AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಬರಿಮಲೆಗೆ ತೆರಳುವವರ ಗಮನಕ್ಕೆ; ನಿಮ್ಮೊಂದಿಗೆ ಇರಲೇಬೇಕು ಕೊವಿಡ್​-19 ನೆಗೆಟಿವ್​ ರಿಪೋರ್ಟ್

ಡಿಸೆಂಬರ್​ 31ರಿಂದ ಜನವರಿ 19ರವರೆಗೆ ಮಕರಸಂಕ್ರಾಂತಿ (ಮಕರವಿಲಕ್ಕು) ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಆ ಸಮಯದಲ್ಲಿ ಬೆಟ್ಟ ಹತ್ತುವ ಭಕ್ತರು ಆರ್​ಟಿ-ಪಿಸಿಆರ್​ನಲ್ಲಿ ನೆಗೆಟಿವ್​ ರಿಪೋರ್ಟ್​ ತರಲೇಬೇಕು.

ಶಬರಿಮಲೆಗೆ ತೆರಳುವವರ ಗಮನಕ್ಕೆ; ನಿಮ್ಮೊಂದಿಗೆ ಇರಲೇಬೇಕು ಕೊವಿಡ್​-19 ನೆಗೆಟಿವ್​ ರಿಪೋರ್ಟ್
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on:Dec 20, 2020 | 8:23 PM

Share

ತಿರುವನಂತಪುರಂ: ಮುಂದಿನ ಭಾನುವಾರ (ಡಿಸೆಂಬರ್​ 27)ರಿಂದ ಶಬರಿಮಲೆ ದೇವಸ್ಥಾನಕ್ಕೆ ಭಕ್ತರು ತೆರಳಬಹುದಾಗಿದ್ದು, ಆದರೆ ಕೈಯಲ್ಲಿ ಪೂಜಾ ಸಾಮಗ್ರಿಗಳಷ್ಟೇ ಅಲ್ಲ, ಕೊವಿಡ್​-19 ಆರ್​ಟಿ-ಪಿಸಿಆರ್ ನೆಗೆಟಿವ್​ ರಿಪೋರ್ಟ್ ಇರಲೇಬೇಕು..

ಆ್ಯಂಟಿಜೆನ್​ ಟೆಸ್ಟ್ ರಿಪೋರ್ಟ್ ಸಾಕಾಗಲ್ಲ ! ಕೊರೊನಾ ವೈರಸ್ ಕಾರಣದಿಂದ ಬಹುತೇಕ ಎಲ್ಲ ದೇವಸ್ಥಾನಗಳಲ್ಲೂ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಅದಕ್ಕೆ ಅಯ್ಯಪ್ಪಸ್ವಾಮಿಯ ಶಬರಿಮಲೆ ದೇಗುಲವೂ ಹೊರತಲ್ಲ. ಡಿ.27ರಿಂದ ಶಬರಿಮಲೆ ಪ್ರವೇಶಕ್ಕೆ ಕೇರಳ ಹೈಕೋರ್ಟ್ ಅನುಮತಿ ನೀಡಿದ್ದು, ಈ ಬಾರಿ 5000 ಯಾತ್ರಾರ್ಥಿಗಳು ಆಗಮಿಸಬಹುದು ಎಂದು ಹೇಳಿದೆ. ಅದರ ಬೆನ್ನಲ್ಲೇ ತಿರುವಾಂಕೂರು ದ್ವೇವಸ್ವಂ ಮಂಡಳಿ (TDB) ಕೊವಿಡ್​-19 ನೆಗೆಟಿವ್​ ರಿಪೋರ್ಟ್ ಕಡ್ಡಾಯ ಎಂದು ಅಧಿಕೃತ ಪ್ರಕಟಣೆ ಹೊರಡಿಸಿದೆ. ಅದರಲ್ಲೂ ಭಕ್ತರು ಆ್ಯಂಟಿಜೆನ್​ ಟೆಸ್ಟ್ ರಿಪೋರ್ಟ್ ತಂದರೆ ಸಾಲದು,  ಆರ್​ಟಿ-ಪಿಸಿಆರ್ ನೆಗೆಟಿವ್​ ರಿಪೋರ್ಟ್ ಹೊಂದಿರಬೇಕು. ಅದರಲ್ಲೂ ದೇಗುಲಕ್ಕೆ ಭೇಟಿ ನೀಡುವ ಎರಡೇ ದಿನ ಮೊದಲು ಪಡೆದ ರಿಪೋರ್ಟ್​ ಆಗಿರಬೇಕು. ಅದಕ್ಕೂ ಮೊದಲಿನ ಕೊವಿಡ್​ ರಿಪೋರ್ಟ್​ಗಳನ್ನು ಮಾನ್ಯ ಮಾಡುವುದಿಲ್ಲ ಎಂದು ಹೇಳಿದೆ.

ಹಾಗೇ ಡಿಸೆಂಬರ್​ 31ರಿಂದ ಜನವರಿ 19ರವರೆಗೆ ಮಕರಸಂಕ್ರಾಂತಿ (ಮಕರವಿಲಕ್ಕು) ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಆ ಸಮಯದಲ್ಲಿ ಬೆಟ್ಟ ಹತ್ತುವ ಭಕ್ತರು ಆರ್​ಟಿ-ಪಿಸಿಆರ್​ನಲ್ಲಿ ನೆಗೆಟಿವ್​ ರಿಪೋರ್ಟ್​ ತರಲೇಬೇಕು. ಅದಿಲ್ಲದವರಿಗೆ ಯಾವ ಕಾರಣಕ್ಕೂ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು TDB ತಿಳಿಸಿದೆ. ಈ ಮೊದಲು ಬರಿ ಆ್ಯಂಟಿಜೆನ್​ ಟೆಸ್ಟ್ ರಿಪೋರ್ಟ್ ಮಾತ್ರ ಸಾಕು ಎಂದಿದ್ದ ಆಡಳಿತ ಮಂಡಳಿ, ಇದೀಗ ಹೆಚ್ಚಿನ ಜನರು ಸೇರುವುದರಿಂದ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಿದೆ.

ಅದರಲ್ಲೂ ಶಬರಿಮಲೆಯಲ್ಲಿ ಸಂಕ್ರಾಂತಿ ಸಮಯದಲ್ಲಿ ಪ್ರತಿವರ್ಷವನ್ನೂ ಲಕ್ಷಾಂತರ ಭಕ್ತರು ಸೇರುತ್ತಾರೆ. ಮಾಲೆ ಹಾಕಿ ಬೆಟ್ಟ ಹತ್ತುವ ಅಯ್ಯಪ್ಪನ ಭಕ್ತರು ಸಂಕ್ರಾಂತಿ ವಿಶೇಷ ಪೂಜೆಗಳಲ್ಲಿ ಭಾಗವಹಿಸಿ ಸಾಮಾನ್ಯವಾಗಿ ಜನವರಿ 15ರಂದು ದರ್ಶನವಾಗುವ ಮಕರಜ್ಯೋತಿಯನ್ನು ಕಣ್ತುಂಬಿಕೊಂಡು ಅಲ್ಲಿಂದ ವಾಪಸ್​ ಆಗುತ್ತಾರೆ. ಈ ಬಾರಿ ಕೊರೊನಾ ಭಯ ಇರುವುದರಿಂದ ಯಾತ್ರಾರ್ಥಿಗಳು ಮಾಸ್ಕ್​ ಮತ್ತಿತರ ಸಿದ್ಧತೆಯೊಂದಿಗೇ ಹೋಗಬೇಕಾಗಿದೆ.

ಕಡಂದಲೆ ಸುಬ್ರಹ್ಮಣ್ಯ ದೇಗುಲದಲ್ಲಿ ಪಂಕ್ತಿಭೇದ ಆರೋಪ: ಅರ್ಚಕರ ನಡೆಗೆ ಭಕ್ತರ ಆಕ್ರೋಶ

Published On - 8:17 pm, Sun, 20 December 20

ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?