ಭಾರತವನ್ನು ನಂಬರ್1 ಮಾಡುವ ರಾಷ್ಟ್ರೀಯ ಮಿಷನ್; ಮಿಸ್ಡ್ ಕಾಲ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್
Arvind Kejriwal ಸಿಬಿಐ ದಾಳಿ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಅವರು ಅವರ ಕೆಲಸ ಮಾಡಲಿ. ನಮಗೆ ಕಿರುಕುಳ ನೀಡಲು ಅವರಿಗೆ ಮೇಲಿನಿಂದ ಆದೇಶ ಬಂದಿರುತ್ತದೆ. ನಮ್ಮ ಒಳ್ಳೆಯ ಕೆಲಸವನ್ನು ಜಗತ್ತೇ ಹೊಗಳುತ್ತಿರುವಾಗ ಕೇಂದ್ರ ಸರ್ಕಾರ ನಮ್ಮನ್ನು
ದೆಹಲಿ: ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರ ಮನೆ ಮೇಲೆ ಶುಕ್ರವಾರ ಸಿಬಿಐ (CBI) ದಾಳಿ ಮಾಡಿದ್ದು, ಇದರ ಬೆನ್ನಲ್ಲೇ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ (Arvind Kejriwal) ಮಿಲ್ಡ್ ಕಾಲ್ ಅಭಿಯಾನ ಆರಂಭಿಸಿದ್ದಾರೆ. ಭಾರತವನ್ನು ನಂಬರ್ 1 ಮಾಡಲು ರಾಷ್ಟ್ರೀಯ ಮಿಷನ್ ಗೆ ಕೈ ಜೋಡಿಸಿ, 9510001000 ಎಂಬ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ. ಭಾರತವನ್ನು ಅಗ್ರ ಸ್ಥಾನಕ್ಕೇರಿಸೋಣ ಎಂದು ವಿಡಿಯೊ ಸಂದೇಶ ನೀಡಿದ ಕೇಜ್ರಿವಾಲ್ ಹೇಳಿದ್ದಾರೆ. ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ ನಡೆದ ಕೆಲವು ಗಂಟೆಗಳ ನಂತರ ವಿಡಿಯೊ ಸಂವಾದದಲ್ಲಿ ಕೇಜ್ರಿವಾಲ್ ಮಾತನಾಡಿದ್ದಾರೆ. ಸಿಬಿಐ ದಾಳಿ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಅವರು ಅವರ ಕೆಲಸ ಮಾಡಲಿ. ನಮಗೆ ಕಿರುಕುಳ ನೀಡಲು ಅವರಿಗೆ ಮೇಲಿನಿಂದ ಆದೇಶ ಬಂದಿರುತ್ತದೆ. ನಮ್ಮ ಒಳ್ಳೆಯ ಕೆಲಸವನ್ನು ಜಗತ್ತೇ ಹೊಗಳುತ್ತಿರುವಾಗ ಕೇಂದ್ರ ಸರ್ಕಾರ ನಮ್ಮನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿ ಸಿಸೋಡಿಯಾ ಅವರು ಮಾಡಿದ ಶಿಕ್ಷಣದ ಮಾದರಿಯನ್ನು ಹೊಗಳಿ ನ್ಯೂಯಾರ್ಕ್ ಟೈಮ್ಸ್ ಮುಖಪುಟದಲ್ಲಿ ವರದಿ ಪ್ರಕಟಿದೆ. ಇದನ್ನು ತೋರಿಸಿ ಮಾತನಾಡಿದ ಕೇಜ್ರಿವಾಲ್, ಅಡೆತಡೆಗಳಿವೆ, ಆದರೆ ನಮ್ಮ ಕೆಲಸ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ .
ಜಗತ್ತಿನಲ್ಲೇ ಉತ್ತಮ ಶಿಕ್ಷಣ ಸಚಿವರು ಎಂದು ಸಿಸೋಡಿಯಾ ಅವರನ್ನು ಘೋಷಿಸಲಾಗಿದೆ. ಖ್ಯಾತ ಸುದ್ದಿಪತ್ರಿಕೆ ದೆಹಲಿಯ ಶಿಕ್ಷಣ ಕ್ರಾಂತಿ ಬಗ್ಗೆ ವರದಿ ಮಾಡಿದ್ದು ಸಿಸೋಡಿಯಾ ಅವರ ಫೋಟೊವನ್ನೂ ಪ್ರಕಟಿಸಿದೆ. ಕಳೆದ ವರ್ಷ ನ್ಯೂಯರ್ಕ್ ಟೈಮ್ಸ್ ನಲ್ಲಿ ಕೊವಿಡ್ನಿಂದಾಗಿ ಜನರು ಸಾಯುತ್ತಿರುವ ಬಗ್ಗೆ ಸುದ್ದಿಯಾಗಿತ್ತು ಎಂದು ಕೇಜ್ರಿವಾಲ್ ಹೇಳಿದ್ದಾರೆ.
भारत को दुनिया का नम्बर वन देश बनाने के लिए साथ आयें। इस मिशन से जुड़ने के लिए 9510001000 पर मिस कॉल करें। हमें देश के 130 करोड़ लोगों को जोड़ना है।
— Arvind Kejriwal (@ArvindKejriwal) August 19, 2022
ಕೈಲಾಶ್ ಗೆಹ್ಲೋಟ್ ಮತ್ತು ಸತ್ಯೇಂದರ್ ಜೈನ್ ಮೊದಲಾದ ಸಚಿವರ ಮೇಲೂ ದಾಳಿ ನಡೆದಿತ್ತು. ಆದರೆ ಏನೂ ಸಿಕ್ಕಿಲ್ಲ ಎಂದಿದ್ದಾರೆ ದೆಹಲಿ ಸಿಎಂ. ನಮ್ಮ ಮಿಷನ್ನ ದಾರಿಯಲ್ಲಿ ಹಲವಾರು ಅಡಚಣೆಗಳನ್ನು ಮಾಡಲಾಗಿದ. ಸಿಸೋಡಿಯಾ ಅವರ ಮೇಲೆ ಇದೇ ಮೊದಲ ಬಾರಿ ನಡೆದ ದಾಳಿ ಅಲ್ಲ ಇದು. ನನ್ನನ್ನು ಸೇರಿ ನಮ್ಮ ಸರ್ಕಾರದ ಹಲವು ಸಚಿವರ ಮೇಲೂ ದಾಳಿ ನಡೆದಿದೆ. ಆದರೆ ದಾಳಿಯಿಂದ ಅವರಿಗೆ ಏನೂ ಸಿಕ್ಕಿಲ್ಲ, ಏನು ಸಿಗುವುದೂ ಇಲ್ಲ ಎಂದು ಅವರು ಹೇಳಿದ್ದಾರೆ.