Aditya L1 Mission Launch Highlights: ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
PSLV-C57/Aditya L1 Solar Mission Launch Highlights: ಚಂದ್ರಯಾನ-3 ಯಶಸ್ಸಿನ ಬಳಿಕ ಇಸ್ರೋ ಇಂದು ಸೆಪ್ಟೆಂಬರ್ 2ರ ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಆದಿತ್ಯ ಎಲ್ 1 ಉಡಾವಣೆ ಮಾಡಿದೆ. ಇಸ್ರೋ ಆದಿತ್ಯ ಎಲ್-1 ನೌಕೆಯನ್ನ ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ದೂರದ ಲಾಂಗ್ರೇಜ್ ಪಾಯಿಂಟ್‌ಗೆ ತಲುಪಿಸಿ, ಸೂರ್ಯನ ಬಗ್ಗೆ ಅಧ್ಯಯನ ನಡೆಸಲಿದೆ. ಆದಿತ್ಯ L-1 ಉಡಾವಣೆ ಡಿಜಿಟಲ್ ಲೈವ್ನಲ್ಲಿ ವೀಕ್ಷಿಸಿ.
ಚಂದ್ರಯಾನ-3ರ(Chandrayaan 3) ಯಶಸ್ಸಿನ ಬಳಿಕ ಇಸ್ರೋ(ISRO) ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಚಂದ್ರಲೋಕವನ್ನು ಗೆದ್ದು ಬೀಗಿ ಇದೀಗ ಸೂರ್ಯನತ್ತ(Sun) ಹೊರಟಿದೆ. ಶನಿವಾರ ಬೆಳಗ್ಗೆ 11.50ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಮಹತ್ವಕಾಂಕ್ಷೆಯ ಆದಿತ್ಯ ಎಲ್1 ಮಿಷನ್(Aditya L1 Mission) ಲಾಂಚ್ ಆಗಿದೆ. PSLV-C57, ಆದಿತ್ಯ ಎಲ್-1 ನೌಕೆಯನ್ನ ನಭಕ್ಕೆ ಹೊತ್ತೊಯ್ಯಲಿದೆ. ಆದಿತ್ಯ ಎಲ್1, ಭಾರತದ ಮೊಟ್ಟ ಮೊದಲ ಸೂರ್ಯ ಮಿಷನ್. ಆದಿತ್ಯ ಎಲ್1, ನಿಗದಿತ ಗುರಿ ತಲುಪುವುದಕ್ಕೆ ಬರೋಬ್ಬರಿ 125 ದಿನ ಹಿಡಿಯುತ್ತೆ. ಅಂದ್ರೆ ನಾಲ್ಕು ತಿಂಗಳು. ನಾಲ್ಕು ತಿಂಗಳ ಬಳಿಕ ಎಲ್1 ಪಾಯಿಂಟ್ ತಲುಪುತ್ತೆ. ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಈ ಲ್ಯಾಗ್ರೇಂಜ್ ಪಾಯಿಂಟ್ 1 ಅಥವಾ ಎಲ್1 ಪಾಯಿಂಟ್ ಬಳಿಯೇ ಸುತ್ತುತ್ತಾ 5ವರ್ಷ ಸೂರ್ಯನ ಅಧ್ಯಯನ ಮಾಡಲಿದೆ. ಹೀಗಾಗಿಯೇ ಈ ನೌಕೆಗೆ ಆದಿತ್ಯ ಎಲ್1 ಅಂತಾ ನಾಮಕರಣ ಮಾಡಲಾಗಿದೆ. ಸೂರ್ಯನತ್ತ ಆದಿತ್ಯ L-1 ಉಡಾವಣೆಯ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
LIVE NEWS & UPDATES
-
Aditya L1 Mission Launch Live: ಆದಿತ್ಯ ಎಲ್-1 ನೌಕೆ ಉಡಾವಣೆ ಯಶಸ್ವಿ; ಎಸ್ ಸೋಮನಾಥ್
ಇಸ್ರೋದ ಮಹತ್ವಾಕಾಂಕ್ಷಿ ಆದಿತ್ಯ ಎಲ್-1 ನೌಕೆ ಉಡಾವಣೆ ಯಶಸ್ವಿಯಾಗಿದೆ. 4ನೇ ಹಂತದಲ್ಲೂ ನೌಕೆ-ರಾಕೆಟ್ ಬೇರ್ಪಡುವ ಕಾರ್ಯ ಯಶಸ್ವಿಯಾಗಿದೆ. ಆದಿತ್ಯ ಎಲ್-1 ನೌಕೆ ಯಶಸ್ವಿ ಉಡಾವಣೆಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್ ಅಭಿನಂದಿಸಿದರು.
-
Aditya L1 Mission Launch Live: ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
ನಮ್ಮ ದೇಶದ ವಿಜ್ಞಾನಿಗಳ ಕಠಿಣ ಪರಿಶ್ರಮ ಮುಂದುವರಿಯಲಿದೆ. ಸಂಪೂರ್ಣ ಮಾನವನ ಕಲ್ಯಾಣಕ್ಕಾಗಿ ಪರಿಶ್ರಮ ಮುಂದುವರಿಯಲಿದೆ ಎಂದು ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು.
After the success of Chandrayaan-3, India continues its space journey.
Congratulations to our scientists and engineers at @isro for the successful launch of India’s first Solar Mission, Aditya -L1.
Our tireless scientific efforts will continue in order to develop better…
— Narendra Modi (@narendramodi) September 2, 2023
-
Aditya L1 Mission Launch Live: ಇಸ್ರೋ ವಿಜ್ಞಾನಿಗಳಿಗೆ ಶ್ಲಾಘಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್
ಆದಿತ್ಯ L-1 ನೌಕೆ ಯಶಸ್ವಿಯಾಗಿ ಉಡಾವಣೆಯಾದ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಸಂಭ್ರಮಾಚರಿಸಿದರು. ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರಿಗೆ ಮತ್ತು ಅವರ ನೇತೃತ್ವದ ವಿಜ್ಞಾನಿಗಳ ತಂಡಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
Aditya L1 Mission Launch Live: ಆದಿತ್ಯ ಎಲ್ 1 ನಿಗದಿತ ಸ್ಥಳಕ್ಕೆ ತಲುಪಲು 4 ತಿಂಗಳು ಸಮಯ ಬೇಕು
ಇಸ್ರೋದ ಮತ್ತೊಂದು ಮಹತ್ವಾಕಾಂಕ್ಷಿ ಆದಿತ್ಯ ಎಲ್-1 ನೌಕೆ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಿದೆ. ಉಪಗ್ರಹವನ್ನು ಹೊತ್ತ PSLV-XLC57 ರಾಕೆಟ್ ನಿಗದಿತ ಕಕ್ಷೆಯಲ್ಲಿ ಸಂಚರಿಸುತ್ತಿದೆ. ಆದಿತ್ಯ ಎಲ್-1 ನೌಕೆ ಒಟ್ಟು 15 ಲಕ್ಷ ಕಿ.ಮೀ. ದೂರ ಸಂಚರಿಸಲಿದ್ದು, ನಿಗದಿತ ಸ್ಥಳಕ್ಕೆ ತಲುಪಲು ನಾಲ್ಕು ತಿಂಗಳ ಕಾಲ ಸಮಯ ಬೇಕು. ಈ ಆದಿತ್ಯ ಎಲ್ 1 ಸೂರ್ಯನ ಮೇಲ್ಮೈ, ಸೂರ್ಯನ ಕಿರಣ, ತಾಪಮಾನ, ಸೌರಜ್ವಾಲೆ, ಸೂರ್ಯನ ಸುತ್ತಲಿನ ವಾತಾವರಣ ಅಧ್ಯಯನ ಮಾಡಲಿದೆ.
Aditya L1 Mission Launch Live: 3, 4ನೇ ಹಂತದಲ್ಲೂ ರಾಕೆಟ್ನಿಂದ ಬೇರ್ಪಟ್ಟ ನೌಕೆ
ಉಪಹಗ್ರಹವನ್ನು ಹೊತ್ತ PSLV-XLC57 ರಾಕೆಟ್ ನಿಗದಿತ ಕಕ್ಷೆಯಲ್ಲಿ ಸಂಚರಿಸುತ್ತಿದೆ. 3ನೇ ಹಂತದಲ್ಲೂ ರಾಕೆಟ್ನಿಂದ ಯಶಸ್ವಿಯಾಗಿ ನೌಕೆ ಬೇರ್ಪಟ್ಟಿದೆ. 4ನೇ ಹಂತದಲ್ಲೂ ನೌಕೆ-ರಾಕೆಟ್ ಬೇರ್ಪಡುವ ಕಾರ್ಯ ಯಶಸ್ವಿಯಾಗಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್-1 ನೌಕೆ ಜೊತೆ PSLV-XLC57 ರಾಕೆಟ್ ನಭಕ್ಕೆ ಹಾರಿದೆ.
Aditya L1 Mission Launch Live: ನಿಗದಿತ ಕಕ್ಷೆಯಲ್ಲಿ ಸಂಚರಿಸುತ್ತಿರುವ PSLV-XLC57 ರಾಕೆಟ್
ಇಸ್ರೋದ ಮತ್ತೊಂದು ಮಹತ್ವಾಕಾಂಕ್ಷಿ ಆದಿತ್ಯ ಎಲ್-1 ನೌಕೆ ಉಡಾವಣೆಯಾಗಿದ್ದು, ಉಪಹಗ್ರಹವನ್ನು ಹೊತ್ತ PSLV-XLC57 ರಾಕೆಟ್ ನಿಗದಿತ ಕಕ್ಷೆಯಲ್ಲಿ ಸಂಚರಿಸುತ್ತಿದೆ. ರಾಕೆಟ್ 1 ಮತ್ತು 2ನೇ ಹಂತದಲ್ಲಿ ಯಶಸ್ವಿಯಾಗಿ ಬೇರ್ಪಡೆಯಾಗಿದೆ.
Aditya L1 Mission Launch Live: ಯಶಸ್ವಿಯಾಗಿ ಸೂರ್ಯನತ್ತ ಹಾರಿದ ಆದಿತ್ಯ L1
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಮಹತ್ವಕಾಂಕ್ಷೆಯ ಆದಿತ್ಯ ಎಲ್1 ಮಿಷನ್(Aditya L1 Mission) ಯಶಸ್ವಿಯಾಗಿ ಉಡಾವಣೆಯಾಗಿದೆ.
Aditya L1 Mission Launch Live: ಹೇಗಿದ್ದಾನೆ ಸೂರ್ಯ?
ಸೂರ್ಯ ಭೂಮಿಯಿಂದ 15 ಕೋಟಿ ಕಿ.ಮೀ.ಗಳಷ್ಟು ದೂರನಿದ್ದಾನೆ. ಸೂರ್ಯನ ವಯಸ್ಸು 4.5 ಬಿಲಿಯನ್ ವರ್ಷಗಳು. ಹೈಡ್ರೋಜನ್ & ಹೀಲಿಯಂ ಗ್ಯಾಸ್‌ನ ಕೆಂಡದುಂಡೆ ಸೂರ್ಯ. ಮೇಲ್ಮೈನಲ್ಲಿ 5,500 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಮಧ್ಯಭಾಗ ಕೋರ್‌ನಲ್ಲಿ ಊಹಿಸಲಾಗದಷ್ಟು ಶಾಖವಿದೆ. 1.5ಕೋಟಿ ಡಿಗ್ರಿ ಸೆಲ್ಸಿಯಸ್‌ನ ಗರಿಷ್ಠ ತಾಪಮಾನವಿದೆ.
Aditya L1 Mission Launch Live: ಕೆಲವೇ ಕ್ಷಣದಲ್ಲಿ ನಭಯಕ್ಕೆ ಹಾರಲಿದೆ ಆದಿತ್ಯ L1
ಕೆಲವೇ ಕ್ಷಣದಲ್ಲಿ ನಭಯಕ್ಕೆ ಹಾರಲಿದೆ ಆದಿತ್ಯ L1
Here is the brochure: https://t.co/5tC1c7MR0u
and a few quick facts:🔸Aditya-L1 will stay approximately 1.5 million km away from Earth, directed towards the Sun, which is about 1% of the Earth-Sun distance. 🔸The Sun is a giant sphere of gas and Aditya-L1 would study the… pic.twitter.com/N9qhBzZMMW
— ISRO (@isro) September 1, 2023
Aditya L1 Mission Launch Live: ಆದಿತ್ಯ L-1 ಉಡಾವಣೆ ಲೈವ್ ವೀಕ್ಷಿಸಿ
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್1 ಮಿಷನ್ ಲಾಂಚ್ ಲೈವ್.
Aditya L1 Mission Launch Live: ಬೆಂಗಳೂರಿನಲ್ಲಿ ಇಸ್ರೋ ಸಂಸ್ಥೆಗೆ ಜಾಗ ನೀಡಿದ್ದು ಕಾಂಗ್ರೆಸ್ -ಬಿ.ಕೆ.ಹರಿಪ್ರಸಾದ್
ಇಸ್ರೋದ ಮಹತ್ವಾಕಾಂಕ್ಷಿ ಆದಿತ್ಯ L-1 ನೌಕೆ ಉಡಾವಣೆ ವಿಚಾರ ಸಂಬಂಧ ಕಲಬುರಗಿಯಲ್ಲಿ ಕಾಂಗ್ರೆಸ್ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ವೈಜ್ಞಾನಿಕ ನೆಲಗಟ್ಟಿನಲ್ಲಿ ಅಚಲ ನಂಬಿಕೆ ಇಟ್ಟುಕೊಂಡಿದೆ. ನಾವು ಬಿಜೆಪಿಯವರ ರೀತಿ ಮೂಢನಂಬಿಕೆ ಇಟ್ಟುಕೊಂಡಿಲ್ಲ. ಬೆಂಗಳೂರಿನಲ್ಲಿ ಇಸ್ರೋ ಸಂಸ್ಥೆಗೆ ಜಾಗ ನೀಡಿದ್ದು ಕಾಂಗ್ರೆಸ್ ಸರ್ಕಾರ. ಚಂದ್ರಯಾನದ ಬಹುತೇಕ ವಿಜ್ಞಾನಿಗಳು ಹಿಂದುಳಿದ ವರ್ಗದವರು. ಅಧಿಕಾರ ಬಂದಾಗ ಕೆಲವೇ ಸಮುದಾಯ ಅಧಿಕಾರ ಅನುಭವಿಸ್ತಿದೆ. ಎಲ್ಲಾ ವರ್ಗದವರಿಗೂ ಅಧಿಕಾರ ಸಿಗುವಂತಾಗಲಿ ಎಂದು ಕಲಬುರಗಿಯಲ್ಲಿ ಕಾಂಗ್ರೆಸ್ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಹೇಳಿದರು.
Aditya L1 Mission Launch Live: ಇಸ್ರೋಗೆ ಶುಭ ಹಾರೈಸಿದ ಡಿಕೆ ಶಿವಕುಮಾರ್
ಇಸ್ರೋದ ಮಹತ್ವಾಕಾಂಕ್ಷಿ ಆದಿತ್ಯ L-1 ನೌಕೆ ಉಡಾವಣೆ ಹಿನ್ನೆಲೆ ಯಶಸ್ಸು ಸಿಗಲಿ ಎಂದು ನಾನು ಶುಭ ಹಾರೈಸುತ್ತೇನೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಭ ಹಾರೈಸಿದ್ದಾರೆ. ಇಸ್ರೋ ವಿಜ್ಞಾನಿಗಳು ಭಾರತಕ್ಕೆ ಗೌರವ ತರುವ ಕೆಲಸ ಮಾಡ್ತಿದ್ದಾರೆ. ವಿಜ್ಞಾನಿಗಳಿಗಾಗಿ ಇಡೀ ದೇಶದ ಜನರು ಪ್ರಾರ್ಥನೆ ಮಾಡುತ್ತಿದ್ದಾರೆ ಎಂದರು.
Aditya L1 Mission Launch Live: 7 ವೈಜ್ಞಾನಿಕ ಉಪಕರಣಗಳನ್ನ ಹೊತ್ತು ಸೂರ್ಯಶೋಧಕ್ಕೆ ಆದಿತ್ಯ ಎಲ್1
ಆದಿತ್ಯ ಎಲ್1 ನೌಕೆ, ಒಟ್ಟು 7 ವೈಜ್ಞಾನಿಕ ಉಪಕರಣಗಳನ್ನ ಹೊತ್ತು ಸೂರ್ಯಶೋಧಕ್ಕೆ ಹೊರಡುತ್ತಿದೆ. ಇದರಲ್ಲಿ ಮೂರು ಉಪಕರಣಗಳು ಸೂರ್ಯನನ್ನು ನೋಡುತ್ತಾ ವಿವಿಧ ಭಾಗಗಳ ಅಧ್ಯಯನ ಮಾಡುತ್ತೆ. ಉಳಿದ ಮೂರು ಉಪಕರಣಗಳು, ಸೂರ್ಯನಿಂದ ಬರುವ ವಿಕಿರಣ ಮತ್ತು ವಸ್ತುಗಳನ್ನು ಅಳತೆ ಮಾಡುವ ಕೆಲಸ ಮಾಡುತ್ತೆ. ವಿಶೇಷ ಅಂದ್ರೆ ಆದಿತ್ಯ ಎಲ್1ನಲ್ಲಿರುವ ಉಪಕರಣಗಳು ಎಲ್1 ಪಾಯಿಂಟ್‌ನಲ್ಲೇ ಸುತ್ತುತ್ತಾ ಕೃತಕ ಗ್ರಹಣ ಕೂಡ ಸೃಷ್ಟಿಸಬಲ್ಲವು.
Aditya L1 Mission Launch Live: ಇಸ್ರೋದಿಂದ ಸೂರ್ಯನ ಶೋಧ ಯಾಕೆ?
ಸೂರ್ಯ ಭೂಮಿಗೆ ಸಮೀಪದಲ್ಲಿರುವ ನಕ್ಷತ್ರ. ಸೌರಮಂಡಲದಲ್ಲಿನ ಅತ್ಯಂತ ದೊಡ್ಡ ಆಕಾಶಕಾಯ. ನಮ್ಮ ಸೌರಮಂಡಲದ ಶಕ್ತಿಯ ಮೂಲವೇ ಸೂರ್ಯ. ಸೂರ್ಯ ತನ್ನ ಗುರುತ್ವಾಕರ್ಷಣೆಯಿಂದ ಇಡೀ ಸೌರಮಮಂಡಲದ ಎಲ್ಲಾ ವಸ್ತುಗಳನ್ನು ಹಿಡಿದಿಟ್ಟುಕೊಂಡಿದ್ದಾನೆ. ಇತರೆ ನಕ್ಷತ್ರಗಳಿಗೆ ಹೋಲಿಸಿದ್ರೆ ಸೂರ್ಯನನ್ನು ವಿಸ್ತಾರವಗಾಗಿ ಅಧ್ಯಯನ ಮಾಡುವ ಅವಕಾಶ ಇದೆ. ಸೂರ್ಯನ ಸ್ಫೋಟದ ವಿದ್ಯಮಾನವನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತೆ.
Aditya L1 Mission Launch Live: ಬೆಂಗಳೂರಿನ ನೆಹರು ತಾರಾಲಯದಲ್ಲಿ ಆದಿತ್ಯ ಎಲ್ -1 ಮಾದರಿ
ಆದಿತ್ಯ ಎಲ್1 ಸೂರ್ಯನತ್ತ ಹಾರಲು ಸಿದ್ದವಾಗಿದ್ದು ಮತ್ತೊಂದೆಡೆ ಬೆಂಗಳೂರಿನ ನೆಹರು ತಾರಾಲಯದಲ್ಲಿ ಆದಿತ್ಯ ಎಲ್ -1 ಬಗ್ಗೆ ಪರಿಚಯಿಸಲು ಮಾಡಲ್ ಸಿದ್ದಪಡಿಸಲಾಗಿದೆ. ಈ ಮೂಲಕ ಜನರಿಗೆ ಇಂಚಿಂಚ್ಚು ಮಾಹಿತಿಯನ್ನ ವಿವರಿಸಲಾಗುತ್ತಿದೆ. ಆದಿತ್ಯ ಎಲ್ -1 ಉಡಾವಣೆ ಹೇಗೆ? ಹೇಗೆ ಎಲ್ -1 ಕಕ್ಷೆ ತಲುಪುತ್ತೆ? ಇನ್ನು ಎಲ್ -1 ಕಕ್ಷೆ ಅಂದ್ರೆ ಏನು ಇತಂಹ ಕಂಪ್ಲೀಟ್ ಮಾಹಿತಿಯನ್ನ ಪರಿಚಯಿಸಲು ಮುಂದಾಗಿದೆ.
Aditya L1 Mission Launch Live: ಇಸ್ರೋದ ‘ಸೂರ್ಯ’ಯಾನಕ್ಕೆ ಶುಭ ಹಾರೈಸಿದ ಪುಟಾಣಿಗಳು
ಇಸ್ರೋದಿಂದ ಆದಿತ್ಯ ಎಲ್ -1 ಉಡಾವಣೆಗೆ ಕ್ಷಣಗಣನೆ ಹಿನ್ನೆಲೆ ನಾಟಕದ ಮೂಲಕ ಪುಟಾಣಿಗಳಿಂದ ಶುಭ ಹಾರೈಸಿದ್ದಾರೆ. ಧಾರವಾಡದ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಂದ್ರಯಾನ 3 ಕುರಿತಾದ ನಾಟಕದ ಮೂಲಕ ಇಸ್ರೋಗೆ ಶುಭ ಹಾರೈಸಿದ್ದಾರೆ.
Aditya L1 Mission Launch Live: ಆದಿತ್ಯ-ಎಲ್1 ಯಶಸ್ವಿ ಉಡಾವಣೆಗಾಗಿ ದೇವರ ಮೊರೆ ಹೋದ ಇಸ್ರೋ ಅಧ್ಯಕ್ಷ
ಆದಿತ್ಯ ಎಲ್1 ಯೋಜನೆಯ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಸೂರ್ಯಯಾನ ಯಶಸ್ವಿಯಾಗಲಿ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ದೇವರ ಮೊರೆ ಹೋಗಿದ್ದಾರೆ. ಆಂಧ್ರಪ್ರದೇಶದ ತಿರುಪತಿಯ ಸುಳ್ಳೂರುಪೇಟೆಯ ಚೆಂಗಾಲಮ್ಮ ಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಿಷನ್ ಆದಿತ್ಯ L1 ಯಶಸ್ವಿಯಾಗಲಿ ಎಂದು ಪೂಜೆ ಸಲ್ಲಿಸಿದರು.
Aditya L1 Mission Launch Live: ಆದಿತ್ಯ-ಎಲ್1 ಬಗೆಗಿನ ತಪ್ಪು ಕಲ್ಪನೆಗಳ ಬಗ್ಗೆ ಇಸ್ರೋ ನೀಡಿದ ಸ್ಪಷ್ಟನೆ ಇಲ್ಲಿದೆ
ಆದಿತ್ಯ-ಎಲ್1 ಬಗೆಗೆ ಜನರಲ್ಲಿರುವ ತಪ್ಪು ಕಲ್ಪನೆಗಳ ಬಗ್ಗೆ ಇಸ್ರೋ ಸ್ಪಷ್ಟನೆ ನೀಡಿದೆ. ಅದರ ಮಾಹಿತಿ ಇಲ್ಲಿದೆ.
Aditya L1 Mission Launch Live: ಆದಿತ್ಯ L-1 ಉಡಾವಣೆ ಸಮಯ, ಸ್ಥಳ
sಊರ್ಯನ ಅಧ್ಯಯನ ಮಾಡುವ ಉದ್ದೇಶದಿಂದ ಇಸ್ರೋ ಆದಿತ್ಯ ಎಲ್-1 (Aditya L1) ನೌಕೆಯನ್ನು ಇಂದು (ಸೆಪ್ಟೆಂಬರ್ 2) ರಂದು ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಿದೆ.
Aditya L1 Mission Launch Live: ಸೂರ್ಯಯಾನಕ್ಕೆ ಕ್ಷಣಗಣನೆ
ಆದಿತ್ಯ ಎಲ್1, ಭಾರತದ ಮೊಟ್ಟ ಮೊದಲ ಸೂರ್ಯ ಮಿಷನ್ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.
Published On - Sep 02,2023 10:29 AM