ಕೊಲ್ಕತ್ತಾ ಫೆಬ್ರುವರಿ 14: ಪೊಲೀಸರು ಮತ್ತು ಪಕ್ಷದ ಕಾರ್ಯಕರ್ತರ ನಡುವೆ ಸಂಘರ್ಷವೇರ್ಪಟ್ಟಾಗ ನಡೆದ ಪೊಲೀಸ್ ಲಾಠಿ ಚಾರ್ಜ್‌ನಲ್ಲಿ ಗಾಯಗೊಂಡ ಪಶ್ಚಿಮ ಬಂಗಾಳದ (West Bengal) ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ (Sukanta Majumdar) ಅವರನ್ನು ಬುಧವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲು ಬಸಿರ್‌ಹತ್ ಮಲ್ಟಿ ಫೆಸಿಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಕೊಲ್ಕತ್ತಾದಲ್ಲಿರುವ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿಯಲ್ಲಿ (Sandeshkhali) ಬಿಜೆಪಿ ಪ್ರತಿಭಟನೆ ವೇಳೆ ಲಾಠಿಚಾರ್ಜ್ ನಡೆದಿದೆ.ಸಂದೇಶಖಾಲಿಯಲ್ಲಿ ಮಹಿಳೆಯರು ಟಿಎಂಸಿ ನಾಯಕ ಶಾಜಹಾನ್ ಶೇಖ್ ಮತ್ತು ಅವರ ಸಹಾಯಕರು ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಕಳೆದ ಕೆಲವು ದಿನಗಳಿಂದ ಆಂದೋಲನ ನಡೆಸುತ್ತಿದ್ದಾರೆ.
ಕಾರಿನಿಂದ ಬಿದ್ದು ಸುಕಾಂತ ಮಜುಂದಾರ್ ಗಾಯಗೊಂಡರು. ತಕ್ಷಣವೇ ಭದ್ರತಾ ಸಿಬ್ಬಂದಿ ಲಾಠಿ ಚಾರ್ಜ್ ಮಾಡಿದರು ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಉತ್ತರ 24 ಪರಗಣ ಜಿಲ್ಲೆಯ ಅಶಾಂತಿ ಪೀಡಿತ ಸಂದೇಶ್‌ಖಾಲಿಗೆ ಮಜುಂದಾರ್ ಭೇಟಿ ನೀಡುವುದನ್ನು ಪಶ್ಚಿಮ ಬಂಗಾಳ ಪೊಲೀಸರು ತಡೆಯುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಹೇಳಿದ್ದಾರೆ. “ಟಿಎಂಸಿ ಎಂದರೆ ತೃಣಮೂಲ ಕಾಂಗ್ರೆಸ್ ಅಲ್ಲ ತಾಲಿಬಾನ್ ಮಾನಸಿಕ್ತಾ ಸಂಸ್ಕೃತಿ. ಒಂದೆಡೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾ ಮಾಟಿ ಮಾನುಷ್ ಬಗ್ಗೆ ಮಾತನಾಡುತ್ತಿದ್ದರೆ, ಇನ್ನೊಂದೆಡೆ ರಾಜ್ಯ ಬಂದ್, ಬಲಾತ್ಕಾರಿ, ಬಾಂಬ್’ ಆಗಿದೆ. ಷಹಜಹಾನ್ ಶೇಖ್ ಮಕ್ತವಾಗಿ ತಿರುಗಾಡುತ್ತಿದ್ದಾರೆ ಎಂದು ಪೂನಾವಾಲಾ ಹೇಳಿದ್ದಾರೆ.
#WATCH | West Bengal | State BJP president Sukanta Majumdar shifted to Apollo Hospital in Kolkata.
Mazumdar was admitted to Basirhat multi-facility hospital after he was injured during a police lathi charge as a scuffle broke out between Police and party workers, in Basirhat. pic.twitter.com/GYoMuAhuLV
— ANI (@ANI) February 14, 2024
ಮಂಗಳವಾರ, ಬಸಿರ್‌ಹತ್‌ನಲ್ಲಿರುವ ಎಸ್‌ಪಿ ಕಚೇರಿಯ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಸೆಕ್ಷನ್ 144 ರ ಅಡಿಯಲ್ಲಿ ಬೆಳಿಗ್ಗೆ 6 ಮತ್ತು ಸಂಜೆ 6 ರಿಂದ ಆದೇಶಗಳನ್ನು ಜಾರಿಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಸಿರ್‌ಹತ್‌ನಲ್ಲಿರುವ ಎಸ್‌ಪಿ ಕಚೇರಿಯ ಹೊರಗೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂದೇಶಖಾಲಿ ಬಸಿರ್ಹತ್ ಪೊಲೀಸ್ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದೆ.
ಪ್ರತಿಭಟನಕಾರರು ಶೇಖ್ ಮತ್ತು ಅವರ “ಗ್ಯಾಂಗ್” ಪ್ರದೇಶದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವುದರ ಜೊತೆಗೆ ಬಲವಂತವಾಗಿ ಭೂಮಿಯನ್ನು ವಶಪಡಿಸಿಕೊಂಡರು ಎಂದು ಹೇಳುತ್ತಾರೆ. ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಸಂದೇಶಖಾಲಿಯಲ್ಲಿರುವ ಅವರ ಮನೆ ಮೇಲೆ ದಾಳಿ ನಡೆಸಲು ಹೋದ ಜಾರಿ ನಿರ್ದೇಶನಾಲಯದ (ಇಡಿ) ತಂಡ ಕಳೆದ ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಶೇಖ್ ಮೇಲೆ ಗುಂಪೊಂದು ದಾಳಿ ನಡೆಸಿತ್ತು.
ಇದನ್ನೂ ಓದಿ: 25 ವರ್ಷಗಳ ಕಾಲ ಲೋಕಸಭಾ ಸಂಸದೆ ಆಗಿದ್ದ ಸೋನಿಯಾ ಗಾಂಧಿ ಇನ್ನು ರಾಜ್ಯಸಭೆಗೆ, ಕಾಂಗ್ರೆಸ್ನಲ್ಲಿ ಮಹತ್ತರ ಬದಲಾವಣೆ
ಪಕ್ಷದ ನಿಯೋಗ ರೈಲಿನಲ್ಲಿ ಬಸಿರ್‌ಹತ್‌ಗೆ ಪ್ರಯಾಣಿಸಲಿದೆ ಎಂದು ಸುಕಾಂತ ಮಜುಂದಾರ್ ಮಂಗಳವಾರ ಹೇಳಿದ್ದರು “ನಾವು ಬಸಿರ್‌ಹತ್‌ಗೆ ತಲುಪುತ್ತೇವೆ, ಎಸ್‌ಪಿಯನ್ನು ಭೇಟಿ ಮಾಡಿ ಸಂದೇಶಖಾಲಿ ಅಭಿವೃದ್ಧಿಯ ಕುರಿತು ಅವರನ್ನು ಪ್ರಶ್ನಿಸುತ್ತೇವೆ. ನಾವು ತಪ್ಪಿತಸ್ಥರಿಗೆ ಶಿಕ್ಷೆಗೆ ಒತ್ತಾಯಿಸುತ್ತೇವೆ” ಎಂದು ಅವರು ಹೃದಯಪುರ ರೈಲು ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದ್ದಾರೆ. “ನಾವು ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಒಡೆಯಬಹುದಿತ್ತು, ಆದರೆ ನಮ್ಮ ಪಕ್ಷ ಅದನ್ನು ಮಾಡುವುದಿಲ್ಲ ನಾವು ಸ್ಥಳೀಯರಿಗೆ ಅನಾನುಕೂಲತೆಯನ್ನುಂಟುಮಾಡಲು ಬಯಸುವುದಿಲ್ಲ” ಎಂದು ರೈಲಿನಲ್ಲಿ ಪ್ರಯಾಣಿಸುವ ನಿರ್ಧಾರದ ಬಗ್ಗೆ ಕೇಳಿದಾಗ ಮಜುಂದಾರ್ ಹೇಳಿದರು.
ಸೋಮವಾರ, ಬಿಜೆಪಿಯ ಹಿರಿಯ ನಾಯಕ ಸುವೇಂದು ಅಧಿಕಾರಿ ಮತ್ತು ಪಕ್ಷದ ಹಲವಾರು ಶಾಸಕರು ಸಂದೇಶಖಾಲಿಗೆ ಭೇಟಿ ನೀಡುವುದನ್ನು ತಡೆಯಲಾಯಿತು. ಕಾಂಗ್ರೆಸ್ ನಿಯೋಗ ಕೂಡ ಮಂಗಳವಾರ ಸಮಸ್ಯೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡದಂತೆ ತಡೆಯಲಾಗಿದೆ ಎಂದು ವರದಿಯಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ