ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ 6ನೇ ಹಂತದ ಮತದಾನ ಪ್ರಕ್ರಿಯೆ ಮುಂದುವರಿದಿದ್ದು ಮಧ್ಯಾಹ್ನ 1.30ರವರೆಗೆ ಶೇ 57.30 ಮತದಾನ ದಾಖಲಾಗಿದೆ. 11ಗಂಟೆಯ ಹೊತ್ತಿಗೆ ಶೇ37.27 ಮತದಾನ ದಾಖಲಾಗಿದ್ದು, ಬೆಳಗ್ಗೆ 9.30ಕ್ಕೆ ಶೇ 17ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಗುರುವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭ ಆಗಿತ್ತು. ಉತ್ತರ ಪರಗಣ, ನಾಡಿಯಾ, ಉತ್ತರ ದಿನಜ್ಪುರ್, ಪೂರ್ಬ ಬರ್ಧಮಾನ್ ಸೇರಿದಂತೆ 43 ವಿಧಾನಸಭಾ ಕ್ಷೇತ್ರಗಳಲ್ಲಿನ 14,480 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. 6ನೇ ಹಂತದ ಚುನಾವಣೆಯಲ್ಲಿ 306 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಭಾರತೀಯಜನತಾ ಪಕ್ಷದ ಉಪಾಧ್ಯಕ್ಷ ಮುಕುಲ್ ರಾಯ್, ತೃಣಮೂಲ ಕಾಂಗ್ರೆಸ್ ಪಕ್ಷದ ಸಚಿವ ಜ್ಯೋತಿಪ್ರಿಯೊ ಮಲ್ಲಿಕ್, ಚಂದ್ರಿಮಾ ಭಟ್ಟಾಚಾರ್ಯ,ಸಿಪಿಐ(ಎಂ) ನಾಯಕ ತನ್ಮಯ್ ಭಟ್ಟಾಚಾರ್ಯ ಮೊದಲಾದವರು ಸ್ಪರ್ಧಿಸುತ್ತಿದ್ದಾರೆ. ಅದೇ ವೇಳೆ ಬರಾಕ್ಪೊರ್ನಿಂದ ಕಣಕ್ಕಿಳಿದಿರುವ ಖ್ಯಾತ ಸಿನಿಮಾ ನಿರ್ದೇಶಕ ರಾಜ್ ಚಕ್ರವರ್ತಿ, ಕೃಷ್ಣಾನಗರ್ ಚುನಾವಣಾ ಕ್ಷೇತ್ರದಿಂದ ಕಣಕ್ಕಿಳಿದಿರುವ ನಟಿ ಕೌಶಿನಿ ಮುಖರ್ಜಿ ಈ ಹಂತದ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷಿಸಲಿದ್ದಾರೆ.
57.30% voter turnout recorded till 1:28 pm in the sixth phase of #WestBengalPolls pic.twitter.com/fGdy0861z0
— ANI (@ANI) April 22, 2021
ಕೊವಿಡ್ -19 ಪ್ರಕರಣ ಏರಿಕೆಯಾಗುತ್ತಿರುವ ಮಧ್ಯೆಯೇ ಆರನೇ ಹಂತದ ಮತದಾನ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿ ಆಗಿದ್ದು, ಒಂದೇ ದಿನ 9,819 ಮಂದಿಗೆ ಕೊವಿಡ್ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 2.95 ಲಕ್ಷ ಕೋವಿಡ್ ಪ್ರಕರಣಗಳು ಮತ್ತು 2,023 ಸಾವು ದಾಖಲಾಗಿವೆ.
A voter at a booth near Nandigram village, Katwa in Purba Bardhaman district was given first aid by the ITBP medic team during the sixth phase of polling in West Bengal today pic.twitter.com/0E5erqSUSx
— ANI (@ANI) April 22, 2021
ಮತದಾನ ಮಾಡಲೆಂದೇ ಊರು ಸೇರಿದ ವಲಸೆ ಕಾರ್ಮಿಕರು
ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ಬಂಗಾಳ ಮೂಲದ ವಲಸೆ ಕಾರ್ಮಿಕರು ಮತದಾನ ಮಾಡಲು ಊರಿಗೆ ಬಂದಿದ್ದಾರೆ. ನಾನು ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ. ನಾನು 15ದಿನಗಳ ಕೆಲಸ ಬಿಟ್ಟು ಊರಿಗೆ ಬಂದಿದ್ದೇನೆ. ಫಲಿತಾಂಶ ಪ್ರಕಟವಾದ ಬಳಿಕವೇ ನಾವು ಮೇ 5ಕ್ಕೆ ಇಲ್ಲಿಂದ ವಾಪಸ್ ಹೋಗುವುದು ಎಂದು ಮಾಲದಾಜಿಲ್ಲೆಯ ನಿವಾಸಿ ವಲಸೆಕಾರ್ಮಿಕ ರಾಜ್ ಕುಮಾರ್ ಚೌಧರಿ ಹೇಳಿದ್ದಾರೆ.
ಕಂಚ್ರಪರದಲ್ಲಿ ಮುಕುಲ್ ರಾಯ್ ಮತದಾನ
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಅವರು ಕಂಚ್ರಪರ ಮುನ್ಸಿಪಲ್ ಪಾಲಿಟೆಕ್ನಿಕ್ ಹೈಸ್ಕೂಲ್ನ 141ನೇ ಮತಗಟ್ಟೆಯಲ್ಲಿಮತ ಚಲಾಯಿಸಿದ್ದಾರೆ.
West Bengal: BJP national vice president Mukul Roy casts his vote for the sixth phase of state Assembly polls at booth number 141 – at Kanchrapara Municipal Polytechnic High School – in Kanchrapara of North 24 Parganas district.#WestBengalElections pic.twitter.com/gDp5z1VYsS
— ANI (@ANI) April 22, 2021
ಉತ್ತರ ದಿನಜ್ಪುರ್ ನಲ್ಲಿ ಮತಗಟ್ಟೆಯ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ
ಉತ್ತರ ದಿನಜ್ಪುರ್ ರಾಯ್ ಗಂಜ್ ಕೊರೊನೇಷನ್ ಹೈಸ್ಕೂಲ್ ನ 134ನೇ ಮತಗಟ್ಟೆಯ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದು ಕೆಲ ಹೊತ್ತು ಮತದಾನಕ್ಕೆ ಸಮಸ್ಯೆಯಾಗಿದೆ.
ಇದನ್ನೂ ಓದಿ: ವಿಶ್ಲೇಷಣೆ: ಪಶ್ಚಿಮ ಬಂಗಾಳ ಕದನ ಕಣ: 6 ನೇಹಂತದ ಚುನಾವಣೆಯಲ್ಲಿ ಬಿಜೆಪಿ, ಟಿಎಂಸಿ ನಡುವೆ ನಡೆಯಲಿದೆ ಪ್ರಬಲ ಪೈಪೋಟಿ
(Despite Covid surge 6th Phase of West Bengal Assembly polls voter turnout till 1.30 pm 57.30 percent)
Published On - 2:11 pm, Thu, 22 April 21