
ನವದೆಹಲಿ, ನವೆಂಬರ್ 30: ಮೈಮೇಲೆ ಪ್ರಜ್ಞೆ ಇಲ್ಲದವರಂತೆ ಕಾರು ಚಾಲನೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಅಪಘಾತ(Accident) ಪ್ರಕರಣಗಳು ಕೂಡ ಏರಿಕೆಯಾಗಿದೆ. ದೆಹಲಿಯ ವಸಂತ್ ಕುಂಜ್ ಬಳಿ ಫುಟ್ಪಾತ್ ಮೇಲೆ ಮಲಗಿದ್ದ ಮೂವರು ಮೇಲೆ ಬಿಎಂಡಬ್ಲ್ಯೂ ಕಾರು ಹರಿದಿರುವ ಘಟನೆ ವರದಿಯಾಗಿದೆ. ಮೂವರೂ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಆಸ್ಪತ್ರೆಗೆ ದಾಖಲಿಲಸಾಗಿದೆ.
ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಆಂಬಿಯನ್ಸ್ ಮಾಲ್ ಬಳಿ ನಡೆದ ಈ ಘಟನೆ, ನಿವಾಸಿಗಳನ್ನು ಬೆಚ್ಚಿಬೀಳಿಸಿದ್ದು, ನೈಋತ್ಯ ದೆಹಲಿಯ ಈ ಪ್ರದೇಶದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ನಿಯಂತ್ರಣ ತಪ್ಪಿ ಕಾರು ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ಮೂವರ ಮೇಲೆ ಹರಿದಿದೆ. ಅಪಘಾತದ ಮೊದಲು ಚಾಲಕ ನಿಯಂತ್ರಣ ಕಾಯ್ದುಕೊಳ್ಳಲು ಕಷ್ಟಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಹಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ.
ಪೊಲೀಸರು ಕಾರಿ ಚಾಲಕನನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ, ಅತಿವೇಗದ ಚಾಲನೆ ಮತ್ತು ನಿರ್ಲಕ್ಷ್ಯದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಕಾರು ಹಿಮಾಚಲ ಪ್ರದೇಶ ನೋಂದಣಿಯನ್ನು ಹೊಂದಿದ್ದು, ಇದು ಹೊರ ರಾಜ್ಯದ ಮಾಲೀಕರಿಗೆ ಸೇರಿದ್ದು ಎಂಬುದು ಕಂಡುಬಂದಿದೆ. ವೈದ್ಯಕೀಯ ಪರೀಕ್ಷೆಗಳು ಬಾಕಿ ಉಳಿದಿರುವ ಕಾರಣ, ಮದ್ಯಪಾನ ಮಾಡಿದ್ದರೇ ಎಂಬುದಿನ್ನು ದೃಢಪಟ್ಟಿಲ್ಲ.
ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಪಾದಚಾರಿಗಳ ಸಾವಿನ ಸಂಖ್ಯೆ ಏರಿಕೆ, ಇದಕ್ಕೆ ಕಾರಣ ಇಲ್ಲಿದೆ ನೋಡಿ
ವಸಂತ್ ಕುಂಜ್‌ನಲ್ಲಿರುವ ಆಂಬಿಯನ್ಸ್ ಮಾಲ್‌ನ ಮುಂಭಾಗದಲ್ಲಿ ಈ ಅಪಘಾತ ಸಂಭವಿಸಿದೆ. ಸ್ಥಳೀಯ ಪೊಲೀಸರು ಆ ಪ್ರದೇಶವನ್ನು ಸುತ್ತುವರೆದು, ವಿಧಿವಿಜ್ಞಾನ ತಜ್ಞರನ್ನು ನಿಯೋಜಿಸಿದ್ದರು.
ಬೆಂಗಳೂರಿನಲ್ಲಿ ಪಾದಚಾರಿಗಳ ಸಾವಿನ ಸಂಖ್ಯೆ ಏರಿಕೆ
ಬೆಂಗಳೂರು ಎಲ್ಲದರಲ್ಲೂ ಮುಂದು ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ, ಅದರಲ್ಲೂ ಕೊಲೆ, ದರೋಡೆ, ಆತ್ಮಹತ್ಯೆಯಲ್ಲೂ ಬೆಂಗಳೂರು ಮುಂದೆ ಎನ್ನುತ್ತಿದೆ. ಇದೀಗ ಈ ಸಾಲಿಗೆ ಪಾದಚಾರಿಗಳ ಸಾವಿನ ಸಂಖ್ಯೆ ಕೂಡ ಸೇರಿಕೊಂಡಿದೆ. ಇದೊಂದು ಅಘಾತಕಾರಿ ವಿಚಾರ ಎಂದು ಹೇಳಬಹುದು. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋನ (NCRB) ನೀಡಿದ ವರದಿ ಪ್ರಕಾರ ಬೆಂಗಳೂರಿನಲ್ಲಿ ಆಕಸ್ಮಿಕ ಸಾವು, ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದ್ದು, ರಾಜಧಾನಿ ಇಂತಹ ಕೇಸ್ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.
ಇದೀಗ ಪಾದಚಾರಿಗಳ ಸಾವಿನ ಸಂಖ್ಯೆಯಲ್ಲೂ ಅಗ್ರಸ್ಥಾನವನ್ನು ಪಡೆದುಕೊಂಡಿದೆ. NCRB ಅಂಕಿಅಂಶಗಳ ಪ್ರಕಾರ, 2023 ರಲ್ಲಿ ಬೆಂಗಳೂರಿನಲ್ಲಿ 292 ಪಾದಚಾರಿ ಸಾವುಗಳು ದಾಖಲಾಗಿವೆ, ಇದು ಭಾರತದ 53 ಪ್ರಮುಖ ನಗರಗಳಲ್ಲಿ ಸಂಭವಿಸಿದ ಸಾವುಗಳಲ್ಲಿ ಶೇಕಡಾ 9.48 ರಷ್ಟಿದೆ ಎಂದು ಹೇಳಲಾಗಿದೆ. ಇದೀಗ ಈ ವರದಿ ಪ್ರಕಾರ ಬೆಂಗಳೂರು ಅತಿ ಹೆಚ್ಚು ಪಾದಚಾರಿಗಳ ಸಾವಿನ ನಗರವಾಗಿದೆ. ಇದು ರಸ್ತೆಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಅಗತ್ಯ ಇದೆ ಎಂಬುದನ್ನು ಹೇಳುತ್ತದೆ.
ಸಂಚಾರ ಪೊಲೀಸರು ಪಾದಚಾರಿಗಳ ಸಾವಿನ ಸಂಖ್ಯೆ ಏರಿಕೆಗೆ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ. ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆ, ಕಳಪೆ ಲೇನ್ ಶಿಸ್ತು, ಮೂಲಸೌಕರ್ಯ ಕೊರತೆಗಳು ಮತ್ತು ಹೆಚ್ಚುತ್ತಿರುವ ಅಪಘಾತ ಇದರಿಂದ ಈ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ನಂತರ, ಅಹಮದಾಬಾದ್ (236) ಮತ್ತು ಜೈಪುರ (201) ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.ರಾಜ್ಯ ಮಟ್ಟದಲ್ಲಿ, ಕರ್ನಾಟಕವು 2,386 ಪಾದಚಾರಿ ಸಾವುಗಳನ್ನು ದಾಖಲಿಸಿದ್ದು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೂರನೇ ಸ್ಥಾನದಲ್ಲಿದೆ, ಬಿಹಾರ (3,462) ಮತ್ತು ತಮಿಳುನಾಡು (4,577) ನಂತರದ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ