ದೆಹಲಿ: ತಾತನ ಮಡಿಲಿನಲ್ಲಿದ್ದ ಮಗುವಿಗೆ ಕಚ್ಚಿ ಗಾಯಗೊಳಿಸಿದ ಪಿಟ್ ಬುಲ್ ನಾಯಿ; ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಜನವರಿ 2 ರಂದು ದೆಹಲಿಯ ಬುರಾರಿಯಿಂದ ಈ ಘಟನೆ ವರದಿಯಾಗಿದೆ. ಬಾಲಕಿ 17 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದಳು, ಅಲ್ಲಿ ವೈದ್ಯರು 18 ಹೊಲಿಗೆಗಳನ್ನು ಹಾಕಿದರು. ಆಕೆ ಇವತ್ತು(ಶುಕ್ರವಾರ) ಮನೆಗೆ ಬಂದಿದ್ದಾಳೆ. ನಾಯಿಯ ಮಾಲೀಕರು ಮತ್ತು ಆರೇಳು ವ್ಯಕ್ತಿಗಳು ಪಿಟ್ ಬುಲ್ ಅನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸುತ್ತದೆ
ದೆಹಲಿ ಜನವರಿ 19: ದೆಹಲಿಯ (Delhi) ಬುರಾರಿಯಲ್ಲಿ ತಾತನ ಮಡಿಲಲ್ಲಿದ್ದ ಹೆಣ್ಣು ಮಗುವಿಗೆ ಪಿಟ್ ಬುಲ್ (Pit Bull) ನಾಯಿ ಹಾರಿ ಕಚ್ಚಿದ್ದು ಆಕೆಯ ಕಾಲಿಗೆ ಗಾಯಗಳಾಗಿವೆ. ಪಿಟ್ ಬುಲ್ ಮಗುವಿನ ಮೇಲೆ ದಾಳಿ ನಡೆಸುತ್ತಿರುವುದು ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ಈ ದೃಶ್ಯಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಒಂದೂವರೆ ವರ್ಷದ ಮಗುವಿನ ಕಾಲಿನ ಹಲವು ಭಾಗಗಳಲ್ಲಿ ಹೊಲಿಗೆ ಹಾಕಲಾಗಿದ್ದು, ಮೂರು ಫ್ರಾಕ್ಚರ್ ಆಗಿದೆ ಎಂದು ಆಕೆಯ ಪೋಷಕರು ತಿಳಿಸಿದ್ದಾರೆ.
ಜನವರಿ 2 ರಂದು ದೆಹಲಿಯ ಬುರಾರಿಯಿಂದ ಈ ಘಟನೆ ವರದಿಯಾಗಿದೆ. ಬಾಲಕಿ 17 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದಳು, ಅಲ್ಲಿ ವೈದ್ಯರು 18 ಹೊಲಿಗೆಗಳನ್ನು ಹಾಕಿದರು. ಆಕೆ ಇವತ್ತು(ಶುಕ್ರವಾರ) ಮನೆಗೆ ಬಂದಿದ್ದಾಳೆ. ನಾಯಿಯ ಮಾಲೀಕರು ಮತ್ತು ಆರೇಳು ವ್ಯಕ್ತಿಗಳು ಪಿಟ್ ಬುಲ್ ಅನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸುತ್ತದೆ. ಮಗುವನ್ನು ಎಳೆಯಲು ಸುಮಾರು ಒಂದು ನಿಮಿಷ ಬೇಕಾಯಿತು.
ವಿಡಿಯೊದಲ್ಲಿ, ಹೆಣ್ಣು ಮಗು ತನ್ನ ತಾಯಿಯ ಮಡಿಲಲ್ಲಿ ಅಳುತ್ತಿರುವುದನ್ನು ಕಾಣಬಹುದು, ಆಕೆಯ ಕಾಲಿಗೆ ಸಂಪೂರ್ಣವಾಗಿ ಪ್ಲಾಸ್ಟರ್ ಮತ್ತು ಬ್ಯಾಂಡೇಜ್ ಸುತ್ತಲಾಗಿತ್ತು.
ಅಕ್ಕಪಕ್ಕದಲ್ಲಿ ಅನಾಹುತ ತಡೆಯಲು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: 6 ನಾಯಿಮರಿಗಳ ಸಾವಿಗೆ ಕಾರಣ ಆರೋಪ: ದಂಡ ಹೆಚ್ಚಳಕ್ಕೆ ಹೈಕೋರ್ಟ್ ನಕಾರ
ಭಾರತದಲ್ಲಿ ಪಿಟ್ ಬುಲ್ ನಾಯಿಗಳನ್ನು ನಿಷೇಧಿಸಲಾಗಿದೆ, ಆದರೂ ಅನೇಕ ಜನರು ಈ ತಳಿಯನ್ನು ಸಾಕುಪ್ರಾಣಿಯಾಗಿ ಇಟ್ಟುಕೊಳ್ಳುತ್ತಾರೆ. ಬುರಾರಿ ಪೊಲೀಸ್ ಠಾಣೆಯ ಕೆಲವು ಪೊಲೀಸರು ನಾಯಿಯ ಮಾಲೀಕರೊಂದಿಗೆ ವಿಷಯವನ್ನು ಬಗೆಹರಿಸುವಂತೆ ಒತ್ತಾಯಿಸಿದರು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ, ನಾಯಿಯ ಮಾಲೀಕರು ಇನ್ನೂ ಸ್ವಚ್ಛಂದವಾಗಿ ತಿರುಗಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:57 pm, Fri, 19 January 24