Delhi: ದೆಹಲಿಯ ಔರಂಗಜೇಬ್ ರಸ್ತೆಯನ್ನು ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ
ಔರಂಗಜೇಬ್ ರಸ್ತೆಯನ್ನು ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ: ದೇಶದಲ್ಲಿ ಅನೇಕ ರಸ್ತೆಗಳಿಗೆ, ಕಟ್ಟಡಗಳಿಗೆ, ಸರ್ಕಾರಿ ಕಚೇರಿಗಳಿಗೆ ಮುಸ್ಲಿಂ ರಾಜರುಗಳ ಹೆಸರನ್ನು ಇಡಲಾಗಿತ್ತು. ಆದರೆ ಇದೀಗ ಅದನ್ನು ಬಿಜೆಪಿ ಸರ್ಕಾರ ಬದಲಾವಣೆ ಮಾಡುತ್ತಿದೆ. ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ಇದರ ಮುಂಚೂಣಿಯಲ್ಲಿತ್ತು. 1 ವರ್ಷದ ಹಿಂದೆ ದೆಹಲಿಯ ರಾಜಪಥನ್ನು ಪ್ರಧಾನಿ ಮೋದಿ ಕರ್ತವ್ಯಪಥ ಎಂದು ಮರುನಾಮಕರಣ ಮಾಡಿದ್ದರು, ಇದೀಗ ಇಂತಹದೇ ಒಂದು ಮಹತ್ವದ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ದೆಹಲಿಯ ಔರಂಗಜೇಬ್ ರಸ್ತೆಯನ್ನು ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ಐಷಾರಾಮಿ ಪ್ರದೇಶವಾದ ಲುಟ್ಯೆನ್ಸ್ ದೆಹಲಿಯಲ್ಲಿರುವ ಔರಂಗಜೇಬ್ ರಸ್ತೆಯನ್ನು, ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ. ಎನ್‌ಡಿಎಂಸಿ ಅಧಿಕಾರಿಗಳು ಬುಧವಾರ ಈ ಆದೇಶವನ್ನು ಪ್ರಕಟಿಸಿದ್ದಾರೆ. ನವದೆಹಲಿ ಮುನ್ಸಿಪಲ್ ಕೌನ್ಸಿಲ್ ತನ್ನ ಸದಸ್ಯರ ಸಭೆಯಲ್ಲಿ ರಸ್ತೆಯ ಮರುನಾಮಕರಣಕ್ಕೆ ಅನುಮೋದನೆ ನೀಡಿತು. NDMC ಆಗಸ್ಟ್ 2015ರಲ್ಲಿ ಔರಂಗಜೇಬ್ ರಸ್ತೆಯನ್ನು ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಿದೆ.
Published On - 12:02 pm, Thu, 29 June 23