ರಾಜಧಾನಿ ದೆಹಲಿಯಲ್ಲಿ 85 ವರ್ಷದ ವೃದ್ಧೆ ತುಟಿ ಕೊಯ್ದು ಅತ್ಯಾಚಾರ; 28 ವರ್ಷದ ವ್ಯಕ್ತಿ ಬಂಧನ

ದೆಹಲಿಯ ನೇತಾಜಿ ಸುಭಾಷ್ ಪ್ರದೇಶದ ಸ್ಲಂವೊಂದರಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ 85 ವರ್ಷದ ಅಜ್ಜಿ ಮೇಲೆ ಮುಂಜಾನೆ 4 ಗಂಟೆಯ ಸುಮಾರಿಗೆ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಅಜ್ಜಿ ಮೇಲೆ ಹಲ್ಲೆ ಮಾಡಿ ಅತ್ಯಾಚಾರ ಎಸಗಿ ಬ್ಲೇಡ್‌ನಿಂದ ಅವಳ ತುಟಿಯನ್ನು ಕತ್ತರಿಸಿ ಕತ್ತು ಹಿಸುಕಲು ಪ್ರಯತ್ನಿಸಿದ್ದಾನೆ. ಆಕೆಯ ದೇಹ ಮತ್ತು ಖಾಸಗಿ ಭಾಗಗಳಿಗೆ ಗಾಯಗಳಾಗಿವೆ ಎಂದು ಸ್ಲಂನ ನಿವಾಸಿಯೊಬ್ಬರು ತಿಳಿಸಿದ್ದಾರೆ.

ರಾಜಧಾನಿ ದೆಹಲಿಯಲ್ಲಿ 85 ವರ್ಷದ ವೃದ್ಧೆ ತುಟಿ ಕೊಯ್ದು ಅತ್ಯಾಚಾರ; 28 ವರ್ಷದ ವ್ಯಕ್ತಿ ಬಂಧನ
ಪ್ರಾತಿನಿಧಿಕ ಚಿತ್ರ
Edited By:

Updated on: Sep 02, 2023 | 9:51 AM

ದೆಹಲಿ, ಸೆ.02: ದೆಹಲಿಯ ನೇತಾಜಿ ಸುಭಾಷ್ ಪ್ರದೇಶದಲ್ಲಿ ಶುಕ್ರವಾರ 85 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ನಡೆದಿದ್ದು ಘಟನೆ ಸಂಬಂಧ 28 ವರ್ಷದ ಆಕಾಶ್ ಎಂಬಾತನನ್ನು ಪೊಲೀಸರು(Delhi Police) ಬಂಧಿಸಿದ್ದಾರೆ. ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ವೃದ್ಧೆಯ ಅತ್ಯಾಚಾರ ಸಂಬಂಧ ದೆಹಲಿ ಪೊಲೀಸರನ್ನು ಪ್ರಶ್ನಿಸಿ ಫೋಸ್ಟ್ ಹಾಕಿದ್ದರು. ಇದರಿಂದ ಎಚ್ಚೆತ್ತ ಪೊಲೀಸರು 28 ವರ್ಷದ ಆಕಾಶ್​ನನ್ನು ಬಂಧಿಸಿದ್ದಾರೆ.

ಶುಕ್ರವಾರ ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಮನೆಯಲ್ಲಿ ವೃದ್ಧೆ ಮಲಗಿದ್ದಾಗ ಏಕಾಏಕಿ ಮನೆಗೆ ನುಗ್ಗಿದ ಆರೋಪಿ ಆಕಾಶ್, ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ವೃದ್ಧೆಯ ತುಟಿ ಕೊಯ್ದು, ವೃದ್ಧೆಯ ಮುಖ, ಖಾಸಗಿ ಭಾಗಳಿಗೆ ಗಾಯ ಮಾಡಿ ಹೇಯ ಕೃತ್ಯ ಎಸಗಿದ್ದಾನೆ. ವೃದ್ಧೆಯ ಖಾಸಗಿ ಅಂಗಗಳಿಗೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಬಗ್ಗೆ ಖಾಸಗಿ ಸುದ್ದಿ ವಾಹಿನಿ ವರದಿ ಮಾಡಿದೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಅಮಾನವೀಯ ಕೃತ್ಯ: ಮಹಿಳೆಯನ್ನು ಥಳಿಸಿ ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಪತಿ ಮತ್ತು ಕುಟುಂಬಸ್ಥರು

ನೋಟಿಸ್‌ನಲ್ಲಿ, ಡಿಸಿಡಬ್ಲ್ಯೂ ಮುಖ್ಯಸ್ಥರು ದೆಹಲಿ ಪೊಲೀಸರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ವಿವರಗಳೊಂದಿಗೆ ಪ್ರಥಮ ಮಾಹಿತಿ ವರದಿಯ (ಎಫ್‌ಐಆರ್) ಪ್ರತಿಯನ್ನು ನೀಡುವಂತೆ ಕೇಳಿದ್ದಾರೆ.

ದೆಹಲಿಯ ನೇತಾಜಿ ಸುಭಾಷ್ ಪ್ರದೇಶದ ಸ್ಲಂವೊಂದರಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ 85 ವರ್ಷದ ಅಜ್ಜಿ ಮೇಲೆ ಮುಂಜಾನೆ 4 ಗಂಟೆಯ ಸುಮಾರಿಗೆ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಅಜ್ಜಿ ಮೇಲೆ ಹಲ್ಲೆ ಮಾಡಿ ಅತ್ಯಾಚಾರ ಎಸಗಿ ಬ್ಲೇಡ್‌ನಿಂದ ಅವಳ ತುಟಿಯನ್ನು ಕತ್ತರಿಸಿ ಕತ್ತು ಹಿಸುಕಲು ಪ್ರಯತ್ನಿಸಿದ್ದಾನೆ. ಆಕೆಯ ದೇಹ ಮತ್ತು ಖಾಸಗಿ ಭಾಗಗಳಿಗೆ ಗಾಯಗಳಾಗಿವೆ ಎಂದು ಸ್ಲಂನ ನಿವಾಸಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ