ದೇಹಕ್ಕೆ ದೊಡ್ಡ ಕಲ್ಲು ಕಟ್ಟಿ ಕಾಲುವೆಗೆ ಎಸೆಯಲಾಗಿತ್ತು, ನಾಪತ್ತೆಯಾಗಿ 5 ದಿನಗಳ ಬಳಿಕ ಯುವತಿಯ ಶವ ಪತ್ತೆ

|

Updated on: Mar 20, 2025 | 12:31 PM

ನಾಪತ್ತೆಯಾಗಿ ಐದು ದಿನಗಳ ಬಳಿಕ ದೆಹಲಿಯ ಚಾವ್ಲಾ ಕಾಲುವೆಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಯುವತಿಯನ್ನು ಹಿಸುಕಿ ಕೊಂದು ಆಕೆಯ ದೇಹಕ್ಕೆ ದೊಡ್ಡ ಕಲ್ಲು ಕಟ್ಟಿ ಆಕೆಯ ಸ್ನೇಹಿತನೇ ಎಸೆದಿರುವ ವಿಚಾರ ಬೆಳಕಿಗೆ ಬಂದಿದೆ. ಈಶಾನ್ಯ ದೆಹಲಿಯ ಸೀಮಾಪುರಿಯ ಸುಂದರ್ ನಗರಿ ನಿವಾಸಿ ಕೋಮಲ್ ಅವರನ್ನು ಸ್ನೇಹಿತ ಆಸಿಫ್ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ದೇಹಕ್ಕೆ ದೊಡ್ಡ ಕಲ್ಲು ಕಟ್ಟಿ ಕಾಲುವೆಗೆ ಎಸೆಯಲಾಗಿತ್ತು, ನಾಪತ್ತೆಯಾಗಿ 5 ದಿನಗಳ ಬಳಿಕ ಯುವತಿಯ ಶವ ಪತ್ತೆ
ಕ್ರೈಂ
Follow us on

ದೆಹಲಿ, ಮಾರ್ಚ್​ 20: ನಾಪತ್ತೆಯಾಗಿ ಐದು ದಿನಗಳ ಬಳಿಕ ದೆಹಲಿಯ ಚಾವ್ಲಾ ಕಾಲುವೆಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಯುವತಿಯನ್ನು ಹಿಸುಕಿ ಕೊಂದು ಆಕೆಯ ದೇಹಕ್ಕೆ ದೊಡ್ಡ ಕಲ್ಲು ಕಟ್ಟಿ ಆಕೆಯ ಸ್ನೇಹಿತನೇ ಎಸೆದಿರುವ ವಿಚಾರ ಬೆಳಕಿಗೆ ಬಂದಿದೆ. ಈಶಾನ್ಯ ದೆಹಲಿಯ ಸೀಮಾಪುರಿಯ ಸುಂದರ್ ನಗರಿ ನಿವಾಸಿ ಕೋಮಲ್ ಅವರನ್ನು ಸ್ನೇಹಿತ ಆಸಿಫ್ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಟ್ಯಾಕ್ಸಿ ಚಾಲಕ ಆಸಿಫ್ ಮಾರ್ಚ್ 12 ರಂದು ಸೀಮಾಪುರಿ ಪ್ರದೇಶದಿಂದ ಆಕೆಯನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ಆದರೆ, ಪ್ರಯಾಣದ ಸಮಯದಲ್ಲಿ ಅವರ ನಡುವೆ ತೀವ್ರ ವಾಗ್ವಾದ ನಡೆಯಿತು. ನಂತರ ಆಸಿಫ್ ಕೋಮಲ್‌ಳನ್ನು ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು ತೇಲದಂತೆ ಬಂಡೆಗೆ ಕಟ್ಟಿ ಚಾವ್ಲಾ ಕಾಲುವೆಯಲ್ಲಿ ಎಸೆದಿದ್ದ.

ಮಾರ್ಚ್ 17 ರಂದು, ಕೊಳೆತ ಕಾರಣ ಕೋಮಲ್ ದೇಹವು ತೇಲಲಾರಂಭಿಸಿತ್ತು. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಚಾವ್ಲಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಕೋಮಲ್ ನಾಪತ್ತೆಯಾದ ನಂತರ ಮಾರ್ಚ್ 12 ರಂದು ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ
ದೆಹಲಿಯಲ್ಲಿ ವೃದ್ಧ ದಂಪತಿಯ ಬರ್ಬರ ಹತ್ಯೆ
ಇಬ್ಬರು ಹೆಂಡರ ನೀಚ ಗಂಡ: ಬಾಬುನ ಕ್ರೌರ್ಯಕ್ಕೆ ನರಳಿ ನರಳಿ ಪ್ರಾಣಬಿಟ್ಟಳು!
ಅಮ್ಮನಿಗೆ ಬೈದಿದ್ದಕ್ಕೆ ಮಾವನನ್ನೇ ಕೊಂದ ಪುತ್ರ!
ಮನೆಯ ಬಾವಿಯಲ್ಲಿ 4 ತಿಂಗಳ ಹೆಣ್ಣು ಮಗುವಿನ ಶವ ಪತ್ತೆ, ಕೊಂದಿದ್ಯಾರು?

ಮತ್ತಷ್ಟು ಓದಿ: Delhi Crime: ದೆಹಲಿಯಲ್ಲಿ ವೃದ್ಧ ದಂಪತಿಯ ಬರ್ಬರ ಹತ್ಯೆ

ಆಸಿಫ್ ನನ್ನು ಬಂಧಿಸಲಾಗಿದ್ದು, ಅಪರಾಧಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊಲೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.

ಉತ್ತರ ಪ್ರದೇಶದದ ಮೀರತ್​ನಲ್ಲಿ ಮುಸ್ಕಾನ್ ಎಂಬಾಕೆ ತನ್ನ ಸ್ನೇಹಿತ ಸಾಹಿಲ್ ಜತೆ ಸೇರಿ ಪತಿ ಸೌರಭ್​ನನ್ನು ಹತ್ಯೆ ಮಾಡಿದ್ದಳು. ಬಳಿಕ ಹಲವಾರು ತುಂಡುಗಳಾಗಿ ಕತ್ತರಿಸಿ ಡ್ರಮ್​ನಲ್ಲಿರಿಸಿ ಅದಕ್ಕೆ ಸಿಮೆಂಟ್ ಬೆರೆಸಿ ಸೀಲ್ ಮಾಡಿದ್ದರು. ಅದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ