ನವದೆಹಲಿ, ಜನವರಿ 23: ದೆಹಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸೋಮವಾರ ರಾತ್ರಿ ಪ್ರಬಲವಾಗಿ ಭೂಮಿ ಕಂಪಿಸಿದೆ. ಚೀನಾದ ದಕ್ಷಿಣ ಭಾಗವಾದ ಕ್ಸಿನ್ಜಿಯಾಂಗ್ನಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ಬೆನ್ನಲ್ಲೇ ದೆಹಲಿಯಲ್ಲಿಯೂ ಭೂಕಂಪನದ (Delhi Earthquake) ಅನುಭವವಾಗಿದೆ. ಅದೃಷ್ಟವಶಾತ್, ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಪದೇಪದೆ ಭೂಮಿ ಕಂಪಿಸುತ್ತಿರುವುದರಿಂದ ಜನರಲ್ಲಿ ಆತಂಕ ಸೃಷ್ಟಿಯಾಯಿತು. ಹೀಗಾಗಿ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಬಂದರು.
80 ಕಿಲೋಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರ ಇತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
Earthquake of Magnitude:7.2, Occurred on 22-01-2024, 23:39:11 IST, Lat: 40.96 & Long: 78.30, Depth: 80 Km ,Location: Southern Xinjiang, China for more information Download the BhooKamp App https://t.co/FYt0ly86HX@KirenRijiju @Ravi_MoES @Dr_Mishra1966 @ndmaindia @Indiametdept pic.twitter.com/E184snmSyH
— National Center for Seismology (@NCS_Earthquake) January 22, 2024
ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆಯ ಭೂಕಂಪ ಇತ್ತೀಚೆಗೆ ಸಂಭವಿಸಿತ್ತು. ಅದಾದ ನಂತರ ಜನವರಿ 11 ರಂದು ದೆಹಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಲಘು ಕಂಪನಗಳು ಸಂಭವಿಸಿದ್ದವು. ಭೂಕಂಪದ ಕೇಂದ್ರಬಿಂದು ಕಾಬೂಲ್‌ನಿಂದ ಈಶಾನ್ಯಕ್ಕೆ 241 ಕಿಲೋಮೀಟರ್ ದೂರದಲ್ಲಿತ್ತು. ಆಗ, ಪಾಕಿಸ್ತಾನದಲ್ಲೂ ಕಂಪನದ ಅನುಭವವಾಗಿತ್ತು.
ಸೋಮವಾರ ಮುಂಜಾನೆ, ನೈಋತ್ಯ ಚೀನಾದ ಪರ್ವತ ಭಾಗದಲ್ಲಿ ಸಂಭವಿಸಿದ್ದ ಭಾರಿ ಭೂಕಂಪದಲ್ಲಿ 47 ಜನರು ಮೃತಪಟ್ಟಿದ್ದರು. 200 ಕ್ಕೂ ಹೆಚ್ಚು ಜನರನ್ನು ಪ್ರದೇಶದಿಂದ ತುರ್ತಾಗಿ ಸ್ಥಳಾಂತರಿಸಲಾಗಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ವರದಿ ಮಾಡಿತ್ತು.
ಇದನ್ನೂ ಓದಿ: ಇಂದಿನಿಂದ ಸಾರ್ವಜನಿಕರಿಗೆ ರಾಮಲಲ್ಲಾ ದರ್ಶನ; ಪೂಜೆ, ಆರತಿಯ ಮಾಹಿತಿ ಇಲ್ಲಿದೆ
ಕಳೆದ ಒಂದು ವರ್ಷದಲ್ಲಿ ಉತ್ತರ ಭಾರತದಲ್ಲಿ, ವಿಶೇಷವಾಗಿ ದೆಹಲಿಯಲ್ಲಿ ಭೂಕಂಪದ ಘಟನೆಗಳು ಹೆಚ್ಚಿವೆ. ಇದರೊಂದಿಗೆ ಭೂಕಂಪದ ತೀವ್ರತೆಯೂ ಹೆಚ್ಚುತ್ತಿದೆ. ವಿಶೇಷವಾಗಿ ಅಫ್ಘಾನಿಸ್ತಾನ ಮತ್ತು ನೇಪಾಳ ಸೇರಿದಂತೆ ಹಿಮಾಲಯ ಪ್ರದೇಶದಲ್ಲಿ ಸಂಭವಿಸುವ ಪ್ರತಿಯೊಂದು ಭೂಕಂಪವೂ ದೆಹಲಿ-ಎನ್‌ಸಿಆರ್ ಮೇಲೆ ಪರಿಣಾಮ ಬೀರುತ್ತಿದೆ.
ದೇಶದ ರಾಜಧಾನಿ ದೆಹಲಿ ಭೂಕಂಪದ ಅಪಾಯದ ಸಂಭಾವ್ಯ ತಾಣಗಳ ವ್ಯಾಪ್ತಿಯಲ್ಲಿ ಗುರುತಿಸಿಕೊಂಡಿದೆ. ಇದರೊಂದಿಗೆ, ಮಥುರಾ, ಮೊರಾದಾಬಾದ್ ಮತ್ತು ಸೋಹ್ನಾ ಕೂಡ ಸೇರಿವೆ. ಈ ಪ್ರದೇಶಗಳು ಹಿಮಾಲಯದ ಟೆಕ್ಟೋನಿಕ್ ಪ್ಲೇಟ್ ಬಳಿ ಇವೆ. ಭೂಮಿಯೊಳಗೆ ಟೆಕ್ಟೋನಿಕ್ ಪ್ಲೇಟ್‌ಗಳು ಡಿಕ್ಕಿ ಹೊಡೆದಾಗ ಭೂಕಂಪ ಸಂಭವಿಸುತ್ತದೆ. ಹಿಮಾಲಯ ಪ್ರದೇಶದಲ್ಲಿ ಸಂಭವಿಸುವ ಯಾವುದೇ ಭೂಕಂಪದ ಕಂಪನಗಳು ದೆಹಲಿಯಲ್ಲಿ ಕಂಡುಬರಲು ಇದು ಕಾರಣವಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:45 am, Tue, 23 January 24