ದೆಹಲಿ ಎಂಸಿಡಿಯಲ್ಲಿ ಮೇಯರ್ ಚುನಾವಣೆ
ಎರಡು ವಾರಗಳ ನಂತರ ಮೇಯರ್ (Mayor) ಆಯ್ಕೆ ಮಾಡಲು ವಿಫಲವಾಗಿರುವ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಮಂಗಳವಾರ ಮತ್ತೆ ಸ್ಥಾನಕ್ಕೆ ಚುನಾವಣೆ ನಡೆಸಲು ಸಜ್ಜಾಗಿತ್ತು. ಆಮ್ ಆದ್ಮಿ ಪಕ್ಷವು (AAP) ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಕ್ರಮವಾಗಿ ಶೆಲ್ಲಿ ಒಬೆರಾಯ್ ಮತ್ತು ಆಲೆ ಮೊಹಮ್ಮದ್ ಇಕ್ಬಾಲ್ ಅವರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದರೆ, ಬಿಜೆಪಿ ರೇಖಾ ಗುಪ್ತಾ ಅವರನ್ನು ಮೇಯರ್ ಸ್ಥಾನಕ್ಕೆ ಮತ್ತು ಕಮಲ್ ಬಾಗ್ರಿ ಉಪ ಮೇಯರ್ ಸ್ಥಾನಕ್ಕೆ ಕಣಕ್ಕಿಳಿಸಿದೆ. 250 ಕೌನ್ಸಿಲರ್‌ಗಳಲ್ಲದೆ, 14 ದೆಹಲಿ ಶಾಸಕರು ಮತ್ತು 10 ದೆಹಲಿ ಸಂಸದರು ಮೇಯರ್‌ಗಾಗಿ ಚುನಾವಣಾ ಕಾಲೇಜನ್ನು ರಚಿಸುತ್ತಾರೆ. ಎಎಪಿ 150 ಕೌನ್ಸಿಲರ್‌ಗಳ ಬೆಂಬಲವನ್ನು ಹೊಂದಿದ್ದು, 113 ಮಂದಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್ ಒಂಬತ್ತು ಕೌನ್ಸಿಲರ್‌ಗಳನ್ನು ಹೊಂದಿದ್ದು, ಇಬ್ಬರು ಸ್ವತಂತ್ರರಾಗಿದ್ದಾರೆ. ಆಲ್ಡರ್‌ಮೆನ್ ಎಂದೂ ಕರೆಯಲ್ಪಡುವ ನಾಮನಿರ್ದೇಶಿತ ಕೌನ್ಸಿಲರ್‌ಗಳ ಪ್ರಮಾಣವಚನಕ್ಕೆ ಸಂಬಂಧಿಸಿದಂತೆ ಎಎಪಿ ಮತ್ತು ಬಿಜೆಪಿ ಘರ್ಷಣೆ ಮಾಡಿದ್ದರಿಂದ ಜನವರಿ 6 ರಂದು ನಾಟಕೀಯ ಬೆಳವಣಿಗೆ ನಡೆದಿತ್ತು. ಮಂಗಳವಾರವೂ ಇದೇ ರೀತಿ ಜಗಳ ನಡೆದಿದ್ದು, ಸದನವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿದೆ.
ದೆಹಲಿಯ 250 ಸದಸ್ಯರ ನಾಗರಿಕ ಸಂಸ್ಥೆಗೆ ಕಳೆದ ವರ್ಷ ಡಿಸೆಂಬರ್ 4 ರಂದು ಚುನಾವಣೆಗಳು ನಡೆದಿದ್ದು, ಡಿಸೆಂಬರ್ 7 ರಂದು ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಚುನಾವಣೆಯಲ್ಲಿ ಎಎಪಿ 134 ಸ್ಥಾನಗಳನ್ನು ಗೆದ್ದಿದ್ದು ಬಿಜೆಪಿ 104 ವಾರ್ಡ್ ಗೆದ್ದಿತ್ತು.
ದೆಹಲಿ ಎಂಸಿಡಿ ಮೇಯರ್ ಚುನಾವಣೆ: ಈವರೆಗಿನ ಬೆಳವಣಿಗೆಗಳು
- ಮಂಗಳವಾರ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಗೆ ಮೇಯರ್ ಆಯ್ಕೆಗಾಗಿ ಇರುವ ಚುನಾವಣೆ ವೇಳೆ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಬಿಜೆಪಿ ನಡುವಿನ ಘರ್ಷಣೆ ನಡೆದಿದ್ದು, ಎರಡನೇ ಬಾರಿ ಚುನಾವಣೆ ಸ್ಥಗಿತಗೊಂಡಿದೆ.
- ದೆಹಲಿಯ ಮಹಾನಗರ ಪಾಲಿಕೆ (MCD) ಸದನದಲ್ಲಿ ದೆಹಲಿಯ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಮಾಡಲು ಕೌನ್ಸಿಲರ್‌ಗಳು ಸಭೆ ಸೇರಿದಾಗ ಜಗಳವುಂಟಾಗಿದೆ. ಇದೀಗ ಚುನಾವಣೆಯನ್ನು ಮತ್ತೊಮ್ಮೆ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
- ಜನವರಿ 6 ರಂದು ನಡೆದ 250 ಸದಸ್ಯರ ಎಂಸಿಡಿಯ ಮೊದಲ ಸಭೆಯಂತೆ, ಎಎಪಿ ಕೌನ್ಸಿಲರ್‌ಗಳ ದೊಡ್ಡ ಪ್ರತಿಭಟನೆಯ ನಡುವೆ ಚುನಾವಣೆಯನ್ನು ರದ್ದುಗೊಳಿಸಲಾಯಿತು. ಚುನಾವಣೆಯಲ್ಲಿ ಸೋತರೂ ನಾಗರಿಕ ಸಂಸ್ಥೆಯ ನಿಯಂತ್ರಣವನ್ನು ಬಿಜೆಪಿ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಎಎಪಿ ಆರೋಪಿಸಿದೆ.
- ಮಂಗಳವಾರ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ನೇಮಿಸಿದ ಬಿಜೆಪಿಯ ಅಧ್ಯಕ್ಷ ಸತ್ಯ ಶರ್ಮಾ ಅವರು ಕಳೆದ ಸಭೆಯಲ್ಲಿ ಎಎಪಿಯ ತೀವ್ರ ವಿರೋಧದ ಹೊರತಾಗಿಯೂ ಮೊದಲು 10 ನಾಮನಿರ್ದೇಶಿತ ಕೌನ್ಸಿಲರ್‌ಗಳಿಗೆ ಪ್ರಮಾಣ ವಚನ ಬೋಧಿಸಿದರು. ಆಲ್ಡರ್‌ಮೆನ್ ಎಂದು ಕರೆಯಲ್ಪಡುವ ಈ ಕೌನ್ಸಿಲರ್‌ಗಳಿಗೆ ಮತ ಚಲಾಯಿಸಲು ಅವಕಾಶವಿಲ್ಲ ಎಂದು ಎಎಪಿ ಹೇಳಿದೆ.
- ಹೆಚ್ಚಿನ ಸಂಖ್ಯೆಯ ನಾಗರಿಕ ರಕ್ಷಣಾ ಸಿಬ್ಬಂದಿ ಮತ್ತು ಮಾರ್ಷಲ್‌ಗಳನ್ನು ಒಳಗೊಂಡಂತೆ ಭಾರೀ ಭದ್ರತೆಯನ್ನು MCD ಯ ಪ್ರಧಾನ ಕಚೇರಿ ಸಿವಿಕ್ ಸೆಂಟರ್‌ನಲ್ಲಿ ನಿಯೋಜಿಸಲಾಗಿದೆ.
- ಎಎಪಿ ಶೆಲ್ಲಿ ಒಬೆರಾಯ್ ಅವರನ್ನು ಮೇಯರ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದೆ. ಇನ್ನೊಬ್ಬ ಅಭ್ಯರ್ಥಿ ಅಶು ಠಾಕೂರ್ ಅವರನ್ನು “ಬ್ಯಾಕ್ಅಪ್” ಎಂದು ಹೆಸರಿಸಿದೆ. ಬಿಜೆಪಿ ರೇಖಾ ಗುಪ್ತಾ ಅವರನ್ನು ನಾಮನಿರ್ದೇಶನ ಮಾಡಿದೆ. ಉಪಮೇಯರ್ ಹುದ್ದೆಗೆ ಆಲೆ ಮೊಹಮ್ಮದ್ ಇಕ್ಬಾಲ್ ಮತ್ತು ಜಲಜ್ ಕುಮಾರ್ (ಎಎಪಿ) ಮತ್ತು ಕಮಲ್ ಬಾಗ್ರಿ (ಬಿಜೆಪಿ) ನಾಮನಿರ್ದೇಶಿತರಾಗಿದ್ದಾರೆ.
- ಚುನಾವಣೆಯಲ್ಲಿ ಸೋತ ನಂತರ, ಬಿಜೆಪಿ ಮೊದಲು ಮೇಯರ್ ಹುದ್ದೆಗೆ ಎಎಪಿ ವಿರುದ್ಧ ಹೋರಾಡುವುದಾಗಿ ಸುಳಿವು ನೀಡಿತ್ತು. ನಂತರ ಅದು ಆ ಹೇಳಿಕೆಯಿಂದ ಹಿಂದೆ ಸರಿದು ಮೇಯರ್ ಆಪ್‌ನವರೇ ಆಗುತ್ತಾರೆ ಎಂದು ಹೇಳಿದರು. ನಂತರ ಯುಟರ್ನ್ ಮಾಡಿದ ಬಿಜೆಪಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿತ್ತು.
- ದೆಹಲಿಯಲ್ಲಿ ಮೇಯರ್ ಹುದ್ದೆಯು ಸರದಿ ಆಧಾರದ ಮೇಲೆ ಐದು ವರ್ಷಗಳಲ್ಲಿ ಒಂದೊಂದು ವರ್ಷ ಅವಧಿಗಳನ್ನು ನೀಡಲಾಗುತ್ತದೆ. ಮೊದಲ ವರ್ಷ ಮಹಿಳೆಯರಿಗೆ ಮೀಸಲಾಗಿದೆ, ಎರಡನೆಯದು ಮುಕ್ತ ವರ್ಗಕ್ಕೆ, ಮೂರನೆಯದು ಮೀಸಲು ವರ್ಗಕ್ಕೆ ಮತ್ತು ಉಳಿದ ಎರಡು ಮತ್ತೆ ಮುಕ್ತ ವರ್ಗ. ಹೀಗಾಗಿ ದೆಹಲಿಗೆ ಈ ವರ್ಷ ಮಹಿಳಾ ಮೇಯರ್ ಸಿಗಲಿದ್ದಾರೆ.
- ಕಳೆದ ವರ್ಷ ಪಾಲಿಕೆಯ ಮೂರು ವಿಭಾಗಗಳ ವಿಲೀನದ ನಂತರ 10 ವರ್ಷಗಳಲ್ಲಿ ಇಲ್ಲಿ ಮೇಯರ್ ಆಗುತ್ತಿರುವುದು ಇದೇ ಮೊದಲು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ