ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಒಪ್ಪದ ಸಿಬ್ಬಂದಿ; ಹತ್ರಾಸ್​ನ ಬೀದಿಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಆಸ್ಪತ್ರೆಯ ಹೊರಗೆ ಹೆರಿಗೆ ನೋವಿನಿಂದ ನರಳಾಡುತ್ತಿದ್ದ ಮಹಿಳೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆಕೆಯ ಸುತ್ತಲೂ ಜನ ಓಡಾಡುತ್ತಿದ್ದು, ಆಕೆ ನೆಲದ ಮೇಲೆ ಮಲಗಿದ್ದಾರೆ.

ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಒಪ್ಪದ ಸಿಬ್ಬಂದಿ; ಹತ್ರಾಸ್​ನ ಬೀದಿಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಸಾಂದರ್ಭಿಕ ಚಿತ್ರ
Edited By:

Updated on: Jan 20, 2023 | 3:58 PM

ಹತ್ರಾಸ್: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ (Hathras) 9 ತಿಂಗಳ ಗರ್ಭಿಣಿಯೊಬ್ಬರು (Pregnant) ತನ್ನ ರಕ್ತದ ಪರೀಕ್ಷೆಯ ರಿಪೋರ್ಟ್​ ತರಲಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯ ಸಿಬ್ಬಂದಿ ಆಕೆಯನ್ನು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದರು. ಹೀಗಾಗಿ, ಆ ಮಹಿಳೆ ಆಸ್ಪತ್ರೆಯ ಹೊರಗೆ ಬೀದಿಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಘಟನೆ ಗುರುವಾರ ನಡೆದಿದ್ದು, ಕಲ್ಪನಾ ಎಂಬ ಮಹಿಳೆಯನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿಕೊಳ್ಳದೆ ವಾಪಾಸ್ ಕಳುಹಿಸಲಾಗಿದೆ.

ಆಸ್ಪತ್ರೆಯ ಹೊರಗೆ ಹೆರಿಗೆ ನೋವಿನಿಂದ ನರಳಾಡುತ್ತಿದ್ದ ಮಹಿಳೆಯ ನರಳಾಟದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆಕೆಯ ಸುತ್ತಲೂ ಜನ ಓಡಾಡುತ್ತಿದ್ದು, ಆಕೆ ನೆಲದ ಮೇಲೆ ಮಲಗಿದ್ದಾರೆ.

ಇದನ್ನೂ ಓದಿ: ಮನೆ ಕೆಲಸಕ್ಕೆ ಬರುತ್ತಿದ್ದಾಗ ವಿದ್ಯಾರ್ಥಿಯಿಂದ ನಿರಂತರ ಅತ್ಯಾಚಾರ; ಗರ್ಭಿಣಿಯಾದ ಬಾಲಕಿ

ನಮ್ಮ ಬಳಿ ಬ್ಲಡ್ ರಿಪೋರ್ಟ್​ ಇಲ್ಲದ ಕಾರಣದಿಂದ ನನ್ನ ಹೆಂಡತಿ ಮತ್ತು ನನಗೆ ಆಸ್ಪತ್ರೆಗೆ ದಾಖಲಾಗಲು ಬಿಡಲಿಲ್ಲ. ತುರ್ತು ಚಿಕಿತ್ಸಾ ಕೊಠಡಿಯಲ್ಲಿದ್ದ ಸಿಬ್ಬಂದಿ ನೋವಿನಿಂದ ನರಳುತ್ತಿದ್ದ ನನ್ನ ಹೆಂಡತಿಯ ಮಾತನ್ನೂ ಕೇಳಲಿಲ್ಲ. ಆ ಬಳಿಕ ನನ್ನ ಪತ್ನಿಗೆ ನೋವು ತಡೆದುಕೊಳ್ಳಲಾಗದೆ ಆಸ್ಪತ್ರೆಯ ಹೊರಗೆ ನೆಲದ ಮೇಲೆ ಬಿದ್ದು, ಅಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಆ ಗರ್ಭಿಣಿಯ ಪತಿ ಸನೇಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: Crime News: ಆಭರಣಕ್ಕಾಗಿ 7 ತಿಂಗಳ ಗರ್ಭಿಣಿ ಸೊಸೆಗೆ ಬೆಂಕಿ ಹಚ್ಚಿದ ಅತ್ತೆ-ಮಾವ

ಆದರೆ, ಅವರ ಆರೋಪಗಳನ್ನು ತಳ್ಳಿಹಾಕಿದ ಮುಖ್ಯ ವೈದ್ಯಕೀಯ ಅಧೀಕ್ಷಕ ಶೆಲ್ಲಿ ಸಿಂಗ್, ಆ ಮಹಿಳೆಗೆ ಆಧಾರ್‌ನಂತಹ ಐಡಿಗಳನ್ನು ನೀಡುವಂತೆ ಕೇಳಲಾಯಿತು. ಆಸ್ಪತ್ರೆಯ ಪ್ರಸವಪೂರ್ವ ಕೋಣೆಗೆ ಹೋಗಲು ಸಲಹೆ ನೀಡಲಾಯಿತು. ಆದರೆ, ಆಕೆ ಅದಕ್ಕೆ ಒಪ್ಪದೆ ಆಸ್ಪತ್ರೆಯಿಂದ ಹೊರಗೆ ಹೋದರು. ಆಮೇಲೆ ಅಲ್ಲಿಯೇ ಹೆರಿಗೆಯಾಯಿತು ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us