ತಿರುಪತಿ ಲಡ್ಡಿನಲ್ಲಿ ತಂಬಾಕು ಸಿಕ್ಕಿತ್ತು, ಭಕ್ತೆಯ ಹೇಳಿಕೆ ಕೇಳಿ ಬೆಚ್ಚಿಬಿದ್ದ ಜನ
ತಿರುಪತಿ ದೇವಸ್ಥಾನದ ಪ್ರಸಾದವಾದ ಲಾಡುಗಳಿಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿ ಜನರು ಆತಂಕಗೊಂಡಿರುವ ಬೆನ್ನಲ್ಲೇ ಭಕ್ತರೊಬ್ಬರ ಹೇಳಿಕೆ ಮತ್ತಷ್ಟು ಭಯ ಹುಟ್ಟುಹಾಕಿದೆ. ತಿರುಪತಿ ಲಡ್ಡಿನಲ್ಲಿ ತಂಬಾಕು ತುಂಡುಗಳಿತ್ತು ಎಂದು ತೆಲಂಗಾಣದ ಖಮ್ಮಂ ಜಿಲ್ಲೆಯ ಭಕ್ತರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ತಿರುಪತಿ ದೇವಸ್ಥಾನದ ಪ್ರಸಾದವಾದ ಲಾಡುಗಳಿಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿ ಜನರು ಆತಂಕಗೊಂಡಿರುವ ಬೆನ್ನಲ್ಲೇ ಭಕ್ತರೊಬ್ಬರ ಹೇಳಿಕೆ ಮತ್ತಷ್ಟು ಭಯ ಹುಟ್ಟುಹಾಕಿದೆ. ತಿರುಪತಿ ಲಡ್ಡಿನಲ್ಲಿ ತಂಬಾಕು ತುಂಡುಗಳಿತ್ತು ಎಂದು ತೆಲಂಗಾಣದ ಖಮ್ಮಂ ಜಿಲ್ಲೆಯ ಭಕ್ತರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಅವರು ಮನೆಗೆ ತಂದ ಪ್ರಸಾದದಲ್ಲಿ ಕಾಗದದಲ್ಲಿ ಸುತ್ತಿದ್ದ ತಂಬಾಕು ತುಂಡುಗಳಿದ್ದವು ಎಂದು ಹೇಳಿದ್ದಾರೆ. ಗೊಲ್ಲಗುಡೆಂ ಪಂಚಾಯತ್‌ನ ಕಾರ್ತಿಕೇಯ ಟೌನ್‌ಶಿಪ್‌ನ ನಿವಾಸಿ ದೋಂತು ಪದ್ಮಾವತಿ ಅವರು ಸೆಪ್ಟೆಂಬರ್ 19 ರಂದು ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೊಂಡು ಮನೆಗೆ ತಂದಿದ್ದ ಲಡ್ಡುವಿನಲ್ಲಿ ತಂಬಾಕು ಪತ್ತೆಯಾಗಿತ್ತು.
ಎಲ್ಲಾ ಭಕ್ತರಂತೆ ಪದ್ಮಾವತಿ ಕೂಡ ತನ್ನ ಕುಟುಂಬ ಮತ್ತು ಅಕ್ಕಪಕ್ಕದ ಮನೆಯವರಿಗೆ ಕೊಡಲು ತಿರುಪತಿ ಲಡ್ಡು ತಂದಿದ್ದರು. ಎಲ್ಲರಿಗೂ ಹಂಚಲು ಲಡ್ಡು ತೆರೆದಾಗ ಸಣ್ಣ ಪೇಪರ್‌ನಲ್ಲಿ ಸುತ್ತಿದ ತಂಬಾಕಿನ ತುಂಡುಗಳು ಕಂಡು ಬೆಚ್ಚಿಬಿದ್ದಿದ್ದರು. ಪ್ರಸಾದವು ಪವಿತ್ರವಾಗಿರಬೇಕು ಆದರೆ ಅಂತಹ ಪದಾರ್ಥಗಳು ಅದರಲ್ಲಿ ಕಂಡುಬಂದಿದ್ದು ಬೇಸರ ಉಂಟು ಮಾಡಿತ್ತು.
ಮತ್ತಷ್ಟು ಓದಿ: ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ, ಆಂಧ್ರ ಸರ್ಕಾರದಿಂದ ಎಸ್ಐಟಿ ರಚನೆ
ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗಿದ್ದ ಲಡ್ಡೂಗಳಲ್ಲಿ ಪ್ರಾಣಿಗಳ ಕೊಬ್ಬು ಸೇರಿದಂತೆ ಗುಣಮಟ್ಟವಿಲ್ಲದ ಪದಾರ್ಥಗಳು ಪತ್ತೆಯಾಗಿವೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಳೆದ ವಾರ ಈ ಹೇಳಿಕೆ ನೀಡಿದ್ದರು.
ತಿರುಪತಿ ತಯಾರಿಕೆಯಲ್ಲಿ ಹಂದಿ, ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಇತರರ ವಿರುದ್ಧ ಹೈದರಾಬಾದ್‌ನಲ್ಲಿ ದೂರು ದಾಖಲಿಸಲಾಗಿದೆ.
ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪಾವಿತ್ರ್ಯವನ್ನು ದುರುದ್ದೇಶಪೂರಿತ ಕೃತ್ಯಗಳ ಮೂಲಕ ಹಾಳು ಮಾಡಿದ ಮತ್ತು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಜಗನ್ ವಿರುದ್ಧ ವಕೀಲರೊಬ್ಬರು ದೂರು ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ