ಪ್ರತಿಭಟನಾ ನಿರತ ರೈತರಿಗೆ ಶಾಕ್​ ನೀಡಿದ ಫೇಸ್​ಬುಕ್​!: ಲೈವ್​ ಬಂದ ಪೇಜ್​ ಬ್ಲಾಕ್

ಕಿಸಾನ್​ ಏಕ್ತಾ ಮೋರ್ಚಾ ಹೆಸರಿನ ಫೇಸ್​ಬುಕ್​ ಪೇಜ್​ಗೆ 7 ಲಕ್ಷ ಜನ ಹಿಂಬಾಲಕರಿದ್ದರು. ರೈತರು ಪ್ರತಿಭಟನೆ ಮಾಡುತ್ತಿರುವಾಗ ಈ ಫೇಸ್​ಬುಕ್​ ಖಾತೆಯಿಂದ ಲೈವ್​ ಬರಲಾಗುತ್ತಿತ್ತು. ಆದರೆ, ಈ ಫೇಸ್​ಬುಕ್​ ಪೇಜ್​ಅನ್ನು ಈಗ ತೆಗೆದು ಹಾಕಲಾಗಿದೆ.

ಪ್ರತಿಭಟನಾ ನಿರತ ರೈತರಿಗೆ ಶಾಕ್​ ನೀಡಿದ ಫೇಸ್​ಬುಕ್​!: ಲೈವ್​ ಬಂದ ಪೇಜ್​ ಬ್ಲಾಕ್
ಪ್ರಾತಿನಿಧಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
|

Updated on: Dec 20, 2020 | 10:04 PM

ನವದೆಹಲಿ: ಪ್ರತಿಭಟನಾ ನಿರತ ರೈತರು ಹೋರಾಟ ಮಾಡುವುದರ ಜೊತೆಗೆ ಪ್ರತಿಭಟನೆಯ ಬಗ್ಗೆ ಎಲ್ಲರಿಗೂ ತಿಳಿಸಲು ಸಾಮಾಜಿಕ ಜಾಲತಾಣಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ, ಲೈವ್​ ಬಂದ ಖಾತೆಗಳನ್ನು ಫೇಸ್​ಬುಕ್​ ಬ್ಲಾಕ್​ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕಿಸಾನ್​ ಏಕ್ತಾ ಮೋರ್ಚಾ ಹೆಸರಿನ ಫೇಸ್​ಬುಕ್​ ಪೇಜ್​ಗೆ 7 ಲಕ್ಷ ಜನ ಹಿಂಬಾಲಕರಿದ್ದರು. ರೈತರು ಪ್ರತಿಭಟನೆ ಮಾಡುತ್ತಿರುವಾಗ ಈ ಫೇಸ್​ಬುಕ್​ ಖಾತೆಯಿಂದ ಲೈವ್​ ಬರಲಾಗುತ್ತಿತ್ತು. ಆದರೆ, ಈ ಫೇಸ್​ಬುಕ್​ ಪೇಜ್​ಅನ್ನು ಈಗ ತೆಗೆದು ಹಾಕಲಾಗಿದೆ. ಕಮ್ಯುನಿಟಿ ಸ್ಟ್ಯಾಂಡರ್ಡ್​ಗಳನ್ನು ಪಾಲಿಸುತ್ತಿಲ್ಲ ಎನ್ನುವ ಕಾರಣಕ್ಕೆ ಈ ಫೇಸ್​​ಬುಕ್​ ಪೇಜ್​ಗಳನ್ನು ಡಿಲೀಟ್​ ಮಾಡಲಾಗಿದೆಯಂತೆ.

ಇನ್ನು, ಕಿಸಾನ್​ ಏಕ್ತಾ ಮೋರ್ಚಾ ಇನ್​​ಸ್ಟಾಗ್ರಾಂ ಖಾತೆಗೂ ತೊಂದರೆ ಉಂಟಾಗಿದೆ. ಇನ್​ಸ್ಟಾಗ್ರಾಂ ಖಾತೆ ಮೂಲಕವೂ ರೈತರು ಲೈವ್​ ಬರುತ್ತಿದ್ದರು. ಆದರೆ, ಈಗ ಯಾವುದೇ ಹೊಸ ಪೋಸ್ಟ್​ಗಳನ್ನು ಹಾಕಲು ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಲಾಗಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡುವಂತೆ ಆಗ್ರಹಿಸಿ ಕಳೆದ ಮೂರು ವಾರಗಳಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. 40ಕ್ಕೂ ಹೆಚ್ಚು ರೈತರ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ನೀಡಿವೆ. ದಿನದಿಂದ ದಿನಕ್ಕೆ ಪ್ರತಿಭಟನೆ ಕಾವು ಹೆಚ್ಚುತ್ತಲೇ ಇರುವುದು ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Delhi Chalo | ದೆಹಲಿ ಗಡಿಭಾಗದಲ್ಲಿ ವಿಪರೀತ ಚಳಿಗೆ ಪ್ರತಿಭಟನಾ ನಿರತ ರೈತ ಸಾವು