ದೆಹಲಿ ಫೆಬ್ರುವರಿ 08: ಪ್ರತಿ ಬಾರಿಯಂತೆ ರಾಹುಲ್ ಗಾಂಧಿಯವರ (Rahul Gandhi) ಮತ್ತೊಂದು ಸುಳ್ಳು ಬಯಲಾಗಿದೆ. ಒಂದೋ ರಾಹುಲ್ ಗಾಂಧಿ ನಿಜವಾಗಿಯೂ ಅಜ್ಞಾನಿಯೋ ಅಥವಾ ಸುಳ್ಳುಗಳನ್ನು ಪದೇ ಪದೇ ಹೇಳುವ ಮೂಲಕ ಸುಳ್ಳನ್ನು ಸತ್ಯವೆಂದು ಒಪ್ಪಿಕೊಳ್ಳುತ್ತಾರೆ ಎಂದು ಅವರು ಭಾವಿಸುತ್ತಾರೆ. ರಾಹುಲ್ ಗಾಂಧಿ ಜೀ ಅವರು ಮೊದಲು ಸ್ವಂತವಾಗಿ ನ್ಯಾಯ ಒದಗಿಸಿಕೊಳ್ಳಬೇಕು, ಅವರು ಪ್ರತಿದಿನ ಸುಳ್ಳನ್ನು ಹಬ್ಬಿಸಿ ಮಾರಾಟ ಮಾಡಿದರೆ ಕೇವಲ ಹಾಸ್ಯ, ವಿಡಂಬನೆ ಮತ್ತು ಮನರಂಜನೆಗೆ ಸೀಮಿತವಾಗುವ ದಿನ ದೂರವಿಲ್ಲ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra pradhan)ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬರೆದಿದ್ದಾರೆ. ಸತ್ಯ ಏನೆಂದು ಇಲ್ಲಿ ಕೇಳಿ, ನರೇಂದ್ರ ಮೋದಿ (Narendra Modi) ಹುಟ್ಟಿದಾಗಿನಿಂದ ಒಬಿಸಿ ಅಲ್ಲ, ಅವರನ್ನು ಗುಜರಾತ್ ಸರ್ಕಾರ ಒಬಿಸಿ ಮಾಡಿದೆ. ಅಂಥವರು ಹಿಂದುಳಿದವರ ಹಕ್ಕು ಮತ್ತು ನ್ಯಾಯಕ್ಕಾಗಿ ಸಾಥ್ ನೀಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್, ಪ್ರಧಾನಿ ಮೋದಿಯವರ ಜಾತಿ ಬಗ್ಗೆ ಹೇಳಿರುವ ವಿಡಿಯೊವನ್ನು ಶೇರ್ ಮಾಡಿ ಪ್ರಧಾನ್ ಈ ರೀತಿ ಟ್ವೀಟ್ ಮಾಡಿದ್ದಾರೆ.
ಒಡಿಶಾದಲ್ಲಿ ತಮ್ಮ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ವೇಳೆ ಮಾತನಾಡಿದ ರಾಹುಲ್ ಪ್ರಧಾನಿಯವರು ತಮ್ಮನ್ನು ಒಬಿಸಿ ಸದಸ್ಯ ಎಂದು ಗುರುತಿಸುವ ಮೂಲಕ ಜನರನ್ನು “ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಮೋದಿಯವರು “ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಬಿಸಿ ಪಟ್ಟಿಯಲ್ಲಿ ಸೇರಿಸಲಾದ ಘಾಂಚಿ ಜಾತಿಯ ಕುಟುಂಬದಲ್ಲಿ ಜನಿಸಿದ್ದು ಎಂದು ಹೇಳಿದ್ದಾರೆ. ರಾಹುಲ್ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
हर बार की तरह, @RahulGandhi का एक और झूठ उजागर हो गया।
या तो राहुल गांधी सच में नासमझ हैं या फिर उन्हें लगता है कि बार-बार झूठ बोलने से झूठ को ही सच मान लिया जाता है। राहुल गांधी जी पहले अपने आप के साथ न्याय कर लें, इस तरह हर दिन झूठ बोएंगे और बेचेंगे तो वह दिन दूर नहीं है जब… https://t.co/rf7acqauNT
— Dharmendra Pradhan (@dpradhanbjp) February 8, 2024
25 ಜುಲೈ 1994 ರಂದು Modh-Ghanchi ಜಾತಿಯನ್ನು OBC ಎಂದು ಭಾರತ ಸರ್ಕಾರ ಅಧಿಸೂಚನೆ ಹೊರಡಿಸಿದಾಗ ನಾನು ಕಾಂಗ್ರೆಸ್ ಸರ್ಕಾರದಲ್ಲಿ ಗುಜರಾತ್‌ನ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದೆ. ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರಮೋದಿಯವರು ಇದೇ ಜಾತಿಯವರು. ಶ ರಾಹುಲ್ ಗಾಂಧಿಯವರು ಈ ವಿಷಯದ ಬಗ್ಗೆ ಬುದ್ದಿಹೀನ ಸುಳ್ಳುಗಳನ್ನ ಹರಡಿ OBC ಸಮುದಾಯಗಳನ್ನು ಅವಮಾನಿಸುತ್ತಿದ್ದಾರೆ. ನರೇಂದ್ರಮೋದಿ ಸಿಎಂ ಅಲ್ಲ, ಅವರು ಸಂಸದ/ಶಾಸಕರೂ ಆಗದೇ ಇದ್ದಾಗ ಈ ನಿರ್ಧಾರ ಮತ್ತು ನಂತರದ ಕೇಂದ್ರ ಸರ್ಕಾರದ ಅಧಿಸೂಚನೆ ಬಂದಿದ್ದು. ತಕ್ಷಣವೇ ತನ್ನ ಸುಳ್ಳನ್ನು ಹಿಂತೆಗೆದುಕೊಳ್ಳಿ. ಅವರು ಒಬಿಸಿಗಳನ್ನು ಮಾನಹಾನಿ ಮಾಡುವುದನ್ನು ನಿಲ್ಲಿಸಬೇಕು.ನಮ್ಮ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ದ್ವೇಷದ ಮಾತುಗಳಾಡಿದ್ದಕ್ಕಾಗಿ ಗುಜರಾತ್ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ರಾಜ್ಯಸಭಾ ಸಂಸದ,ಗುಜರಾತಿನ ಮಾಜಿ ಡಿಸಿಎಂ ನರಹರಿ ಅಮೀನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
I was serving as the Deputy Chief Minister of Gujarat in the Congress Government when GoG notified Modh-Ghanchi as OBC on 25th July 1994. This is the same caste our respected Prime Minister Shri @narendramodi belongs to. Mr. @RahulGandhi is insulting the OBC communities by
— Narhari Amin (@narhari_amin) February 8, 2024
ಪ್ರಧಾನಿ ನರೇಂದ್ರ ಮೋದಿ ಒಬಿಸಿ (OBC- ಇತರೆ ಹಿಂದುಳಿದ ವರ್ಗದ) ಸಮುದಾಯದಲ್ಲಿ ಹುಟ್ಟಿಲ್ಲ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಸರ್ಕಾರವೂ ತಿರುಗೇಟು ನೀಡಿದೆ. ಪ್ರಧಾನಿ ಜಾತಿಯ ಕುರಿತು ರಾಹುಲ್ ಗಾಂಧಿಯವರ ಹೇಳಿಕೆಗೆ ಸಂಬಂಧಿಸಿದ ಸಂಗತಿಗಳು” ಎಂಬ ಶೀರ್ಷಿಕೆಯ ಸಂಕ್ಷಿಪ್ತ ಟಿಪ್ಪಣಿಯಲ್ಲಿ, ಮೋದ್ ಘಾಂಚಿ ಜಾತಿ (ಮೋದಿ ಸೇರಿರುವ ಉಪ-ಗುಂಪು) “ಗುಜರಾತ್ ಸರ್ಕಾರದ ಪಟ್ಟಿಯಲ್ಲಿ ಸಾಮಾಜಿಕವಾಗಿ (ಮತ್ತು) ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಮತ್ತು OBCಯಲ್ಲಿದೆ ಎಂದಿದೆ. ಗುಜರಾತ್‌ನಲ್ಲಿ ನಡೆಸಿದ ಸಮೀಕ್ಷೆಯ ನಂತರ, ಮಂಡಲ್ ಆಯೋಗವು ಸೂಚ್ಯಂಕ 91(A) ಅಡಿಯಲ್ಲಿ ಒಬಿಸಿಗಳ ಪಟ್ಟಿಯನ್ನು ತಯಾರಿಸಿತು. ಇದರಲ್ಲಿ ಮೋದ್ ಘಾಂಚಿ ಜಾತಿಯೂ ಸೇರಿದೆ. ಭಾರತ ಸರ್ಕಾರದ ಗುಜರಾತ್‌ನ 105 OBC ಜಾತಿಗಳ ಪಟ್ಟಿಯು ಮೋದ್ ಘಾಂಚಿಯನ್ನು ಸಹ ಒಳಗೊಂಡಿದೆ ಎಂದು ಅದು ಹೇಳಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ ಹೇಳಿದ್ದು ಸುಳ್ಳು; ಮೋದಿಯವರ ಜಾತಿ ಒಬಿಸಿಗೆ ಸೇರಿದ್ದು ಎಂದು ಪುರಾವೆ ಟ್ವೀಟ್ ಮಾಡಿದ ಪ್ರಲ್ಹಾದ್ ಜೋಷಿ
ಜುಲೈ 25, 1994 ರಂದು ಮೋದಿಯವರ ತವರು ರಾಜ್ಯವಾದ ಗುಜರಾತ್ ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಬಿಸಿಗಳ ಪಟ್ಟಿಯಲ್ಲಿ ಉಪ-ಗುಂಪನ್ನು ಸೇರಿಸುವ ಅಧಿಸೂಚನೆ ಹೊರಡಿಸಲಾಗಿತ್ತು.
ಏಪ್ರಿಲ್ 4, 2000 ರ ಭಾರತ ಸರ್ಕಾರದ ಅಧಿಸೂಚನೆಯ ಪ್ರಕಾರ ಅದೇ ಉಪ-ಗುಂಪನ್ನು ಒಬಿಸಿಗೆ (ಪಟ್ಟಿ) ಸೇರಿಸಲಾಗಿದೆ. ಎರಡೂ ಅಧಿಸೂಚನೆಗಳನ್ನು ಬಿಡುಗಡೆ ಮಾಡಿದಾಗ ನರೇಂದ್ರ ಮೋದಿ ಅವರು ಅಧಿಕಾರದಲ್ಲಿ ಇರಲಿಲ್ಲ ಮತ್ತು ಆ ಸಮಯದಲ್ಲಿ ಕಾರ್ಯನಿರ್ವಾಹಕ ಕಚೇರಿಯನ್ನು ಹೊಂದಿರಲಿಲ್ಲ ಎಂದು ಸರ್ಕಾರ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:52 pm, Thu, 8 February 24