ಮದುವೆಯಾಗಲು ನಿರಾಕರಿಸಿದ್ದಕ್ಕೆ ಸ್ನೇಹಿತೆಗೆ ಚಾಕುವಿನಿಂದ ಇರಿದು ತಾನೂ ಇರಿದುಕೊಂಡ ಯುವಕ

ಮದುವೆಯಾಗುವುದಿಲ್ಲ ಎಂದು ಹೇಳಿದ್ದಕ್ಕೆ ತನ್ನ ಸ್ನೇಹಿತೆಗೆ ಚಾಕುವಿನಿಂದ ಇರಿದು ಬಳಿಕ ತಾನೂ ಕೂಡ ಇರಿದುಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಆಕೆಗೆ ಮದುವೆಯಾಗುವಂತೆ ಆಕೆಯ ಸ್ನೇಹಿತ ಒತ್ತಾಯಿಸಿದ್ದ. ಆದರೆ ಆಕೆ ಒಪ್ಪಿಕೊಳ್ಳದ ಪರಿಣಾಮ ಚಾಕುವಿನಿಂದ ಇರಿದಿದ್ದಾನೆ, ಬಳಿಕ ತಾನೂ ಇರಿದುಕೊಂಡಿದ್ದಾನೆ. ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಇಬ್ಬರೂ ಸುಮಾರು ಒಂದು ವರ್ಷದಿಂದ ಪರಿಚಿತರಾಗಿದ್ದರು.

ಮದುವೆಯಾಗಲು ನಿರಾಕರಿಸಿದ್ದಕ್ಕೆ ಸ್ನೇಹಿತೆಗೆ ಚಾಕುವಿನಿಂದ ಇರಿದು ತಾನೂ ಇರಿದುಕೊಂಡ ಯುವಕ
ಕ್ರೈಂ
Image Credit source: NDTV

Updated on: Apr 07, 2025 | 2:37 PM

ದೆಹಲಿ, ಏಪ್ರಿಲ್ 07: ಯುವತಿ ಮದುವೆ(Marriage)ಯಾಗಲು ನಿರಾಕರಿಸಿದ್ದಕ್ಕೆ ಆಕೆಗೆ ಚಾಕುವಿನಿಂದ ಇರಿದು ತಾನೂ ಇರಿದುಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿ ಕಂಟೋನ್ಮೆಂಟ್​ ಬಳಿ ಘಟನೆ ನಡೆದಿದೆ. ಆಕೆಗೆ ಮದುವೆಯಾಗುವಂತೆ ಆಕೆಯ ಸ್ನೇಹಿತ ಒತ್ತಾಯಿಸಿದ್ದ. ಆದರೆ ಆಕೆ ಒಪ್ಪಿಕೊಳ್ಳದ ಪರಿಣಾಮ ಚಾಕುವಿನಿಂದ ಇರಿದಿದ್ದಾನೆ, ಬಳಿಕ ತಾನೂ ಇರಿದುಕೊಂಡಿದ್ದಾನೆ.

ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಇಬ್ಬರೂ ಸುಮಾರು ಒಂದು ವರ್ಷದಿಂದ ಪರಿಚಿತರಾಗಿದ್ದರು ಮತ್ತು ಆಗಾಗ ಒಟ್ಟಿಗೆ ಓಡಾಡುತ್ತಿದ್ದರು. ಯುವತಿಗೆ ಈ ಸಂಬಂಧವನ್ನು ಮುಂದುವರೆಸಲು ಅಥವಾ ಆತನನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಹೀಗಾಗಿ ಅವಳ ಮನದ ಭಾವನೆಯನ್ನು ಹೇಳಿಕೊಂಡಾಗ ಕೋಪಗೊಂಡ ಯುವಕ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.

ಆತನನ್ನು ಅಮಿತ್ ಎಂದು ಗುರುತಿಸಲಾಗಿದೆ. ಸಂಜೆ 4 ಗಂಟೆ ಸುಮಾರಿಗೆ ಅಮಿತ್ ಈ ಕೃತ್ಯವೆಸಗಿದ್ದಾನೆ.
ಸದರ್ ಬಜಾರ್‌ನ ಅಂಗಡಿಯೊಂದರ ಸಿಸಿಟಿವಿ ದೃಶ್ಯಾವಳಿಯಲ್ಲಿ ಅಮಿತ್ ಪದೇ ಪದೇ ಹುಡುಗಿಯನ್ನು ತಡೆಯುತ್ತಿರುವುದು ಮತ್ತು ಅವಳು ಅವನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಅವಳಿಗೆ ಏನೋ ಹೇಳುತ್ತಿರುವುದು ಕಂಡುಬರುತ್ತದೆ.

ಇದನ್ನೂ ಓದಿ
ಅಕ್ರಮ ಸಂಬಂಧಕ್ಕೆ ಅಡ್ಡಿ.. ಪತಿ ಕಥೆ ಮುಗಿಸಿದ ಪಾಪಿ ಪತ್ನಿ!
ಬೇಕರಿಗೆ ಬಂದಿದ್ದ ಬಾಲಕಿಗೆ ಚಾಕೊಲೇಟ್ ಕೊಟ್ಟು ಲೈಂಗಿಕ ಕಿರುಕುಳ
ಬ್ಯಾಡ್ಮಿಂಟನ್ ಕೋಚ್​ನಿಂದ ಬಾಲಕಿ ಮೇಲೆ ಅತ್ಯಾಚಾರ: ವಿಡಿಯೋಗಳು ಪತ್ತೆ!
ಎಚ್ಚರ: ಬುರ್ಖಾ ಧರಿಸಿ ಬರ್ತಾರೆ, ಚಿನ್ನ-ಬೆಳ್ಳಿ ಎಗರಿಸಿ ಪರಾರಿಯಾಗ್ತಾರೆ!

ಮತ್ತಷ್ಟು ಓದಿ: ಮದುವೆ ಬೇಡವೆಂದು ವರನನ್ನು ಕೊಲ್ಲಲು ಸುಪಾರಿಕೊಟ್ಟ ವಧು

ಬಾಲಕಿಯ ಕುತ್ತಿಗೆ ಮತ್ತು ಹೊಟ್ಟೆಯ ಎಡಭಾಗಕ್ಕೆ ಇರಿತದಿಂದ ಗಾಯವಾಗಿದೆ. ಆ ಹುಡುಗ ಕಂಟೋನ್ಮೆಂಟ್ ಪ್ರದೇಶದ ನಿವಾಸಿ. ಘಟನೆಯ ಬಗ್ಗೆ ಗಾಯಗೊಂಡ ಹುಡುಗಿಯ ಸಹೋದರಿ ಹೇಳುವಂತೆ, ಅಮಿತ್ ನಮಗೆ ಮೊದಲು ಪರಿಚಯವಿರಲಿಲ್ಲ. ಅವನು ತನ್ನ ಪಕ್ಕದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ.

ನಾವು ಅವನನ್ನು ಸ್ನೇಹಿತ ಎಂದು ಭಾವಿಸಿದ್ದೆವು. ಸದರ್‌ನಲ್ಲಿ ಅವರಿಬ್ಬರನ್ನೂ ಒಟ್ಟಿಗೆ ನೋಡಿದ್ದೆವು, ಆಗ ಇಬ್ಬರೂ ಎಲ್ಲರಂತೆಯೇ ನಗುನಗುತ್ತಾ ಚೆನ್ನಾಗಿಯೇ ಮಾತನಾಡುತ್ತಿದ್ದರು. ಆದರೆ ಸಂಜೆ ಏಕಾಏಕಿ ಹಲ್ಲೆ ನಡೆದಿದೆ ಎಂದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us