ಬೆಂಗಳೂರಿನಲ್ಲಿ ಪಾದಚಾರಿಗಳ ಸಾವಿನ ಸಂಖ್ಯೆ ಏರಿಕೆ, ಇದಕ್ಕೆ ಕಾರಣ ಇಲ್ಲಿದೆ ನೋಡಿ
ಬೆಂಗಳೂರು ಎಲ್ಲದರಲ್ಲೂ ಮುಂದು, ಅದು ಅಕ್ರಮ, ಕೊಲೆ, ಆತ್ಮಹತ್ಯೆಗೂ ಹೊರತಾಗಿಲ್ಲ. ಇದೀಗ ಪಾದಚಾರಿಗಳ ಸಾವಿನ ಸಂಖ್ಯೆಯಲ್ಲೂ ಬೆಂಗಳೂರು ಮುಂದೆ ಎಂಬುದನ್ನು ಸಾಬೀತು ಮಾಡಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋನ (NCRB) ನೀಡಿದ ವರದಿ ಪ್ರಕಾರ ಬೆಂಗಳೂರಿನಲ್ಲಿ ಆಕಸ್ಮಿಕ ಸಾವು, ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದ್ದು, ರಾಜಧಾನಿ ಇಂತಹ ಕೇಸ್ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಇದೀಗ ಪಾದಚಾರಿಗಳ ಸಾವಿನ ಸಂಖ್ಯೆಯಲ್ಲೂ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ಬೆಂಗಳೂರು , ಅ.4: ಬೆಂಗಳೂರು (Bengaluru) ಎಲ್ಲದರಲ್ಲೂ ಮುಂದು ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ, ಅದರಲ್ಲೂ ಕೊಲೆ, ದರೋಡೆ, ಆತ್ಮಹತ್ಯೆಯಲ್ಲೂ ಬೆಂಗಳೂರು ಮುಂದೆ ಎನ್ನುತ್ತಿದೆ. ಇದೀಗ ಈ ಸಾಲಿಗೆ ಪಾದಚಾರಿಗಳ ಸಾವಿನ ಸಂಖ್ಯೆ (Pedestrian deaths increase) ಕೂಡ ಸೇರಿಕೊಂಡಿದೆ. ಇದೊಂದು ಅಘಾತಕಾರಿ ವಿಚಾರ ಎಂದು ಹೇಳಬಹುದು. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋನ (NCRB) ನೀಡಿದ ವರದಿ ಪ್ರಕಾರ ಬೆಂಗಳೂರಿನಲ್ಲಿ ಆಕಸ್ಮಿಕ ಸಾವು, ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದ್ದು, ರಾಜಧಾನಿ ಇಂತಹ ಕೇಸ್ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಇದೀಗ ಪಾದಚಾರಿಗಳ ಸಾವಿನ ಸಂಖ್ಯೆಯಲ್ಲೂ ಅಗ್ರಸ್ಥಾನವನ್ನು ಪಡೆದುಕೊಂಡಿದೆ. NCRB ಅಂಕಿಅಂಶಗಳ ಪ್ರಕಾರ, 2023 ರಲ್ಲಿ ಬೆಂಗಳೂರಿನಲ್ಲಿ 292 ಪಾದಚಾರಿ ಸಾವುಗಳು ದಾಖಲಾಗಿವೆ, ಇದು ಭಾರತದ 53 ಪ್ರಮುಖ ನಗರಗಳಲ್ಲಿ ಸಂಭವಿಸಿದ ಸಾವುಗಳಲ್ಲಿ ಶೇಕಡಾ 9.48 ರಷ್ಟಿದೆ ಎಂದು ಹೇಳಲಾಗಿದೆ. ಇದೀಗ ಈ ವರದಿ ಪ್ರಕಾರ ಬೆಂಗಳೂರು ಅತಿ ಹೆಚ್ಚು ಪಾದಚಾರಿಗಳ ಸಾವಿನ ನಗರವಾಗಿದೆ. ಇದು ರಸ್ತೆಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಅಗತ್ಯ ಇದೆ ಎಂಬುದನ್ನು ಹೇಳುತ್ತದೆ.
ಸಂಚಾರ ಪೊಲೀಸರು ಪಾದಚಾರಿಗಳ ಸಾವಿನ ಸಂಖ್ಯೆ ಏರಿಕೆಗೆ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ. ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆ, ಕಳಪೆ ಲೇನ್ ಶಿಸ್ತು, ಮೂಲಸೌಕರ್ಯ ಕೊರತೆಗಳು ಮತ್ತು ಹೆಚ್ಚುತ್ತಿರುವ ಅಪಘಾತ ಇದರಿಂದ ಈ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ. ಬೆಂಗಳೂರಿನ ನಂತರ, ಅಹಮದಾಬಾದ್ (236) ಮತ್ತು ಜೈಪುರ (201) ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.ರಾಜ್ಯ ಮಟ್ಟದಲ್ಲಿ, ಕರ್ನಾಟಕವು 2,386 ಪಾದಚಾರಿ ಸಾವುಗಳನ್ನು ದಾಖಲಿಸಿದ್ದು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೂರನೇ ಸ್ಥಾನದಲ್ಲಿದೆ, ಬಿಹಾರ (3,462) ಮತ್ತು ತಮಿಳುನಾಡು (4,577) ನಂತರದ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಆಕಸ್ಮಿಕ ಸಾವು, ಆತ್ಮಹತ್ಯೆ ಪ್ರಕರಣಗಳಲ್ಲಿ ಬೆಂಗಳೂರಿಗೆ 3ನೇ ಸ್ಥಾನ; NCRB ವರದಿ ಪ್ರಕಟ
ಬೆಂಗಳೂರಿನ ಹಿರಿಯ ಸಂಚಾರ ಅಧಿಕಾರಿಯೊಬ್ಬರು ಹೇಳಿರುವ ಪ್ರಕಾರ, ಅನೇಕ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗಗಳು ಅತಿಕ್ರಮಣಗೊಂಡಿವೆ. ಜನರಿಗೆ ಸಂಚಾರ ಮಾಡಲು ಮಾರ್ಗವಿಲ್ಲ. ಕೆಲವೊಂದು ಕಡೆ ಕಸದಿಂದ ತುಂಬಿವೆ. ಇದರಿಂದ ಪಾದಚಾರಿಗಳು ಜನನಿಬಿಡ ರಸ್ತೆಗಳಲ್ಲಿ ಓಡಾಡುತ್ತಾರೆ. ದ್ವಿಚಕ್ರ ಸವಾರರು ಜನರು ಓಡಾಡುವ ಫುಟ್ ಪಾತ್ನಲ್ಲೇ ಸಾಹಸ ಮಾಡಿಕೊಂಡು ಹೋಗುತ್ತಾರೆ. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. 2024 ರ ಸಂಚಾರ ಪೊಲೀಸ್ ಈ ಬಗ್ಗೆ ಎತ್ತಿತೋರಿಸಿದ್ದಾರೆ ಚಿಕ್ಕಪೇಟೆ, ಕಾಮಾಕ್ಷಿಪಾಳ್ಯ ಮತ್ತು ಜೆಸಿ ರಸ್ತೆಯಂತಹ ವಾಣಿಜ್ಯ ಕೇಂದ್ರಗಳು ಸರಿಯಾದ ಪಾದಚಾರಿ ದಾಟುವಿಕೆಗಳ ಕೊರತೆಯಿಂದಾಗಿ ಸುರಕ್ಷತೆ ಇಲ್ಲದಂತಾಗಿದೆ. ಇತರ ನಗರಗಳಲ್ಲಿ ವೈದ್ಯರು ನಡೆಸುವ ಮರಣೋತ್ತರ ಪರೀಕ್ಷೆಯ ಮಾದರಿಯನ್ನು ಬೆಂಗಳೂರು ಅಳವಡಿಸಿಕೊಳ್ಳಬಹುದು ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ. ಇಂತಹ ಸ್ಥಳಗಳಲ್ಲಿ ಮೂಲಸೌಕರ್ಯ ಸುಧಾರಣೆಗಳನ್ನು ಮಾಡಬೇಕು. ಪಾದಚಾರಿ ಸುರಕ್ಷತೆಯಲ್ಲಿನ ಅಂತರವನ್ನು ನಿವಾರಿಸಲು ನೀತಿ ಸುಧಾರಣೆಗಳ ಜೊತೆಗೆ ನಾಗರಿಕ ಸಂಸ್ಥೆಗಳು, ಸಂಚಾರ ಪೊಲೀಸರು, ವೈದ್ಯರು ಮತ್ತು ನಾಗರಿಕ ಸಹಯೋಗ ಇರಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:20 pm, Sat, 4 October 25
