ದೆಹಲಿ: ದೆಹಲಿ ಗಲಭೆಗಳ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU)ದ ಹಳೆ ವಿದ್ಯಾರ್ಥಿ ಉಮರ್ ಖಾಲಿದ್‌ಗೆ (Umar Khalid) ದೆಹಲಿ ಹೈಕೋರ್ಟ್ ಇಂದು (ಮಂಗಳವಾರ) ಜಾಮೀನು ನಿರಾಕರಿಸಿದೆ.
ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಮತ್ತು ರಜನೀಶ್ ಭಟ್ನಾಗರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಜಾಮೀನು ಮನವಿಯಲ್ಲಿ ನಾವು ಇವರಿಗೆ ಜಾಮೀನು ನೀಡುವ ಯಾವುದೇ ಅರ್ಹತೆ ಕಂಡುಬಂದಿಲ್ಲ, ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ ಎಂದು ಕೋರ್ಟ್ ಆದೇಶಿಸಿದೆ.
ಹಿರಿಯ ವಕೀಲ ತ್ರಿದೀಪ್ ಪೈಸ್ ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಅವರ ವಾದವನ್ನು ಆಲಿಸಿದ ನ್ಯಾಯಾಲಯ ಸೆಪ್ಟೆಂಬರ್ 9 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಹೈಕೋರ್ಟ್‌ನಲ್ಲಿ 20 ದಿನಗಳಿಗೂ ಹೆಚ್ಚು ಕಾಲ ವಾದಗಳು ನಡೆದವು.
ಇದನ್ನು ಓದಿ: ಜೆಎನ್ಯು ಕ್ಯಾಂಪಸ್ನಲ್ಲಿ ವೆಜ್, ನಾನ್ ವೆಜ್ ತರ್ಕ; ಎಡಪಂಥೀಯ ಮತ್ತು ಎಬಿವಿಪಿ ವಿದ್ಯಾರ್ಥಿಗಳ ನಡುವೆ ಸಂಘರ್ಷ
2022 ಮಾರ್ಚ್‌ನಲ್ಲಿ ಕರ್ಕರ್ಡೂಮಾ ನ್ಯಾಯಾಲಯವು (Karkardooma court) ತನ್ನ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಖಾಲಿದ್ ಹೈಕೋರ್ಟ್‌ನ ಮೊರೆ ಹೋಗಿದ್ದರು .
ಸೆಪ್ಟೆಂಬರ್ 2020ರಲ್ಲಿ ದೆಹಲಿ ಪೊಲೀಸರು ಖಾಲಿದ್ ಅವರನ್ನು ಬಂಧಿಸಿದರು, ಅವರ ಮೇಲೆ ಕ್ರಿಮಿನಲ್ ಪಿತೂರಿ, ಗಲಭೆ, ಕಾನೂನುಬಾಹಿರ ಸಭೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ (UAPA) ಹಲವಾರು ವಿಭಾಗಗಳ ಆರೋಪ ಹೊರಿಸಲಾಯಿತು. ಅಂದಿನಿಂದ ಅವರು ಜೈಲಿನಲ್ಲೇ ಇದ್ದಾರೆ.
ಖಾಲಿದ್ ಜಾಮೀನಿನ ಕುರಿತ ವಾದಗಳು ಏಪ್ರಿಲ್‌ನಲ್ಲಿ ಆರಂಭವಾಗಿದ್ದವು. ಮೊದಲ ವಿಚಾರಣೆಯ ಸಮಯದಲ್ಲಿ, ನ್ಯಾಯಾಧೀಶರು ಅಮರಾವತಿಯಲ್ಲಿ ಅವರ ಭಾಷಣವನ್ನು ಪ್ರಚೋದನಕಾರಿಯಾಗಿದೆ ಕೋರ್ಟ್ ಹೇಳಿತ್ತು. ವಿಚಾರಣೆಯನ್ನು ಮುಂದೂಡಿತ್ತು.
ಮತ್ತೆ ಮೇಯಲ್ಲಿ ವಿಚಾರಣೆ ನಡೆಲಾಗಿತ್ತು, ಆ ಸಮಯದಲ್ಲಿ ನ್ಯಾಯಮೂರ್ತಿಗಳ ಬದಲಾವಣೆ ಆಗಿತ್ತು. ನ್ಯಾಯಮೂರ್ತಿ ಮೃದುಲ್ ಅವರು ಬೇರೆ ವಿಭಾಗೀಯ ಪೀಠದ ನೇತೃತ್ವವನ್ನು ಪ್ರಾರಂಭಿಸಿದರು. ಇಬ್ಬರು ನ್ಯಾಯಾಧೀಶರು ಹುದ್ದೆಯಲ್ಲಿ ವಿಶೇಷ ಪೀಠವಾಗಿತ್ತು. ಈ ವಿಚಾರಣೆಯು 20 ದಿನಗಳಿಗಿಂತ ಹೆಚ್ಚು ಕಾಲ ನಡೆಯಿತ್ತು. ಇಂದು ಅವರ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ನಿರಾಕರಿಸಿದೆ.