ಪ್ರಧಾನಿ ಭೇಟಿಗೆ ವಿಭಿನ್ನವಾಗಿ ಪ್ಲ್ಯಾನ್ ಮಾಡಿದ 10 ವರ್ಷದ ಬಾಲಕಿ; ಈಕೆಯ ಒಂದು ಪ್ರಶ್ನೆಗೆ ಸಿಕ್ಕಾಪಟೆ ನಕ್ಕರು ಮೋದಿ !
Narendra Modi: ಅತ್ತ ಪ್ರಧಾನಿ ಮೋದಿ ಸಹ ಈಕೆಗಾಗಿಯೇ ಕಾಯುತ್ತಿದ್ದರು. ಸುಜಯ್ ವಿಖೆ ಪಾಟೀಲ್ ಪಾರ್ಲಿಮೆಂಟ್ಗೆ ಹೋಗುತ್ತಿದ್ದಂತೆ ಮೋದಿ ಮೊದಲು ಕೇಳಿದ ಪ್ರಶ್ನೆಯೇ, ಅನಿಶಾ ಎಲ್ಲಿ? ಎಂದಾಗಿತ್ತು.
ನನಗೆ ಪ್ರಧಾನಿ ಮೋದಿ (Narendra Modi)ಯವರನ್ನು ಭೇಟಿಯಾಗಬೇಕು..ನನ್ನನ್ನೂ ನಿನ್ನೊಂದಿಗೆ ಕರೆದುಕೊಂಡು ಹೋಗು ಎಂದು ಅಪ್ಪನನ್ನು ಸದಾ ಪೀಡಿಸುತ್ತಿದ್ದ 10 ವರ್ಷದ ಬಾಲಕಿ ಅನಿಶಾ ಪಾಟೀಲ್ ಕನಸು ಕೊನೆಗೂ ಬುಧವಾರ ಈಡೇರಿದೆ. ಅಪ್ಪನೊಟ್ಟಿಗೆ ಸಂಸತ್ತಿಗೆ ತೆರಳಿದ ಆಕೆ, ಪ್ರಧಾನಿ ಮೋದಿ (PM Narendra Modi)ಯವರವನ್ನು ಭೇಟಿಯಾಗಿದ್ದಾಳೆ.. ಸದ್ಯಕ್ಕಂತೂ ಫುಲ್ ಖುಷಿಯಾಗಿದ್ದಾಳೆ. ಅನಿಶಾ ಮಹಾರಾಷ್ಟ್ರದ ಅಹ್ಮದ್ನಗರದ ಬಿಜೆಪಿ ಸಂಸದ (BJP MP) ಡಾ. ಸುಜಯ್ ವಿಖೆ ಪಾಟೀಲ್ ಅವರ ಮಗಳು ಹಾಗೂ ಮಹಾರಾಷ್ಟ್ರದ ಹಿರಿಯ ನಾಯಕ ರಾಧಾಕೃಷ್ಣ ಅವರ ಮೊಮ್ಮಗಳು.
ತಾನೂ ಪ್ರಧಾನಿ ಮೋದಿಯವರನ್ನು ನೋಡಬೇಕು ಎಂಬುದು ಆಕೆಯ ಕನಸು. ಪದೇಪದೆ ಅಪ್ಪನ ಬಳಿ ಕೇಳುತ್ತಿದ್ದಳು. ಆದರೆ ಆಕೆಯ ಅಪ್ಪ ಸುಜಯ್ ಒಪ್ಪುತ್ತಿರಲಿಲ್ಲ. ಹಾಗೆಲ್ಲ ಮೋದಿಯವರನ್ನು ಭೇಟಿಯಾಗಲು ಸಾಧ್ಯವಿಲ್ಲ. ಅವರು ಸದಾ ಕಾರ್ಯನಿರತರಾಗಿರುತ್ತಾರೆ. ನಿನ್ನನ್ನು ಭೇಟಿಯಾಗಲು ಅವರಿಗೆ ಸಮಯ ಇರುವುದಿಲ್ಲ..ಅಪಾಯಿಂಟ್ಮೆಂಟ್ ಕೊಡುವುದಿಲ್ಲ ಎಂದು ಸುಜಯ್ ತಮ್ಮ ಮಗಳಿಗೆ ಯಾವಾಗಲೂ ವಿವರಿಸುತ್ತಿದ್ದರು.
ಅಪ್ಪನ ಬಳಿ ಕೇಳಿಕೇಳಿ ಸಾಕಾದ ಅನಿಶಾ, ಒಂದು ದಿನ ತನ್ನ ತಂದೆಯ ಲ್ಯಾಪ್ಟಾಪ್ ತೆಗದುಕೊಂಡು ಪ್ರಧಾನಿಗೆ ಇ-ಮೇಲ್ ಕಳಿಸಿದಳು. ಅದರಲ್ಲಿ, ಹೆಲೋ ಸರ್, ನಾನು ಅನಿಶಾ. ನನಗೆ ನಿಮ್ಮನ್ನು ಭೇಟಿಯಾಗಲು ತುಂಬ ಆಸೆಯಿದೆ. ನೀವಿದ್ದಲ್ಲಿಗೆ ಬರಲು ಇಚ್ಛಿಸುತ್ತೇನೆ ಎಂದು ಹೇಳಿದ್ದಳು. ಅದಕ್ಕೆ ಪ್ರಧಾನಿಯವರ ಕಡೆಯಿಂದ ಪ್ರತಿಕ್ರಿಯೆಯೂ ಬಂದಿತ್ತು. ಬೇಗನೇ ಬಾ..ಎಂದು ಅವರು ಕಳಿಸಿದ ರಿಪ್ಲೈ ನೋಡಿ ಅನಿಶಾ ಕುಣಿದಾಡಿಬಿಟ್ಟಳು. ಹಾಗೇ, ಅಪ್ಪನೊಂದಿಗೆ ಹೊರಟಳು.
ಅತ್ತ ಪ್ರಧಾನಿ ಮೋದಿ ಸಹ ಈಕೆಗಾಗಿಯೇ ಕಾಯುತ್ತಿದ್ದರು. ಸುಜಯ್ ವಿಖೆ ಪಾಟೀಲ್ ಪಾರ್ಲಿಮೆಂಟ್ಗೆ ಹೋಗುತ್ತಿದ್ದಂತೆ ಮೋದಿ ಮೊದಲು ಕೇಳಿದ ಪ್ರಶ್ನೆಯೇ, ಅನಿಶಾ ಎಲ್ಲಿ? ಎಂದಾಗಿತ್ತು. ಹಾಗೇ ಹೋಗಿ ಪ್ರಧಾನಿ ಮೋದಿಯವರ ಬಳಿ ನಿಂತ ಅನಿಶಾ, ಅವರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದಳು. ಇದು ನಿಮ್ಮ ಕಚೇರಿಯಾ? ಅಬ್ಬಾ ಎಷ್ಟು ದೊಡ್ಡದಾಗಿದೆ ನಿಮ್ಮ ಆಫೀಸ್ !..ನೀವು ಇಡೀ ದಿನ ಇಲ್ಲೇ ಒಬ್ಬಂಟಿಯಾಗಿ ಕುಳಿತಿರುತ್ತೀರಾ?…ಹೀಗೆ ಮುಗ್ಧವಾಗಿ ಒಂದರ ಹಿಂದೆ ಒಂದರಂತೆ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಳು. ಅದಕ್ಕೆಲ್ಲ ಮೋದಿಯವರು ತಾಳ್ಮೆಯಿಂದ, ಪ್ರೀತಿಯಿಂದ ಉತ್ತರ ನೀಡಿದರು. ಸುಮಾರು 10 ನಿಮಿಷಗಳ ಕಾಲ ಮೋದಿ ಮತ್ತು ಅನಿಶಾ ನಡುವೆ ಮಾತುಕತೆ ಮುಂದುವರಿದಿತ್ತು. ಇಷ್ಟು ಸಮಯದಲ್ಲಿ ಇವರಿಬ್ಬರೂ ಕ್ರೀಡಿಯಿಂದ ಹಿಡಿದು ಶಿಕ್ಷಣದವರೆಗೆ ಹಲವು ವಿಚಾರಗಳನ್ನು ಮಾತನಾಡಿದ್ದಾರೆ.
ಸಿಕ್ಕಾಪಟೆ ನಕ್ಕರು ಪ್ರಧಾನಿ ಮೋದಿ ! ಆದರೆ ಕೊನೆಯಲ್ಲಿ ಆಕೆ ಕೇಳಿದ ಪ್ರಶ್ನೆ ಮಾತ್ರ ಪ್ರಧಾನಿ ಮೋದಿ ಸೇರಿ, ಅಲ್ಲಿದ್ದ ಎಲ್ಲರನ್ನೂ ನಗೆಗಡಲಲ್ಲಿ ತೇಲುವಂತೆ ಮಾಡಿತ್ತು. ಮೋದಿ ಜೀ, ನೀವು ಗುಜರಾತಿನವರು..ಹಾಗಿದ್ದ ಮೇಲೆ ನೀವು ಯಾವಾಗ ಭಾರತದ ರಾಷ್ಟ್ರಪತಿ ಆಗುತ್ತೀರಿ ಎಂದು ಅನಿಶಾ ಕೇಳಿದ ಪ್ರಶ್ನೆಗೆ ಪ್ರಧಾನಿ ಮೋದಿ ದೊಡ್ಡದಾಗಿ ನಕ್ಕರು.
ಇದನ್ನೂ ಓದಿ: Nayanthara: ಇತ್ತೀಚೆಗಷ್ಟೇ ವಿಘ್ನೇಶ್ ಶಿವನ್ ಕುರಿತು ಮಾತನಾಡಿ, ಈಗ ಹೊಸ ಸಂಗಾತಿಯೊಂದಿಗೆ ಕಾಣಿಸಿಕೊಂಡ ನಯನತಾರಾ
ನಿಮಗೆ ಪ್ರವಾಸೋದ್ಯಮ ಖಾತೆ ಬೇಡ, ನಮಗೆ ನೀವೇ ಬೇಡ; ಸಾಮಾಜಿಕ ಜಾಲತಾಣಗಳಲ್ಲಿ ಆನಂದ್ ಸಿಂಗ್ ವಿರುದ್ಧ ಅಭಿಯಾನ
Published On - 11:35 am, Thu, 12 August 21