ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಬೆಳಿಗ್ಗೆ ಐಪಿ ಡಿಪೋದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯ (RTO) ಗೇಟ್‌ಗಳಿಗೆ ಬೀಗ ಹಾಕಿದ್ದು ದೆಹಲಿಗರಿಗೆ ಇನ್ನು ಮುಂದೆ ಇಲ್ಲಿನ ಸೇವೆ ಪಡೆಯಲು ಖುದ್ದಾಗಿ ಭೇಟಿ ನೀಡುವ (faceless services) ಅಗತ್ಯವಿಲ್ಲ. ಈ ಮೂಲಕ ಆನ್‌ಲೈನ್ ಸೌಲಭ್ಯಗಳನ್ನು ಒದಗಿಸಿದ ದೇಶದ ಮೊದಲ ರಾಜ್ಯವಾಗಿದೆ ದೆಹಲಿ. ಫೆಬ್ರವರಿಯಲ್ಲಿ ಪ್ರಾಯೋಗಿಕವಾಗಿ ಮೂರು ಸೇವೆಗಳಿಂದ ಆರಂಭವಾಗಿ, 33 ಪ್ರಮುಖ ಸಾರಿಗೆ-ಸಂಬಂಧಿತ ಸೌಲಭ್ಯಗಳು ಈಗ ಆನ್‌ಲೈನ್ ಆಗಿದ್ದು, ದೆಹಲಿ ಸರ್ಕಾರದ ಸಾರಿಗೆ ಇಲಾಖೆಯು ಸ್ವೀಕರಿಸುವ ಎಲ್ಲಾ ಅರ್ಜಿಗಳಲ್ಲಿ ಶೇ 95 ಆನ್‌ಲೈನ್ ಆಗಿದೆ. ಇ-ಸೈನ್ ಸೌಲಭ್ಯ ಸೇರಿದಂತೆ ಈ ಸೇವೆಗಳ ಮೂಲಕ, ಅರ್ಜಿದಾರರು ಆರ್‌ಟಿಒಗಳಿಗೆ ಭೇಟಿ ನೀಡಲು ಖರ್ಚು ಮಾಡಿದ ಸಮಯ ಮತ್ತು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ.
ಆಧಾರ್ ಆಧಾರಿತ ದೃಢೀಕರಣ ವ್ಯವಸ್ಥೆಯಿಂದ ಬೆಂಬಲಿತವಾದ ಗರಿಷ್ಠ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಕೃತಕ ಬುದ್ಧಮತ್ತೆ ( AI )ಆಧಾರಿತ ಮುಖ ಗುರುತಿಸುವಿಕೆ ಸಾಫ್ಟ್‌ವೇರ್ ಮೂಲಕ ಆನ್‌ಲೈನ್ ಲರ್ನರ್ಸ್ ಲೈಸನ್ಸ್ ನೀಡಿದ ಮೊದಲ ರಾಜ್ಯವೂ ದೆಹಲಿಯಾಗಿದೆ.
ನವದೆಹಲಿ ವಲಯದ ಆರ್‌ಟಿಒಗೆ ಬೀಗ ಹಾಕಿದ ನಂತರ ಮಾತನಾಡಿದ ಕೇಜ್ರಿವಾಲ್ ಚಾಲನಾ ಪರವಾನಗಿ ಪಡೆಯಲು ಯಾರನ್ನು ಸಂಪರ್ಕಿಸಬೇಕು ಅಥವಾ ಯಾವ ಏಜೆಂಟರನ್ನು ನೇಮಿಸಿಕೊಳ್ಳಬೇಕು ಎಂಬುದರ ಕುರಿತು ತೀವ್ರ ಚರ್ಚೆಯಾಗುತ್ತಿತ್ತು. ಜನರು ಸಾಲಿನಲ್ಲಿ ನಿಲ್ಲುತ್ತಾರೆ ಮತ್ತು ಅವರ ಅರ್ಜಿಯಲ್ಲಿ ಆಕ್ಷೇಪಣೆಗಳನ್ನು ಪದೇ ಪದೇ ಮಾಡಲಾಗುತ್ತಿತ್ತು. ಆಮೇಲೆ ಅವರು ಸುಸ್ತಾಗುತ್ತಾರೆ ಮತ್ತು ಅದನ್ನು ಮಾಡಲು ಏಜೆಂಟರನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು.
“ಇಂದು ನಾವು ಮಾಡುತ್ತಿರುವುದು 21 ನೇ ಶತಮಾನದ ಭಾರತವನ್ನು ಸೂಚಿಸುತ್ತದೆ. ಇದು ತಾಂತ್ರಿಕ ಕ್ರಾಂತಿಯ ದಿಕ್ಕಿನಲ್ಲಿ ಒಂದು ಬೃಹತ್ ಹೆಜ್ಜೆಯಾಗಿದೆ. ಕಚೇರಿಗಳು ಮತ್ತು ಕಡತಗಳು ಈಗ ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿವೆ. 1076 ಏಜೆಂಟ್ ಕೂಡ ಯಾವುದೇ ಪೇಪರ್‌ಗಳಿಗಾಗಿ ನಿಮ್ಮ ಮನೆಬಾಗಿಲಿಗೆ ಬರುವುದಿಲ್ಲ. ಈಗ, ನೀವು ನಿಮ್ಮ ಕಂಪ್ಯೂಟರ್‌ಗೆ ಲಾಗಿನ್ ಆಗಬೇಕು ಮತ್ತು ನಿಮ್ಮ ಎಲ್ಲಾ ಕೆಲಸಗಳನ್ನು ಮುಗಿಸಬೇಕು. ಸಾರಿಗೆ ಇಲಾಖೆಯ ಎಲ್ಲಾ ಸೇವೆಗಳು ಈಗ ಡಿಜಿಟಲ್ ಆಗಿದೆ. ದಾಖಲೆಗಳನ್ನು ಸಂಗ್ರಹಿಸಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ, ಕೆಲಸದಿಂದ ರಜೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಮತ್ತು ಮಧ್ಯವರ್ತಿ ಅಥವಾ ಏಜೆಂಟರನ್ನು ನೇಮಿಸುವ ಅಗತ್ಯವಿಲ್ಲ, ”ಎಂದು ಸಿಎಂ ಕೇಜ್ರಿವಾಲ್ ಹೇಳಿದರು.
ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್, ಫೇಸ್ ಲೆಸ್ ಎಂದರೆ ಈಗ ಯಾವುದೇ ಅರ್ಜಿದಾರರು ಸಾರಿಗೆ ಇಲಾಖೆಯ ಯಾವುದೇ ವಲಯ ಕಚೇರಿಯಲ್ಲಿ ಎಂಎಲ್‌ಒ ಅಥವಾ ಅಧಿಕಾರಿಗೆ ಬರುವ ಅಗತ್ಯವಿಲ್ಲ. ನೀವು ಮನೆಯಲ್ಲಿ ಕಚೇರಿಯಲ್ಲಿ ಅಥವಾ ಸೈಬರ್ ಕೆಫೆಯಲ್ಲಿ ಇರಲಿ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಎಲ್ಲ ಕೆಲಸಗಳನ್ನು ಮಾಡಬಹುದು ಎಂದಿದ್ದಾರೆ.
ಐಪಿ ಡಿಪೋ, ವಸಂತ್ ವಿಹಾರ್, ಸರೈ ಕಾಲ್ ಖಾನ್ ಮತ್ತು ಜನಕಪುರಿ – ನಾಲ್ಕು ಆರ್‌ಟಿಒಗಳನ್ನು ಬುಧವಾರ ಮುಚ್ಚಲಾಗಿದೆ.ಆದರೆ ಸುಗಮ ಪರಿವರ್ತನೆಗಾಗಿ ಸಹಾಯ ಕೇಂದ್ರಗಳು ಲಭ್ಯವಿರುತ್ತವೆ ಎಂದು ಗಹ್ಲೋಟ್ ಹೇಳಿದರು. ಫೆಬ್ರವರಿ 19 ರಿಂದ 3.5 ಲಕ್ಷ ಫೇಸ್ ಲೆಸ್ ಸೇವಾ ವಿನಂತಿಗಳನ್ನು ಸ್ವೀಕರಿಸಲಾಗಿದೆ ಮತ್ತು ಇದುವರೆಗೆ ಅನುಮೋದನೆಯ ಯಶಸ್ಸಿನ ದರವು ಶೇ80 ಕ್ಕಿಂತ ಹೆಚ್ಚಿದೆ ಮತ್ತು ನಿರಾಕರಣೆಯ ದರವು ಶೇ1 ಕ್ಕಿಂತ ಕಡಿಮೆಯಿದೆ ಎಂದು ಅವರು ಹೇಳಿದರು.
ಏತನ್ಮಧ್ಯೆ, ಸಾರಿಗೆ ಇಲಾಖೆಯು ಐಸಿಐಸಿಐ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಸಾಲದ ಸಂಪೂರ್ಣ ಮರುಪಾವತಿಯ ಮೇಲೆ ಅಡಮಾನವನ್ನು ಅನ್ನು ಸ್ವಯಂಚಾಲಿತವಾಗಿ ಮುಕ್ತಾಯಗೊಳಿಸುತ್ತದೆ. ಪ್ರಸ್ತುತ, ವಾಹನ ಮಾಲೀಕರು ತಮ್ಮ ಅಡಮಾನ (hypothecation) ಅನ್ನು ಕೊನೆಗೊಳಿಸಲು ಬ್ಯಾಂಕಿನಿಂದ NOC ಪಡೆಯಬೇಕು. ಹೆಚ್ಚಿನ ಬ್ಯಾಂಕುಗಳು ಮುಂದೆ ಬರುವ ನಿರೀಕ್ಷೆಯಿದೆ ಮತ್ತು ಶೀಘ್ರದಲ್ಲೇ ಸೇವೆಯನ್ನು ಒದಗಿಸುತ್ತವೆ.
In the 75th year of Independence ??
Enjoy the FREEDOM from
Corruption, Long queues & Middlemen!@ArvindKejriwal Locks up Govt offices; RTO services become faceless!#GharParRTOpic.twitter.com/bkfK7GoQWM— Aam Aadmi Party Delhi (@AAPDelhi) August 12, 2021
ಸುಮಾರು 32.6 ಲಕ್ಷ ವಾಹನಗಳು ಈ ಕ್ರಮದಿಂದ ಪ್ರಯೋಜನ ಪಡೆಯುತ್ತವೆ. ಬ್ಯಾಂಕುಗಳು ಸ್ವಯಂಚಾಲಿತ ಆನ್‌ಲೈನ್ ಎನ್‌ಒಸಿ ನೀಡಲು ಕೇಂದ್ರದ ವಾಹನ್ ಸಾಫ್ಟ್‌ವೇರ್‌ನೊಂದಿಗೆ ಎಪಿಐ ಆಧಾರಿತ ಅಡಮಾನ ಡೇಟಾವನ್ನು ಏಕೀಕರಣಗೊಳಿಸಲು ಎನ್‌ಐಸಿ ಮೂಲಕ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ಸಾರಿಗೆ ಇಲಾಖೆ ಹೇಳಿದೆ.
We’re happy to partner with ICICI on this ambitious project. HP addition & termination are one of our most availed services & its automation, under leadership of CM @ArvindKejriwal will set a benchmark in simplifying service delivery. I urge more banks to join hands with us. https://t.co/EY7zi4SpBA
— Kailash Gahlot (@kgahlot) August 11, 2021
ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಐಸಿಐಸಿಐ ಜೊತೆ ಪಾಲುದಾರರಾಗಲು ನಮಗೆ ಸಂತೋಷವಾಗಿದೆ. ಎಚ್‌ಪಿ ಸೇರ್ಪಡೆ ಮತ್ತು ಟರ್ಮಿನೇಶನ್ ನಮ್ಮ ಅತ್ಯಂತ ಹೆಚ್ಚಿನ ಸೇವೆಗಳಲ್ಲಿ ಒಂದಾಗಿದೆ. ಅದರ ಅಟೋಮಿನೇಷನ್ ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಸೇವೆ ವಿತರಣೆಯನ್ನು ಸರಳಗೊಳಿಸುವ ಒಂದು ಮಾನದಂಡವನ್ನು ಹೊಂದಿಸುತ್ತದೆ. ನಮ್ಮೊಂದಿಗೆ ಕೈಜೋಡಿಸುವಂತೆ ನಾನು ಹೆಚ್ಚಿನ ಬ್ಯಾಂಕುಗಳಿಗೆ ಮನವಿ ಮಾಡುತ್ತೇನೆ “ಎಂದು ಗಹ್ಲೋಟ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: World’s Top Airports: ವಿಶ್ವದ ಟಾಪ್ 50 ಏರ್ಪೋರ್ಟ್ನಲ್ಲಿ ದೆಹಲಿಗೆ ಸ್ಥಾನ, ಟಾಪ್ 100ರೊಳಗಿದೆ ಬೆಂಗಳೂರು
ಇದನ್ನೂ ಓದಿ: ಆನೆ, ಮಲಯಾಳಿಗಳ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗ; ಕೇರಳದ ಆನೆ ನಂಟಿನ ಹೊರಳುನೋಟ
(Delhi CM Arvind Kejriwal put a lock on the large gates of the RTO to open a faceless services for Delhiites)