ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan) ಒಡಿಶಾದ ಅಂಗುಲ್ ಜಿಲ್ಲೆಯಲ್ಲಿರುವ ಜಗನ್ನಾಥ ದೇವಾಲಯ(Jagannath Temple)ದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. ಅಯೋಧ್ಯೆಯಲ್ಲಿ ರಾಮಮಂದಿರ(Ram Mandir)ದ ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ದೇಶಾದ್ಯಂತ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಾಲಯಗಳ ಸ್ವಚ್ಛತಾ ಅಭಿಯಾನಕ್ಕೆ ಪ್ರಧಾನ್ ಚಾಲನೆ ನೀಡಿದ್ದಾರೆ.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು ಮುಂಜಾನೆ ಅಂಗುಲ್ ಜಿಲ್ಲೆಯ ಜಗನ್ನಾಥ ದೇವಾಲಯಕ್ಕೆ ತೆರಳಿದ್ದಾರೆ.
ಧರ್ಮೇಂದ್ರ ಪ್ರಧಾನ್ ಇಲ್ಲಿನ ದೇವಸ್ಥಾನದೊಳಗೆ ಪೂಜೆ ಸಲ್ಲಿಸಿದರು. ಆರತಿ ತೆಗೆದುಕೊಂಡು ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗವಹಿಸಿ ನಂತರ ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆಗೆ ಸಹಕರಿಸಿದರು. ಈ ಅವಧಿಯಲ್ಲಿ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಇನ್ನೂ ಅನೇಕ ಜನರು ದೇವಾಲಯವನ್ನು ಸ್ವಚ್ಛಗೊಳಿಸಿದರು.
ಮತ್ತಷ್ಟು ಓದಿ: ನಾಸಿಕ್ ಕಾಲಾರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ರಾಜಕೀಯವಾಗಿ ಇದು ಹೇಗೆ ಮಹತ್ವ ಪಡೆದಿದೆ?
ನಾಸಿಕ್‌ನಲ್ಲಿ ಯುವ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುವಾಗ, ದೇವಾಲಯಗಳ ಒಳಗೆ ಸ್ವಚ್ಛತಾ ಅಭಿಯಾನವನ್ನು ನಡೆಸುವಂತೆ ದೇಶದ ಜನತೆಗೆ ಮನವಿ ಮಾಡಿದ್ದರು. ಜನವರಿ 22ರೊಳಗೆ ದೇಶದ ಮೂಲೆ ಮೂಲೆಯಲ್ಲಿರುವ ಎಲ್ಲ ದೇವಸ್ಥಾನಗಳನ್ನು ಸ್ವಚ್ಛಗೊಳಿಸಬೇಕು ಎಂದು ಹೇಳಿದ್ದರು.
राम लला के आगमन पर देश के सभी देव स्थानों को और अधिक स्वच्छ और निर्मल बनाने का जो अभियान माननीय प्रधानमंत्री श्री @narendramodi जी ने शुरू किया है उसी के निमित्त आज जिंदल नगर, अंगुल, स्थित महाप्रभु श्री जगन्नाथ मंदिर में स्वच्छता अभियान में सम्मिलित हुआ।
ओड़िशा सहित देश के… pic.twitter.com/CMBsuhk9OP
— Dharmendra Pradhan (@dpradhanbjp) January 13, 2024
ಖುದ್ದಾಗಿ ನರೇಂದ್ರ ಮೋದಿ ಶ್ರೀ ಕಲಾರಾಮ್ ದೇವಾಲಯದ ಸಂಕೀರ್ಣದಲ್ಲಿ ಶ್ರಮದಾನವನ್ನು ಮಾಡಿದರು ಮತ್ತು ದೇವಾಲಯಗಳನ್ನು ಸ್ವಚ್ಛಗೊಳಿಸಲು ದೇಶವಾಸಿಗಳನ್ನು ಪ್ರೇರೇಪಿಸಿದರು. ಇದರೊಂದಿಗೆ ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶದ ಎಲ್ಲಾ ದೇವತಾ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸುವಂತೆ ಕರೆ ನೀಡಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ