ಸುಬ್ರಮಣಿಯನ್ ಸ್ವಾಮಿಗೆ ಭದ್ರತೆ ನೀಡಲು ವಿಫಲ; 3 ದಿನದೊಳಗೆ ಉತ್ತರಿಸಲು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್​ ಆದೇಶ

| Updated By: ಸುಷ್ಮಾ ಚಕ್ರೆ

Updated on: Oct 31, 2022 | 3:18 PM

ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಕೇವಲ ಖಾಸಗಿ ವ್ಯಕ್ತಿಯಲ್ಲ. ಸರ್ಕಾರವು Z ಕೆಟಗರಿ ಭದ್ರತೆಯನ್ನು ನೀಡಿರುವ ವ್ಯಕ್ತಿ ಎಂದು ದೆಹಲಿ ಹೈಕೋರ್ಟ್​ ಹೇಳಿದೆ. ದೆಹಲಿ ಹೈಕೋರ್ಟ್​ ನವೆಂಬರ್ 3ರಂದು ಈ ಪ್ರಕರಣದ ವಿಚಾರಣೆ ನಡೆಸಲಿದೆ.

ಸುಬ್ರಮಣಿಯನ್ ಸ್ವಾಮಿಗೆ ಭದ್ರತೆ ನೀಡಲು ವಿಫಲ; 3 ದಿನದೊಳಗೆ ಉತ್ತರಿಸಲು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್​ ಆದೇಶ
ಸುಬ್ರಮಣಿಯನ್ ಸ್ವಾಮಿ
Follow us on

ನವದೆಹಲಿ: ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್​ ಸ್ವಾಮಿಗೆ (Subramanian Swamy) ಭದ್ರತೆ ನೀಡಲು ವಿಫಲರಾದ ಹಿನ್ನೆಲೆ​ ದೆಹಲಿ ಹೈಕೋರ್ಟ್​ (Delhi High Court) ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಸುಬ್ರಮಣಿಯನ್​​ ಸ್ವಾಮಿ ಕೇವಲ ಖಾಸಗಿ ವ್ಯಕ್ತಿಯಲ್ಲ. ಅವರಿಗೆ ಯಾಕೆ ಭದ್ರತೆ ನೀಡಿಲ್ಲ? ಎಂದು ಹೈಕೋರ್ಟ್​ ಪ್ರಶ್ನೆ ಮಾಡಿದೆ. ಹಬ್ಬದ ದಿನಗಳಲ್ಲಿ ಭದ್ರತೆಯನ್ನು ನೀಡಲು ಸಾಧ್ಯವಾಗಿಲ್ಲ. ಪೊಲೀಸ್ ಸಿಬ್ಬಂದಿಯನ್ನು ಬೇರೆಡೆ ನಿಯೋಜಿಸಲಾಗಿತ್ತು ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್​ಗೆ ಉತ್ತರಿಸಿದೆ. ಆದರೆ, ಕೇಂದ್ರ ಸರ್ಕಾರದ ವಾದವನ್ನು ಒಪ್ಪದ ದೆಹಲಿ ಹೈಕೋರ್ಟ್​​​ ಇಂತಹ ಸಾಮಾನ್ಯ ಹೇಳಿಕೆಗಳನ್ನು ತೇಲಿಬಿಡಬೇಡಿ. ಭದ್ರತೆ ವಿಚಾರವಾಗಿ 3 ದಿನಗಳಲ್ಲಿ ಸೂಕ್ತ ಉತ್ತರ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಕೇವಲ ಖಾಸಗಿ ವ್ಯಕ್ತಿಯಲ್ಲ. ಸರ್ಕಾರವು Z ಕೆಟಗರಿ ಭದ್ರತೆಯನ್ನು ನೀಡಿರುವ ವ್ಯಕ್ತಿ ಎಂದು ದೆಹಲಿ ಹೈಕೋರ್ಟ್​ ಹೇಳಿದೆ. ದೆಹಲಿ ಹೈಕೋರ್ಟ್​ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಸುಬ್ರಮಣಿಯನ್ ಸ್ವಾಮಿ ಅವರ ಭದ್ರತಾ ಕಾಳಜಿಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ಮಾಡುವ ವ್ಯವಸ್ಥೆಗಳನ್ನು ವಿವರಿಸಲು ಕೇಂದ್ರ ಸರ್ಕಾರಕ್ಕೆ 3 ದಿನಗಳ ಸಮಯವನ್ನು ನೀಡಿದ್ದಾರೆ.

ಇದನ್ನೂ ಓದಿ: ಏರ್ ಇಂಡಿಯಾ ಹೂಡಿಕೆ ಹಿಂಪಡೆಯುವಿಕೆ ವಿರುದ್ಧ ಸುಬ್ರಮಣ್ಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್​

ದೆಹಲಿ ಹೈಕೋರ್ಟ್​ ನವೆಂಬರ್ 3ರಂದು ಈ ಪ್ರಕರಣದ ವಿಚಾರಣೆ ನಡೆಸಲಿದೆ. ಸುಬ್ರಮಣಿಯನ್ ಸ್ವಾಮಿ ಪರ ವಾದ ಮಂಡಿಸಿದ ಹಿರಿಯ ವಕೀಲ ಜಯಂತ್ ಮೆಹ್ತಾ ಅವರು, ಕೇಂದ್ರದ ಖಚಿತ ಭರವಸೆಯ ಹೊರತಾಗಿಯೂ ಸುಬ್ರಮಣಿಯನ್ ಸ್ವಾಮಿ ಅವರ ಖಾಸಗಿ ನಿವಾಸಕ್ಕೆ ಯಾರೂ ಭೇಟಿ ನೀಡಿ ಭದ್ರತೆ ಒದಗಿಸಲು ಅಗತ್ಯ ಮೂಲಸೌಕರ್ಯಗಳ ಪರಿಶೀಲನೆ ನಡೆಸಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಅವರು Z ಕೆಟಗರಿ ಭದ್ರತೆಗೆ ಅರ್ಹರಾಗಿದ್ದಾರೆ. ಅವರಿಗೆ 2016ರ ಜನವರಿಯಲ್ಲಿ 5 ವರ್ಷಗಳ ಕಾಲ ದೆಹಲಿಯಲ್ಲಿ ಬಂಗಲೆ ಮಂಜೂರು ಮಾಡಲಾಗಿತ್ತು. ಅನುಭವಿ ರಾಜಕಾರಣಿ ಸುಬ್ರಮಣಿಯನ್ ಸ್ವಾಮಿ ತಮ್ಮ ರಾಜ್ಯಸಭಾ ಅಧಿಕಾರಾವಧಿಯಲ್ಲಿ ಅಲ್ಲಿಯೇ ವಾಸಿಸುತ್ತಿದ್ದರು. 2022ರ ಏಪ್ರಿಲ್​ನಲ್ಲಿ ಅದು ಕೊನೆಗೊಂಡಿತ್ತು. ಅವರು ತಮ್ಮ ಮನೆಯನ್ನು ಖಾಲಿ ಮಾಡಬೇಕಾಗಿರುವುದರಿಂದ ಸುಬ್ರಮಣಿಯನ್ ಸ್ವಾಮಿ ಅವರಿಗೆ ಮುಂದುವರಿದ ಭದ್ರತಾ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ಬಂಗಲೆಯನ್ನು ಮರುಹಂಚಿಕೆ ಮಾಡುವಂತೆ ಕೋರಿ ದೆಹಲಿ ಹೈಕೋರ್ಟ್‌ನ ಮೊರೆ ಹೋಗಿದ್ದರು.

ಅವರ ಅರ್ಜಿಯಲ್ಲಿ, ಸರ್ಕಾರಿ ಬಂಗಲೆ ಮತ್ತು ಅವರ ಇತರ ವಸತಿಗಳನ್ನು ಹೋಲಿಸುವ ಛಾಯಾಚಿತ್ರಗಳನ್ನು ಸಹ ತೋರಿಸಲಾಗಿದ್ದು, ನಂತರದಲ್ಲಿ ಭದ್ರತೆಗೆ ಯಾವುದೇ ವ್ಯವಸ್ಥೆಗಳನ್ನು ಒದಗಿಸಲಾಗಿಲ್ಲ ಎಂದು ವಾದಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ