Viral Video: ಯುವಕನನ್ನು ಸ್ಕೂಟಿಗೆ ಕಟ್ಟಿ ರಸ್ತೆಯಲ್ಲಿ 2 ಕಿ.ಮೀ ಎಳೆದುಕೊಂಡು ಹೋದ ವಿಡಿಯೋ ವೈರಲ್

ಒಡಿಶಾದಲ್ಲಿ ಈ ಘಟನೆ ನಡೆದಿದ್ದು, 1500 ರೂ. ಹಣವನ್ನು ವಾಪಾಸ್ ಕೊಡಲಿಲ್ಲ ಎಂದು ಯುವಕನನ್ನು ಸ್ಕೂಟಿಗೆ ಕಟ್ಟಿಹಾಕಿ ಸುಮಾರು 2 ಕಿಲೋಮೀಟರ್ ಎಳೆದುಕೊಂಡು ಹೋಗಲಾಗಿದೆ.

Viral Video: ಯುವಕನನ್ನು ಸ್ಕೂಟಿಗೆ ಕಟ್ಟಿ ರಸ್ತೆಯಲ್ಲಿ 2 ಕಿ.ಮೀ ಎಳೆದುಕೊಂಡು ಹೋದ ವಿಡಿಯೋ ವೈರಲ್
ಒಡಿಶಾದಲ್ಲಿ ಸ್ಕೂಟಿಗೆ ವ್ಯಕ್ತಿಯನ್ನು ಕಟ್ಟಿ ಎಳೆದುಕೊಂಡು ಹೋಗುತ್ತಿರುವ ದೃಶ್ಯ
Follow us
| Updated By: ಸುಷ್ಮಾ ಚಕ್ರೆ

Updated on: Oct 18, 2022 | 3:40 PM

ಒಡಿಶಾ: ತಾವು ನೀಡಿದ್ದ ಸಾಲವನ್ನು ಸಮಯಕ್ಕೆ ಸರಿಯಾಗಿ ವಾಪಾಸ್ ಕೊಡಲಿಲ್ಲ ಎಂಬ ಕಾರಣಕ್ಕೆ 22 ವರ್ಷದ ಯುವಕನನ್ನು ತಮ್ಮ ಸ್ಕೂಟಿಗೆ ಹಗ್ಗದಲ್ಲಿ ಕಟ್ಟಿಕೊಂಡು ಟ್ರಾಫಿಕ್ ಇದ್ದ ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ವೈರಲ್ (Video Viral) ಆಗಿದೆ. ಒಡಿಶಾದಲ್ಲಿ (Odisha) ಈ ಘಟನೆ ನಡೆದಿದ್ದು, 1500 ರೂ. ಹಣವನ್ನು ವಾಪಾಸ್ ಕೊಡಲಿಲ್ಲ ಎಂದು ಯುವಕನನ್ನು ಸ್ಕೂಟಿಗೆ ಕಟ್ಟಿಹಾಕಿ ಸುಮಾರು 2 ಕಿಲೋಮೀಟರ್ ಎಳೆದುಕೊಂಡು ಹೋಗಲಾಗಿದೆ. ಆ ಸ್ಕೂಟಿಯ ಹಿಂದೆ ಆ ಯುವಕ ಓಡಿಹೋಗುತ್ತಿರುವ ದೃಶ್ಯವನ್ನು ಪಕ್ಕದ ವಾಹನದಲ್ಲಿ ಹೋಗುತ್ತಿದ್ದವರು ವಿಡಿಯೋ ಮಾಡಿದ್ದಾರೆ.

ಒಡಿಶಾದ ಕಟಕ್ ನಗರದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಆ ಸ್ಕೂಟಿಯಲ್ಲಿದ್ದ ಇಬ್ಬರನ್ನು ಬಂಧಿಸಲಾಯಿತು. ಆರೋಪಿಗಳ ವಿರುದ್ಧ ಅಕ್ರಮ ಬಂಧನ, ಅಪಹರಣ ಮತ್ತು ಕೊಲೆ ಯತ್ನದ ಆರೋಪ ಹೊರಿಸಲಾಗಿದೆ ಎಂದು ಕಟಕ್ ನಗರ ಉಪ ಪೊಲೀಸ್ ಆಯುಕ್ತ ಪಿನಾಕ್ ಮಿಶ್ರಾ ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ವಾಕ್​ಶ್ರವಣದೋಷವುಳ್ಳ ದಂಪತಿ ನಡೆಸುವ ಈ ಪಾನೀಪುರಿ ಅಂಗಡಿಯ ವಿಡಿಯೋ ವೈರಲ್

ಜಗನ್ನಾಥ್ ಬೆಹೆರಾ ಎಂಬ ಯುವಕನ ಕೈಗಳನ್ನು 12 ಅಡಿ ಉದ್ದದ ಹಗ್ಗದಿಂದ ಕಟ್ಟಲಾಗಿತ್ತು. ಅದರ ಇನ್ನೊಂದು ತುದಿಯನ್ನು ಸ್ಕೂಟಿಗೆ ಕಟ್ಟಲಾಗಿತ್ತು. ಭಾನುವಾರ ಸುಮಾರು 20 ನಿಮಿಷಗಳ ಕಾಲ ಸ್ಟುವರ್ಟ್‌ಪಟ್ನಾ ಚೌಕದಿಂದ 2 ಕಿಲೋಮೀಟರ್‌ಗಿಂತ ಹೆಚ್ಚು ದೂರದ ಸುತಾಹತ್ ಚೌಕದವರೆಗೆ ಜಗನ್ನಾಥ್ ಅವರನ್ನು ಸ್ಕೂಟಿಯಲ್ಲಿ ಎಳೆದುಕೊಂಡು ಹೋಗಲಾಗಿತ್ತು.

ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ, ಸುತಾಹತ್ ಸ್ಕ್ವೇರ್‌ನಲ್ಲಿ ಕೆಲವು ಸ್ಥಳೀಯರು ಬಂದು ಆ 22 ವರ್ಷದ ಯುವಕನನ್ನು ರಕ್ಷಿಸಿದ್ದಾರೆ. ಕಳೆದ ತಿಂಗಳು ಆ ಇಬ್ಬರಿಂದ ಜಗನ್ನಾಥ್ ತನ್ನ ಅಜ್ಜನ ಅಂತ್ಯಕ್ರಿಯೆಗೆ 1500 ರೂ. ಸಾಲವನ್ನು ಪಡೆದಿದ್ದ. ಅದನ್ನು ಸಮಯಕ್ಕೆ ಸರಿಯಾಗಿ ವಾಪಾಸ್ ಕೊಡದ ಹಿನ್ನೆಲೆಯಲ್ಲಿ ಈ ರೀತಿ ಮಾಡಲಾಗಿದೆ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ