DGCA Advisory: ವಿಮಾನದಲ್ಲಿ ಪ್ರಯಾಣಿಕರು ಅನುಚಿತವಾಗಿ ವರ್ತಿಸಿದರೆ ಸಿಬ್ಬಂದಿ ಏನು ಮಾಡಬೇಕು? : ಡಿಜಿಸಿಎ ನಿರ್ದೇಶನ

| Updated By: ನಯನಾ ರಾಜೀವ್

Updated on: Jan 06, 2023 | 8:12 PM

ವಿಮಾನದಲ್ಲಿ ಪ್ರಯಾಣಿಕರು ಅನುಚಿತವಾಗಿ ವರ್ತಿಸಿದರೆ ಕೂಡಲೇ ಸಂಬಂಧಪಟ್ಟ ಪ್ರಾಧಿಕಾರದ ಗಮನಕ್ಕೆ ತಂದು ದೂರು ನೀಡಬೇಕು ಎಂದು ವಿಮಾನಯಾನ ಸಂಸ್ಥೆಗಳ ಎಲ್ಲಾ ಸಿಬ್ಬಂದಿಗೆ ಡಿಜಿಸಿಎ ಎಚ್ಚರಿಕೆ ನೀಡಿದೆ.

DGCA Advisory: ವಿಮಾನದಲ್ಲಿ ಪ್ರಯಾಣಿಕರು ಅನುಚಿತವಾಗಿ ವರ್ತಿಸಿದರೆ ಸಿಬ್ಬಂದಿ ಏನು ಮಾಡಬೇಕು? : ಡಿಜಿಸಿಎ ನಿರ್ದೇಶನ
ವಿಮಾನ
Follow us on

ವಿಮಾನದಲ್ಲಿ ಪ್ರಯಾಣಿಕರು ಅನುಚಿತವಾಗಿ ವರ್ತಿಸಿದರೆ ಕೂಡಲೇ ಸಂಬಂಧಪಟ್ಟ ಪ್ರಾಧಿಕಾರದ ಗಮನಕ್ಕೆ ತಂದು ದೂರು ನೀಡಬೇಕು ಎಂದು ವಿಮಾನಯಾನ ಸಂಸ್ಥೆಗಳ ಎಲ್ಲಾ ಸಿಬ್ಬಂದಿಗೆ ಡಿಜಿಸಿಎ ಎಚ್ಚರಿಕೆ ನೀಡಿದೆ. ಕೆಲ ದಿನಗಳ ಹಿಂದೆ ಏರ್​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಹಾಗೂ ಗಗನಸಖಿಯೊಬ್ಬರ ಜತೆ ವಾಗ್ವಾದ ನಡೆಸಿದ ಪ್ರಕರಣಗಳು ಭಾರಿ ಸುದ್ದಿ ಮಾಡಿದ್ದವು.
ಈ ಹಿನ್ನೆಲೆಯಲ್ಲಿ ಎಲ್ಲಾ ವಿಮಾನಯಾನ ಸಂಸ್ಥೆಗಳು ಹಾಗೂ ಸಿಬ್ಬಂದಿಗೆ ಡಿಜಿಸಿಎ ಸೂಚನೆ ನೀಡಿದ್ದು, ವಿಮಾನ ಪ್ರಯಾಣದ ಸಂದರ್ಭದಲ್ಲಿ ಯಾವುದೇ ಪ್ರಯಾಣಿಕರು ಅನುಚಿತವಾಗಿ ವರ್ತಿಸಿದರೆ ಕೂಡಲೇ ಪೈಲೆಟ್ ಹಾಗೂ ಇತರೆ ಸಿಬ್ಬಂದಿ ಸಂಬಂಧಪಟ್ಟವರ ಗಮನಕ್ಕೆ ತೆಗೆದುಕೊಂಡು ಬರಬೇಕು.

ಹಾಗೆಯೇ ಆ ಕ್ಷಣದ ಪರಿಸ್ಥಿತಿಯನ್ನು ನಿಭಾಯಿಸಲು ಕೂಡಲೇ ನಿಯಮಬದ್ಧ ಕ್ರಮವನ್ನು ಪೈಲೆಟ್ ತೆಗೆದುಕೊಳ್ಳಬೇಕು. ಒಂದೊಮ್ಮೆ ತಪ್ಪಿದಲ್ಲಿ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಡಿಜಿಸಿಎ ಎಚ್ಚರಿಸಿದೆ. ನವೆಂಬರ್ 26 ರಂದು AI 102 ಬೋರ್ಡ್‌ನಲ್ಲಿ ಮಧ್ಯಾಹ್ನದ ಊಟದ ಬಳಿಕ ದೀಪಗಳನ್ನು ಆಫ್ ಮಾಡಿದ ಸ್ವಲ್ಪ ಸಮಯದ ನಂತರ, ಬಿಸಿನೆಸ್ ಕ್ಲಾಸ್ ಸೀಟ್ 8A ನಲ್ಲಿ ಕುಳಿತಿದ್ದ ಶಂಕರ್ ಮಿಶ್ರಾ ಮಹಿಳೆಯೊಬ್ಬಳ ಸೀಟ್ ಬಳಿ ಹೋಗಿ ಅವರ ಮೇಲೆ ಮೂತ್ರ ವಿಸರ್ಜಿಸಿದ್ದ. ಇದೀಗ ಆತ ತಲೆಮರೆಸಿಕೊಂಡಿದ್ದು, ಈ ವಿಚಾರವಾಗಿ ಪೊಲೀಸರು ಎರಡು ತಂಡಗಳನ್ನು ರಚನೆ ಮಾಡಿದ್ದು ಒಂದು ತಂಡ ಬೆಂಗಳೂರಿನಲ್ಲಿದ್ದರೆ ಮತ್ತೊಂದು ತಂಡ ಮುಂಬೈನಲ್ಲಿ ಬೀಡುಬಿಟ್ಟಿದೆ.

ಮತ್ತಷ್ಟು ಓದಿ: ವಿಮಾನದಲ್ಲಿ ಮೂತ್ರ ವಿಸರ್ಜನೆ ಪ್ರಕರಣ: ಆರೋಪಿ ಹಾಗೂ ಮಹಿಳೆಯ ನಡುವೆ ನಡೆದ ವಾಟ್ಸ್​ಆ್ಯಪ್ ಸಂಭಾಷಣೆಯಲ್ಲಿ ಏನಿದೆ?

ಮಿಶ್ರಾ ಅವರು ನವೆಂಬರ್ 28 ರಂದು ಇಬ್ಬರ ನಡುವೆ ಒಪ್ಪಂದ ಮಾಡಿಕೊಂಡು PayTM ನಲ್ಲಿ ಒಪ್ಪಂದದಂತೆ ಪರಿಹಾರವನ್ನು ಪಾವತಿಸಿದ್ದಾರೆ. ಘಟನೆಗೆ ಯಾವುದೇ ಪ್ರತ್ಯಕ್ಷದರ್ಶಿಗಳಿಲ್ಲ ಮತ್ತು ಕಕ್ಷಿದಾರರ ನಡುವಿನ ಒಪ್ಪಂದವು ಕ್ಯಾಬಿನ್ ಸಿಬ್ಬಂದಿಯ ಹೇಳಿಕೆಗಳಿಂದ ದೃಢೀಕರಿಸಲ್ಪಟ್ಟಿದೆ. ಶಂಕರ್ ಮಿಶ್ರಾ ಅವರು ತಮ್ಮ ವಕೀಲರಾದ ಇಶಾನಿ ಶರ್ಮಾ ಮತ್ತು ಅಕ್ಷತ್ ಬಾಜ್‌ಪೇಯ್ ಮೂಲಕ ಹೇಳಿಕೆಯೊಂದರಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ