Dharamshala Flood: ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಭಾರೀ ಪ್ರವಾಹ; ಕಣ್ಣೆದುರೇ ಕೊಚ್ಚಿಹೋಯ್ತು ಕಾರುಗಳು

| Updated By: ಸುಷ್ಮಾ ಚಕ್ರೆ

Updated on: Jul 12, 2021 | 1:37 PM

Himachal Pradesh Cloudburst: ಹಿಮಾಚಲ ಪ್ರದೇಶ ರಾಜ್ಯದ ಧರ್ಮಶಾಲಾ ಬಳಿ ಇರುವ ಭಾಗ್ಸು ನಾಗ್ ಗ್ರಾಮದಲ್ಲಿ ಪ್ರವಾಹದಿಂದ ಹತ್ತಾರು ಕಾರುಗಳು ರಸ್ತೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೋಗಳು ವೈರಲ್ ಆಗಿವೆ.

Dharamshala Flood: ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಭಾರೀ ಪ್ರವಾಹ; ಕಣ್ಣೆದುರೇ ಕೊಚ್ಚಿಹೋಯ್ತು ಕಾರುಗಳು
ಧರ್ಮಶಾಲಾದಲ್ಲಿ ಪ್ರವಾಹ
Follow us on

ಧರ್ಮಶಾಲಾ: ಉತ್ತರ ಭಾರತದಲ್ಲಿ ಮತ್ತೆ ಪ್ರವಾಹ ಉಂಟಾಗಿದ್ದು, ಅನೇಕ ಜಿಲ್ಲೆಗಳು ಸಂಪೂರ್ಣ ನೀರಿನಿಂದ ಆವೃತವಾಗಿವೆ. ಭಾರತದ ಪ್ರಮುಖ ಪ್ರವಾಸಿ ತಾಣಗಳಿರುವ ಘಟ್ಟ ಪ್ರದೇಶದ ರಾಜ್ಯವಾದ ಹಿಮಾಚಲಪ್ರದೇಶದಲ್ಲಿ (Himachal Pradesh Flood) ಕಳೆದ ವಾರದಿಂದ ಭಾರೀ ಮಳೆಯಾಗುತ್ತಿದೆ. ಇಲ್ಲಿನ ಧರ್ಮಶಾಲಾದಲ್ಲಿ (DharamShala) ಪ್ರವಾಹದ ಹೊಡೆತಕ್ಕೆ ಮನೆಗಳು, ಕಾರು, ಸೇತುವೆಗಳು ಕೊಚ್ಚಿಹೋಗಿರುವ ವಿಡಿಯೋಗಳು ಗಾಬರಿ ಹುಟ್ಟಿಸುವಂತಿವೆ.

ಹಿಮಾಚಲ ಪ್ರದೇಶ ರಾಜ್ಯದ ಧರ್ಮಶಾಲಾ ಬಳಿ ಇರುವ ಭಾಗ್ಸು ನಾಗ್ ಗ್ರಾಮದಲ್ಲಿ ಪ್ರವಾಹದಿಂದ ಹತ್ತಾರು ಕಾರುಗಳು ರಸ್ತೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಹಾಗೇ, ಶಿಮ್ಲಾದ ರಾಂಪುರ ಪ್ರದೇಶದ ಬಳಿ ಇರುವ ಝಕ್ರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಹೈವೇಯಲ್ಲಿ ಕುಸಿದಿರುವ ಮಣ್ಣು, ಬಿದ್ದಿರುವ ಮರಗಳನ್ನು ತೆರವುಗೊಳಿಸಿ, ರಸ್ತೆಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ.

ಎಎನ್​ಐ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ಹಿಮಾಚಲಪ್ರದೇಶದ ಮಂಝಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಇಂದು ಮಾತ್ರವಲ್ಲದೆ ನಾಳೆ ಕೂಡ ಹಿಮಾಚಲಪ್ರದೇಶದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಹೀಗಾಗಿ, ಹಿಮಾಚಲಪ್ರದೇಶ ಸರ್ಕಾರ ಈಗಾಗಲೇ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಜುಲೈ 15ರವರೆಗೂ ಹಿಮಾಚಲಪ್ರದೇಶದಲ್ಲಿ ಮಳೆ ಮುಂದುವರೆಯಲಿದೆ. ಧರ್ಮಶಾಲಾದಲ್ಲಿ 3000 ಮಿಲಿಮೀಟರ್ ಮಳೆಯಾಗಿದೆ. ಧರ್ಮಶಾಲಾದ ತಗ್ಗುಪ್ರದೇಶದ ಜನರನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

ಇದನ್ನೂ ಓದಿ: Karnataka Rain: ಇಂದಿನಿಂದ ಜುಲೈ 10 ರವರೆಗೆ ರಾಜ್ಯದಲ್ಲಿ ಭಾರಿ ಮಳೆ; ಎಲ್ಲೆಲ್ಲಿ ಯೆಲ್ಲೋ ಅಲರ್ಟ್ ಘೋಷಣೆ? ವಿವರ ಇಲ್ಲಿದೆ