ನವದೆಹಲಿ, ಜೂನ್ 28: ದೆಹಲಿಯಲ್ಲಿ ಸುರಿದ ಮೊದಲ ಮಳೆ ಸಾರ್ವಜನಿಕರಿಗೆ ಮತ್ತು ಗಣ್ಯ ವ್ಯಕ್ತಿಗಳಿಗೂ ತೊಂದರೆ ಕೊಟ್ಟಿದೆ. ದೆಹಲಿಯ ಅತ್ಯಂತ ಐಷಾರಾಮಿ ಪ್ರದೇಶಗಳಲ್ಲಿ ವಾಸಿಸುವ ರಾಜಕೀಯ ನಾಯಕರನ್ನೂ ಮಳೆಯ ಅಬ್ಬರ ಬಿಟ್ಟಿಲ್ಲ. ಶುಕ್ರವಾರ ಬೆಳಗ್ಗೆ ಸಮಾಜವಾದಿ ಪಕ್ಷದ ಸಂಸದ ರಾಮ್ ಗೋಪಾಲ್ ಯಾದವ್ ಅವರ ಮನೆಗೂ ನೀರು ನುಗ್ಗಿದ್ದು, ಮನೆಯ ಆವರಣ ಜಲಾವೃತಗೊಂಡಿತು. ಸಂಸತ್ತಿಗೆ ತೆರಳಲು ಹೊರಟಿದ್ದ ಅವರನ್ನು ಬಳಿಕ ಸಿಬ್ಬಂದಿಯು ಎತ್ತಿಕೊಂಡು ಹೋಗಿ ಕಾರಿನಲ್ಲಿ ಕುಳ್ಳಿರಿಸಬೇಕಾಯಿತು.
ಸಂಸತ್ ಅಧಿವೇಶನದ ಕಾರಣ ರಾಮ್ ಗೋಪಾಲ್ ಅವರು ಸಂಸತ್ತಿಗೆ ತೆರಳಲು ಮನೆಯಿಂದ ಹೊರಟಿದ್ದು, ಅಷ್ಟರಲ್ಲಿ ಮನೆಯೊಳಗೆ ಮತ್ತು ಹೊರಭಾಗದಲ್ಲೆಲ್ಲ ನೀರು ತುಂಬಿತ್ತು. ಬಳಿಕ ಅವರ ಸಿಬ್ಬಂದಿ ಅವರನ್ನು ತೋಳುಗಳಲ್ಲಿ ಎತ್ತಿಕೊಂಡು ಸಾಗಿಸಬೇಕಾಯಿತು. ನೌಕರರು ಅವರನ್ನು ಎತ್ತಿಕೊಂಡು ಕರೆತಂದು ಕಾರಿನಲ್ಲಿ ಕೂರಿಸಿದರು. ಇದಾದ ನಂತರ ರಾಮ್ ಗೋಪಾಲ್ ಯಾದವ್ ಸಂಸತ್ತಿಗೆ ತೆರಳಿದರು.
#WATCH | Delhi: SP MP Ram Gopal Yadav being helped by members of his staff and others to his car as the area around his residence is completely inundated.
Visuals from Lodhi Estate area. pic.twitter.com/ytWE7MGbfY
— ANI (@ANI) June 28, 2024
ನಾನು ಸಂಸತ್ತಿಗೆ ಹೋಗಲು ಇಷ್ಟೆಲ್ಲ ಸಾಹಸ ಮಾಡಬೇಕಾಯಿತು ಎಂದು ಘಟನೆಯ ನಂತರ ರಾಮ್ ಗೋಪಾಲ್ ಯಾದವ್ ಮಳೆಯಿಂದ ಎದುರಿಸಿದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಜತೆಗೆ, ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
#WATCH | SP MP Ram Gopal Yadav says, “NDMC is not prepared. The rainfalls are late, still they didn’t clean the drains…If the drains are cleaned, this situation would never occur. A NITI Aayog member, ministers, MoS Home, other ministers, Navy Admiral, General live here. But… https://t.co/PlLZAUqWw5 pic.twitter.com/RKoAI1Raa4
— ANI (@ANI) June 28, 2024
ನಾನು ನಾಲ್ಕು ಗಂಟೆಯಿಂದ ಎನ್‌ಡಿಎಂಸಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೇನೆ. ಪಂಪ್ ತಂದು ನೀರು ತೆಗೆದರೆ ಮಾತ್ರ ಈ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಇಡೀ ಬಂಗಲೆ ನೀರಿನಿಂದ ತುಂಬಿದೆ. ಎರಡು ದಿನಗಳ ಹಿಂದೆಯಷ್ಟೇ ಫ್ಲೋರಿಂಗ್ ಮಾಡಿದ್ದೇವೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರ ಮೇಲ್ಛಾವಣಿ ಕುಸಿದು ಓರ್ವ ಸಾವು, ಹಲವರಿಗೆ ಗಾಯ!
ವಾಸ್ತವವಾಗಿ ಎನ್‌ಡಿಎಂಸಿ ಮಳೆಗೆ ಸಿದ್ಧವಾಗಿಲ್ಲ. ಇಷ್ಟು ತಡವಾಗಿ ಮಳೆ ಸುರಿದರೂ ಚರಂಡಿ ಸ್ವಚ್ಛಗೊಳಿಸಿಲ್ಲ. ಎಲ್ಲೆಲ್ಲಿ ಚರಂಡಿ ಸಮಸ್ಯೆ ಇದೆ, ಹಿಂದೆ ಸಮಸ್ಯೆ ಆಗಿತ್ತು ಎಂಬುದು ಎನ್‌ಡಿಎಂಸಿ ನೌಕರರಿಗೂ ಗೊತ್ತು. ಚರಂಡಿಗಳನ್ನು ಸಮರ್ಪಕವಾಗಿ ಇರಿಸಿಕೊಂಡರೆ ಈ ಪರಿಸ್ಥಿತಿ ಬರುವುದಿಲ್ಲ. ನಮ್ಮ ನಿವಾಸದ ಪಕ್ಕದಲ್ಲಿಯೇ ರಾಜ್ಯ ಸಚಿವ ಸ್ಥಾನಮಾನ ಹೊಂದಿರುವ ನೀತಿ ಆಯೋಗ್‌ನ ಸದಸ್ಯರ ಬಂಗಲೆ ಇದೆ. ಸಚಿವರು, ನೌಕಾಪಡೆಯ ಅಡ್ಮಿರಲ್‌ಗಳಿದ್ದಾರೆ. ಎಲ್ಲರಿಗೂ ಸಮಸ್ಯೆ ಆಗಿದೆ ಎಂದು ರಾಮ್ ಗೋಪಾಲ್ ಯಾದವ್ ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:42 am, Fri, 28 June 24