ದೆಹಲಿ: ಪ್ರಗತಿ ಮೈದಾನದ ಸುರಂಗದೊಳಗೆ (Pragati Maidan tunnel) ಹಾಡಹಗಲೇ ನಡೆದ ದರೋಡೆ (robbery ) ಪ್ರಕರಣವನ್ನು ಮೂರು ದಿನಗಳಲ್ಲಿ ದೆಹಲಿ ಪೊಲೀಸರು (Delhi Police) ಭೇದಿಸಿದ್ದು, ಮಂಗಳವಾರ ದರೋಡೆಯಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಸೋಮವಾರ ತಡರಾತ್ರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ಉಳಿದ ಇಬ್ಬರನ್ನು ಮಂಗಳವಾರ ಬೆಳಿಗ್ಗೆ ಬಂಧಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಆಸ್ಪತ್ರೆಯಲ್ಲಿ ನಿಯೋಜಿಸಲಾದ ಪೊಲೀಸರ ಚುರುಕು ಬುದ್ಧಿ ಮತ್ತು ಸ್ಮರಣೆ ಶಕ್ತಿ ಪ್ರಕರಣವನ್ನು ತ್ವರಿತವಾಗಿ ಭೇದಿಸಲು ಅವರಿಗೆ ಸಹಾಯ ಮಾಡಿತು. ಲಭ್ಯವಿರುವ ಮಾಹಿತಿ ಪ್ರಕಾರ, ಎಲ್ಲಾ ನಾಲ್ವರು ಆರೋಪಿಗಳು ಉತ್ತರ ದೆಹಲಿಯ ಬುರಾರಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ದರೋಡೆಗೆ ಒಂದು ದಿನ ಮೊದಲು, ಅವರ ಸಹಾಯಕರೊಬ್ಬರು ಮನೆಯಲ್ಲಿ ಪಾರ್ಟಿ ಮಾಡುವಾಗ ಆಕಸ್ಮಿಕವಾಗಿ ಗುಂಡು ಹಾರಿಸಿದ್ದರಿಂದ ಗುಂಡು ತಗುಲಿತು. ನಾಲ್ವರೂ ಗಾಯಗೊಂಡಿದ್ದ ತಮ್ಮ ಸಹಾಯಕನನ್ನು ಅಪಾಚೆ ಬೈಕ್‌ನಲ್ಲಿ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಒಂದು ದಿನದ ನಂತರ ಅದೇ ಅಪಾಚೆ ಬೈಕ್ ಅನ್ನು ಅಪರಾಧಕ್ಕೆ ಬಳಸಿದ್ದಾರೆ.
ದರೋಡೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಆರೋಪಿಗಳು ಆಸ್ಪತ್ರೆಗೆ ಹೋದಾಗ ಅಲ್ಲಿದ್ದ ಪೊಲೀಸರು ದ್ವಿಚಕ್ರ ವಾಹನವನ್ನು ಗುರುತಿಸಿದ್ದಾರೆ. ಹೆಚ್ಚಿನ ತನಿಖೆಗಳು ಮತ್ತು ಸಿಸಿಟಿವಿ ದೃಶ್ಯಗಳ ಪರಿಶೀಲನೆಯ ನಂತರ ಅಪರಾಧಿಗಳನ್ನು ಹಿಡಿಯುವಲ್ಲಿ ದೆಹಲಿ ಪೊಲೀಸರು ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ. ವರದಿಗಳ ಪ್ರಕಾರ, ಪೊಲೀಸರು ದಾಳಿ ನಡೆಸಿದಾಗ ಎಲ್ಲಾ ಆರೋಪಿಗಳು ಗಾಯಗೊಂಡ ಅವರ ಸಹಾಯಕರೊಂದಿಗೆ ಆಸ್ಪತ್ರೆಯಲ್ಲಿ ಹಾಜರಿದ್ದರು.
VIDEO | Four motorcycle-borne robbers, allegedly belonging to the Thak Thak gang, looted a man travelling in a cab inside Delhi’s Pragati Maidan tunnel at gunpoint and fled the spot. The incident was caught in one of the CCTV cameras installed inside the tunnel. pic.twitter.com/nPqea7iz2E
— Press Trust of India (@PTI_News) June 26, 2023
ಚಾಂದಿನಿ ಚೌಕ್ ಮೂಲದ ಖಾಸಗಿ ಸಂಸ್ಥೆಯ ಇಬ್ಬರು ಉದ್ಯೋಗಿಗಳು ಶನಿವಾರ ಬಾಡಿಗೆ ಕ್ಯಾಬ್‌ನಲ್ಲಿ ಗುರ್‌ಗಾಂವ್‌ಗೆ ತೆರಳುತ್ತಿದ್ದಾಗ ಪ್ರಗತಿ ಮೈದಾನದ ಸುರಂಗದೊಳಗೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದರೋಡೆಕೋರರು ಅವರನ್ನು ಅಡ್ಡಗಟ್ಟಿ 2 ಲಕ್ಷ ರೂ ದೋಚಿದ್ದಾರೆ. ಆರೋಪಿಗಳಲ್ಲಿ ಒಬ್ಬ ಬಂದೂಕು ತೋರಿಸಿ ಹೆದರಿಸಿದಾಗ ಇನ್ನೊಬ್ಬ ನಗದು ಇದ್ದ ಬ್ಯಾಗನ್ನು ಕಿತ್ತುಕೊಂಡಿರುವುದು ಸಿಸಿಟಿವಿ ದೃಶ್ಯಗಳಲ್ಲಿದೆ.
ಇದನ್ನೂ ಓದಿ: ನವದೆಹಲಿ: ಸುರಂಗದಲ್ಲಿ ಅಡ್ಡಗಟ್ಟಿ ಹಾಡಹಗಲೇ ದರೋಡೆ; ಎಲ್ಜಿ ರಾಜೀನಾಮೆ ನೀಡಬೇಕೆಂದು ಕೇಜ್ರಿವಾಲ್ ಪಟ್ಟು
ಪ್ರಗತಿ ಮೈದಾನದ ಸುರಂಗದ ಘಟನೆಯ ನಂತರ ದೆಹಲಿ ಪೊಲೀಸರು ತೀವ್ರ ಟೀಕೆಗೆ ಒಳಗಾಗಿದ್ದರು. ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ದೆಹಲಿಯ ಲೆಫ್ಟಿನೆಂಟ್ ಜನರಲ್ ವಿಕೆ ಸಕ್ಸೇನಾ ರಾಜೀನಾಮೆಗೆ ಒತ್ತಾಯಿಸಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಎಲ್ ಜಿ ರಾಜೀನಾಮೆ ನೀಡಬೇಕು. ರಾಷ್ಟ್ರ ರಾಜಧಾನಿಯಲ್ಲಿ ಜನರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವ ಯಾರಿಗಾದರೂ ದಾರಿ ಮಾಡಿಕೊಡಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:00 pm, Tue, 27 June 23