AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಮೊದಲ ದಿವ್ಯಾಂಗ ಪಾರ್ಕ್​, 2 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ ಉದ್ಯಾನ

ದೆಹಲಿಯಲ್ಲಿ ದಿವ್ಯಾಂಗರಿಗಾಗಿಯೇ ಉದ್ಯಾನವನ್ನು ನಿರ್ಮಿಸಲಾಗುತ್ತಿದೆ. ದೆಹಲಿಯ ಯಮುನಾಪರ್​ನಲ್ಲಿರುವ ದಿವ್ಯಾಂಗ್ ಪಾರ್ಕ್​ನಲ್ಲಿ ತೆರೆದ ಜಿಮ್ ಕೂಡ ನಿರ್ಮಾಣವಾಗಲಿದೆ. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಈ ಯೋಜನೆಯನ್ನು ಕೈಗೆತ್ತುಕೊಂಡು ಟೆಂಡರ್ ಆಹ್ವಾನಿಸಿದೆ. ಒಟ್ಟು 2 ಎಕರೆ ವಿಸ್ತೀರ್ಣದಲ್ಲಿ ಈ ಪಾರ್ಕ್ ನಿರ್ಮಾಣಗೊಳ್ಳಲಿದೆ. ಮುಂದಿನ ತಿಂಗಳ ಆರಂಭದಲ್ಲಿ ಏಜೆನ್ಸಿಯನ್ನು ಆಯ್ಕೆ ಮಾಡಲಾಗುವುದು ಎಂದು ನಿಗಮದ ಉಪನಿರ್ದೇಶಕ ಸತೀಶ್ ಕುಮಾರ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಮೊದಲ ದಿವ್ಯಾಂಗ ಪಾರ್ಕ್​, 2 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ ಉದ್ಯಾನ
ಉದ್ಯಾನImage Credit source: Housing
Follow us
ನಯನಾ ರಾಜೀವ್
|

Updated on: Sep 11, 2023 | 9:49 AM

ದೆಹಲಿಯಲ್ಲಿ ದಿವ್ಯಾಂಗರಿಗಾಗಿಯೇ ಉದ್ಯಾನ(Park)ವನ್ನು ನಿರ್ಮಿಸಲಾಗುತ್ತಿದೆ. ದೆಹಲಿಯ ಯಮುನಾಪರ್​ನಲ್ಲಿರುವ ದಿವ್ಯಾಂಗ ಪಾರ್ಕ್​ನಲ್ಲಿ ತೆರೆದ ಜಿಮ್ ಕೂಡ ನಿರ್ಮಾಣವಾಗಲಿದೆ. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಈ ಯೋಜನೆಯನ್ನು ಕೈಗೆತ್ತುಕೊಂಡು ಟೆಂಡರ್ ಆಹ್ವಾನಿಸಿದೆ. ಒಟ್ಟು 2 ಎಕರೆ ವಿಸ್ತೀರ್ಣದಲ್ಲಿ ಈ ಪಾರ್ಕ್ ನಿರ್ಮಾಣಗೊಳ್ಳಲಿದೆ. ಮುಂದಿನ ತಿಂಗಳ ಆರಂಭದಲ್ಲಿ ಏಜೆನ್ಸಿಯನ್ನು ಆಯ್ಕೆ ಮಾಡಲಾಗುವುದು ಎಂದು ನಿಗಮದ ಉಪನಿರ್ದೇಶಕ ಸತೀಶ್ ಕುಮಾರ್ ತಿಳಿಸಿದ್ದಾರೆ.

ಯಮುನಾಪರ್‌ನ ಮೊದಲ ಅಂಗವಿಕಲರಿಗಾಗಿ ವಿಶೇಷ ಉದ್ಯಾನವನ್ನು ರಾಠಿ ಮಿಲ್‌ನ ಲೋನಿ ರಸ್ತೆಯಲ್ಲಿರುವ ಎರಡು ಎಕರೆ ಜಾಗದಲ್ಲಿ ನಿರ್ಮಿಸಲಾಗುವುದು. ಇದರ ನಿರ್ಮಾಣಕ್ಕೆ 1 ಕೋಟಿಗೂ ಹೆಚ್ಚು ವೆಚ್ಚವಾಗಲಿದೆ. ಅದಕ್ಕೆ ದಿವ್ಯಾಂಗ್ ಪಾರ್ಕ್​ ಎಂದೇ ನಾಮಕರಣ ಮಾಡಲಾಗುತ್ತದೆ. ಸಾಮಾನ್ಯವಾಗಿ ಉದ್ಯಾನಗಳಲ್ಲಿ ಅಂಗವಿಕಲರು ಸಮಸ್ಯೆಗಳನ್ನು ಎದುರಿಸುತ್ತಾರೆ, ಫುಟ್​ಪಾತ್​ನಲ್ಲಿ ಸುಲಭವಾಗಿ ನಡೆಯಲು ಸಾಧ್ಯವಾಗುವುದಿಲ್ಲ, ಈ ಹಿನ್ನೆಲೆಯಲ್ಲಿ ಕಾರ್ಪೊರೇಷನ್​ನ ಶಹದಾರ ಉತ್ತರ ವಲಯದ ರಾಠಿ ಮಿಲ್​ನಲ್ಲಿರುವ ಪ್ಲಾಟ್​ನಲ್ಲಿ ಅವರಿಗಾಗಿಯೇ ದಿವ್ಯಾಂಗ್ ಪಾರ್ಕ್​ ನಿರ್ಮಿಸಲು ನಿರ್ಧರಿಸಲಾಗಿದೆ.

ಗಾಲಿಕುರ್ಚಿಗಳ ವಿಶೇಷ ವ್ಯವಸ್ಥೆ ಪಾರ್ಕ್​ ಒಳಗೆ ತಿರುಗಾಡಲು ಗಾಲಿಕುರ್ಚಿಗಳ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ, ಇದು ಅಂಗವಿಕಲ ಸ್ನೇಹಿಯಾಗಿದೆ. ಪ್ರವೇಶ ದ್ವಾರದಲ್ಲಿ ಮೆಟ್ಟಿಲುಗಳಿರುವ ರ್ಯಾಂಪ್ ನಿರ್ಮಿಸಲಾಗುತ್ತದೆ. ಇದರಿಂದ ಅಂಗವಿಕಲರು ಗಾಲಿಕುರ್ಚಿಯ ಮೇಲೆ ಕುಳಿತುಕೊಂಡು ರ್ಯಾಂಪ್ ಮೂಲಕ ಸುಲಭವಾಗಿ ಒಳಗೆ ಹೋಗಬಹುದು.

ದೃಷ್ಟಿ ವಿಕಲಚೇತನರಿಗಾಗಿ ವಿವಿಧೆಡೆ ಬ್ರೈಲ್ ಲಿಪಿಯಲ್ಲಿ ಸೈನ್ ಬೋರ್ಡ್​ ಅಳವಡಿಸಲಾಗುವುದು , ಕಾಲ್ನಡಿಗೆಯಲ್ಲಿ ಹಳದಿ ಟ್ಯಾಕ್ಟೈಲ್ ಟೈಲ್ಸ್​ ಅಳವಡಿಸಲಾಗುತ್ತದೆ. ಅದರ ಮೂಲಕ ಜನರು ಸುಲಭವಾಗಿ ನಡೆಯಲು ಸಾಧ್ಯವಾಗುತ್ತದೆ. ಅವರಿಗೆ ಶೌಚಾಲಯಗಳು ಸಹ ಸೂಕ್ತವಾಗಿರುತ್ತದೆ. ಕುಳಿತುಕೊಳ್ಳಲು ಬೆಂಚುಗಳಿರುತ್ತವೆ.

ಮತ್ತಷ್ಟು ಓದಿ: Koppal News: ನರೇಗಾ ಯೋಜನೆಯಡಿ ಪ್ರವಾಸಿಗರಿಗಾಗಿ ನಿರ್ಮಾಣವಾಯಿತು ಹೈಟೆಕ್ ಉದ್ಯಾನವನ

ಓಪನ್ ಜಿಮ್ ನಿರ್ಮಿಸಲಾಗುತ್ತದೆ ದಿವ್ಯಾಂಗ್ ಪಾರ್ಕ್‌ನಲ್ಲಿ ತೆರೆದ ಜಿಮ್ ನಿರ್ಮಿಸಲಾಗುವುದು. ನಿಗಮದ ಉದ್ಯಾನ ಉಪನಿರ್ದೇಶಕ ಸತೀಶ್ ಕುಮಾರ್ ಮಾತನಾಡಿ, ಅಂಗವಿಕಲರಿಗೆ ಜಿಮ್ ಉಪಕರಣಗಳು ಸೂಕ್ತವಾಗಿರುತ್ತವೆ. ಅಂಗವಿಕಲರು ವೀಲ್ ಚೇರ್ ಮೇಲೆ ಕುಳಿತು ವ್ಯಾಯಾಮ ಮಾಡಲು ಬಯಸಿದರೆ, ಅವರು ಅದನ್ನು ಆರಾಮವಾಗಿ ಮಾಡಲು ಸಾಧ್ಯವಾಗುತ್ತದೆ. ಇದರಲ್ಲಿ ಚೆಸ್ಟ್ ಪ್ರೆಸ್, ಆರ್ಮ್ ಎಕ್ಸ್ ಟೆನ್ಷನ್, ಡಿಸೇಬಲ್ಡ್ ಆರ್ಮ್ ವೀಲ್, ಆರ್ಮ್ ಸೈಕಲ್, ಪುಲ್ಅಪ್ ರ್ಯಾಕ್, ಆರ್ಮ್ ಎಕ್ಸರ್ಸರ್ ಸೇರಿದಂತೆ ಹಲವು ಉಪಕರಣಗಳನ್ನು ಅಳವಡಿಸಲಾಗುವುದು.

ಸಂಗೀತ ವಾದ್ಯಗಳನ್ನು ಕಲಿಯಲು ಸಾಧ್ಯವಾಗುತ್ತದೆ ದಿವ್ಯಾಂಗ ಮಕ್ಕಳ ಮನರಂಜನೆಗಾಗಿ ಈ ಪಾರ್ಕ್‌ನಲ್ಲಿ ಸಂಪೂರ್ಣ ವ್ಯವಸ್ಥೆ ಮಾಡಲಾಗುವುದು. ಒಂದು ಭಾಗದಲ್ಲಿ ವಿವಿಧ ರೀತಿಯ ಸಂಗೀತ ಉಪಕರಣಗಳನ್ನು ಅಳವಡಿಸಲಾಗುವುದು. ಮಕ್ಕಳು ಈ ವಿಭಾಗಕ್ಕೆ ಬಂದು ಸಂಗೀತ ವಾದ್ಯಗಳನ್ನು ನುಡಿಸಲು ಕಲಿಯಲು ಸಾಧ್ಯವಾಗುತ್ತದೆ. ಈ ವಾದ್ಯಗಳು ಕಾಜೊನ್ ಡ್ರಮ್, ಬಾಬೆಲ್ ಡ್ರಮ್ (ಸಣ್ಣ ಮತ್ತು ದೊಡ್ಡದು), ಪ್ಯಾಪಿಲಿಯೊ ಬೆಲ್, ಫ್ರೀ ಚೈಮ್ಸ್, ರೇನ್ಬೋ ಸಾಂಬಾ, ಕಾಂಗೋ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ