ಚಿನ್ನಾಭರಣ ಲೂಟಿ ಮಾಡಿದ್ದ ಕಳ್ಳ, ತಿಂಗಳ ಬಳಿಕ ಟ್ರಾವೆಲ್​ ವ್ಲಾಗ್ಸ್​ನಿಂದ ಸಿಕ್ಕಿಬಿದ್ದ

ದೆಹಲಿಯ ಮನೆಯೊಂದರಲ್ಲಿ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದ ಕಳ್ಳ ತಿಂಗಳ ಬಳಿಕ ಟ್ರಾವೆಲ್​ ಲಾಗ್ಸ್​ ಮೂಲಕ ಸಿಕ್ಕಿಬಿದ್ದಿದ್ದಾನೆ. ಬಿಂದಾಪುರದ ನಿವಾಸಿ ಸಂಜೀವ್ (29) ಜುಲೈ 11 ರಂದು ಉತ್ತಮನಗರದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ.

ಚಿನ್ನಾಭರಣ ಲೂಟಿ ಮಾಡಿದ್ದ ಕಳ್ಳ, ತಿಂಗಳ ಬಳಿಕ ಟ್ರಾವೆಲ್​ ವ್ಲಾಗ್ಸ್​ನಿಂದ ಸಿಕ್ಕಿಬಿದ್ದ
ಸಾಂದರ್ಭಿಕ ಚಿತ್ರ

Updated on: Aug 13, 2023 | 9:45 AM

ದೆಹಲಿಯ ಮನೆಯೊಂದರಲ್ಲಿ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದ ಕಳ್ಳ ತಿಂಗಳ ಬಳಿಕ ಟ್ರಾವೆಲ್​ ಲಾಗ್ಸ್​ ಮೂಲಕ ಸಿಕ್ಕಿಬಿದ್ದಿದ್ದಾನೆ. ಬಿಂದಾಪುರದ ನಿವಾಸಿ ಸಂಜೀವ್ (29) ಜುಲೈ 11 ರಂದು ಉತ್ತಮನಗರದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ. ತಮ್ಮ ಮನೆಯಿಂದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ಮನೆ ಮಾಲೀಕರು ದೂರು ನೀಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆಯ ಸಮಯದಲ್ಲಿ, ಪೊಲೀಸರು ಹತ್ತಿರದ ಸ್ಥಳಗಳ ಸಿಸಿಟಿವಿ ದೃಶ್ಯಗಳ ತನಿಖೆ ನಡೆಸಿದ್ದಾರೆ. ಸಂಜೀವ್ ದೂರುದಾರರ ಮನೆಯಿಂದ ಹೊರಹೋಗುತ್ತಿರುವುದು ಕಂಡುಬಂದಿದೆ. ಉತ್ತರಾಖಂಡದ ಹರಿದ್ವಾರದಲ್ಲಿ ಆತನ ಕೊನೆಯ ಸ್ಥಳವನ್ನು ಪತ್ತೆಹಚ್ಚಲಾಗಿದೆ. ತಾನು ಸಿಕ್ಕಿಹಾಕಿಕೊಳ್ಳಬಾರದೆಂದು ಗಂಟೆಗಳ ಕಾಲ ತನ್ನ ಮೊಬೈಲ್ ಸ್ವಿಚ್ಡ್​ ಆಫ್ ಮಾಡಿದ್ದ.

ಕದ್ದ ಬಳಿಕ ಸಂಜೀವ್ ಜೀವನ್ ಪಾರ್ಕ್​ನಲ್ಲಿರುವ ಚಿನ್ನದ ಸಾಲ ನೀಡುವ ಅಂಗಡಿಗೆ ಹೋಗಿದ್ದ ಅಲ್ಲಿ ಎರಡು ಉಂಗುರಗಳನ್ನು ಕೊಟ್ಟು 20 ಸಾವಿರ ರೂ ಸಾಲ ತೆಗೆದುಕೊಂಡು ಹೋಗಿದ್ದ ಎಂಬುದು ಪೊಲೀಸರು ನಡೆಸಿದ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಸಂಜೀವ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರಯಾಣದ ವೀಡಿಯೊಗಳನ್ನು ಅಪ್ಲೋಡ್ ಮಾಡುವುದನ್ನು ಮುಂದುವರೆಸಿದ್ದ ಅದನ್ನು ಪೊಲೀಸರು ಗಮನಿಸುತ್ತಲೇ ಇದ್ದರು.

ಮತ್ತಷ್ಟು ಓದಿ: ಬೆಂಗಳೂರು: ದ್ವಿಚಕ್ರ ಸವಾರನಿಗೆ ಮಾರಕಾಸ್ತ್ರ ತೋರಿಸಿ ದರೋಡೆ! ಭೀತಿಗೊಳಿಸುವ ವಿಡಿಯೋ ಇಲ್ಲಿದೆ

ಅವನಿಗೂ ಪೊಲೀಸರು ಹುಡುಕುತ್ತಿರುವ ವಿಷಯ ತಿಳಿದಿದ್ದು, ಅವರ ಗಮನ ಬೇರೆಡೆಗೆ ಸೆಳೆಯುವ ಸಲುವಾಗಿ ತಾನು ದುಬೈಗೆ ಹೋಗುತ್ತಿದ್ದೇನೆ ಎಂದು ವ್ಲಾಗ್​ನಲ್ಲಿ ಹೇಳಿದ್ದ.

ಸ್ವಲ್ಪ ಸಮಯದ ಬಳಿಕ ಸಂಜೀವ್ ಮತ್ತೊಂದು ವ್ಲಾಗ್ ಅಪ್​ಲೋಡ್ ಮಾಡಿದ್ದ, ಅದರಲ್ಲಿ ಉತ್ತರ ಪ್ರದೇಶದ ಆಗ್ರಾದಲ್ಲಿದ್ದೇನೆ ಎಂದು ಹೇಳಿದ್ದ.

ಪೊಲೀಸರು ಆಗ್ರಾದಲ್ಲಿರುವ ಎಲ್ಲಾ ಹೋಟೆಲ್​ಗಳ ತಪಾಸಣೆ ನಡೆಸಿದ್ದಾರೆ, ಕೊನೆಗೆ ಕಳ್ಳ ಸಿಕ್ಕಿಬಿದ್ದಿದ್ದಾನೆ.

ಆತನ ಬಳಿಯಿದ್ದ ಒಟ್ಟು 16,000 ರೂ.ವನ್ನು ವಶಪಡಿಸಿಕೊಳ್ಳಲಾಗಿದೆ, ಸಹರಾನ್‌ಪುರದಲ್ಲಿ ದಾಳಿ ನಡೆಸಲಾಯಿತು ಮತ್ತು ಅಬ್ದುಲ್ ಮಲಿಕ್ (65) ಅವರನ್ನು ಮನೆಯಿಂದ ಬಂಧಿಸಲಾಯಿತು. ಕದ್ದ ಚಿನ್ನಾಭರಣವನ್ನು ಸಂಜೀವ್ ಮಲಿಕ್ ಗೆ ಮಾರಾಟ ಮಾಡುತ್ತಿದ್ದ, ಆತನ ಬಳಿಯಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ