿಗೆ ಅನುಕೂಲಕರವಾಗಿದೆ ಎಂದು ಆರೋಪಿಸಿದೆ.

ಎಎಪಿ ಎಲ್ಲಾ ಆರೋಪಗಳನ್ನು ಬಲವಾಗಿ ನಿರಾಕರಿಸಿದೆ. ದೆಹಲಿ ಸರ್ಕಾರವು ನೀತಿಯಿಂದ ಆದಾಯದಲ್ಲಿ ಶೇಕಡಾ 27 ರಷ್ಟು ಹೆಚ್ಚಳವನ್ನು ವರದಿ ಮಾಡಿದೆ ಮತ್ತು ₹ 8,900 ಕೋಟಿ ಆದಾಯವನ್ನು ಗಳಿಸಿದೆ. ಬಿಜೆಪಿಯು ತನ್ನನ್ನು ಗುರಿಯಾಗಿಸಲು ಸಂಸ್ಥೆಯನ್ನು ಕುಶಲತೆಯಿಂದ ಬಳಸುತ್ತಿದೆ ಎಂದು ಪಕ್ಷವು ಆರೋಪಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:41 pm, Wed, 14 February 24