ದೆಹಲಿ: ಪ್ರತಿಕೂಲ ಹವಾಮಾನದ ನಡುವೆಯೂ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ(Bharat Jodo Yatra) ಸಮಾರೋಪ ಸಮಾರಂಭವು ಇಂದು ಜಮ್ಮು ಮತ್ತು ಕಾಶ್ಮೀರದ (Jammu and Kashmir)ಶ್ರೀನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ಸಮಾರಂಭದೊಂದಿಗೆ ಪ್ರಾರಂಭವಾಯಿತು. ಇದಾದ ನಂತರ ಕ್ರೀಡಾಂಗಣದಲ್ಲಿ ರ್ಯಾಲಿ ನಡೆಯಿತು. ಕಾಶ್ಮೀರಿ ಉನ್ನತ ನಾಯಕರು, ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮೆಹಬೂಬಾ ಮುಫ್ತಿ ಅವರು ಭಾರೀ ಹಿಮಪಾತದ ನಡುವೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೆರವಣಿಗೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಕಾಂಗ್ರೆಸ್ ನಾಯಕರು ಕೂಡಾ ಭಾಷಣ ಮಾಡಿದ್ದರು.
“ನಾನು ಈ ಯಾತ್ರೆಯನ್ನು ನನಗಾಗಲಿ ಅಥವಾ ಕಾಂಗ್ರೆಸ್‌ಗಾಗಿ ಮಾಡಿಲ್ಲ, ಆದರೆ ದೇಶದ ಜನರಿಗಾಗಿ ಮಾಡಿದ್ದೇನೆ. ಈ ದೇಶದ ಅಡಿಪಾಯವನ್ನು ನಾಶಮಾಡಲು ಬಯಸುವ ಸಿದ್ಧಾಂತದ ವಿರುದ್ಧ ನಿಲ್ಲುವುದು ನಮ್ಮ ಗುರಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮಂತೆ ಯಾತ್ರೆ ಕೈಗೊಳ್ಳುವಂತೆ ಬಿಜೆಪಿ ವರಿಷ್ಠರಿಗೆ ಸವಾಲು ಹಾಕಿದ ರಾಹುಲ್ ಗಾಂಧಿ, ನಾವು ಹೆದರಿ ಯಾವುದನ್ನೂ ಮಾಡುವುದಿಲ್ಲ ಎಂದು ಹೇಳಿದರು.
ये यात्रा न मैंने अपने लिए की,
न कांग्रेस के लिए।ये यात्रा हमने
भारत की जनता के लिए की।नफ़रत के बाज़ार में
मोहब्बत की दुकानें खोलने के लिए की। pic.twitter.com/CevxT8vaYt— Rahul Gandhi (@RahulGandhi) January 30, 2023
ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಬಿಜೆಪಿ ನಾಯಕರು ಈ ರೀತಿ ನಡೆಯಲು ಸಾಧ್ಯವಿಲ್ಲ ಎಂದು ನಾನು ನಿಮಗೆ ಖಾತರಿ ನೀಡಬಲ್ಲೆ. ಅವರು ಅದನ್ನು ಮಾಡುವುದಿಲ್ಲ, ಅವರಿಗೆ ಅವಕಾಶ ನೀಡುವುದಿಲ್ಲ ಎಂಬ ಕಾರಣದಿಂದಲ್ಲ ಆದರೆ ಅವರು ಭಯಪಡುತ್ತಾರೆ” ಎಂದು ಅವರು ಹೇಳಿದರು.
ಕಾಂಗ್ರೆಸ್‌ನ ಪ್ಯಾನ್-ಇಂಡಿಯಾ ಪಾದಯಾತ್ರೆಯ ಸಮಾರೋಪ ಸಮಾರಂಭದ ಭಾಗವಾಗಿ, 135 ದಿನಗಳ ಸುದೀರ್ಘ ಕನ್ಯಾಕುಮಾರಿಯಿಂದ ಕಾಶ್ಮೀರ ಯಾತ್ರೆಯ ಅಂತ್ಯವನ್ನು ಗುರುತಿಸಲು ಶೇರ್-ಐ-ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಾಂಗ್ರೆಸ್ ಮೆಗಾ ರ್ಯಾಲಿಯನ್ನು ಆಯೋಜಿಸಿತ್ತು.
ಆದಾಗ್ಯೂ, ಹಿಮಪಾತದಿಂದಾಗಿ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಿದ್ದು ವಿಮಾನ ಸಂಚಾರಕ್ಕೂ ಅಡ್ಡಿಪಡಿಯಾಗಿದೆ.
ಇದನ್ನೂ ಓದಿ:Rahul Gandhi At Lal Chowk: ಕಾಶ್ಮೀರದ ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜ ಹಾರಿಸಿದ ರಾಹುಲ್ ಗಾಂಧಿ
ಕಡಿಮೆ ಗೋಚರತೆ ಮತ್ತು ನಿರಂತರ ಹಿಮಪಾತವು ಶ್ರೀನಗರಕ್ಕೆ ಎಲ್ಲಾ ವಿಮಾನಗಳನ್ನು ವಿಳಂಬಗೊಳಿಸಿದೆ ಎಂದು ಶ್ರೀನಗರದ ವಿಮಾನ ನಿಲ್ದಾಣದ ನಿರ್ದೇಶಕ ಕುಲದೀಪ್ ಸಿಂಗ್ ರಿಷಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ವಿಸ್ತಾರಾ ಏರ್‌ಲೈನ್ಸ್ ದೆಹಲಿಯಿಂದ ಶ್ರೀನಗರಕ್ಕೆ ತನ್ನ ಎರಡೂ ವಿಮಾನಗಳನ್ನು ದಿನದ ಮಟ್ಟಿಗೆ ರದ್ದುಗೊಳಿಸಿದೆ. ಸಮಾರಂಭಕ್ಕೆ 21 ಪಕ್ಷಗಳನ್ನು ಆಹ್ವಾನಿಸಲಾಗಿತ್ತು, ಆದರೆ ಕೆಲವರು ಭದ್ರತೆಯ ಕಾರಣದಿಂದ ಹಾಜರಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಟಿಡಿಪಿ ಸಮಾರಂಭಕ್ಕೆ ಗೈರಾಗಿದೆ.
ಭಾನುವಾರ ಲಾಲ್ ಚೌಕ್ ಪ್ರದೇಶದಲ್ಲಿ ರಾಹುಲ್ ಗಾಂಧಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ “ಪಾದಯಾತ್ರೆ” ಮುಕ್ತಾಯಗೊಂಡಿದ್ದು ಶ್ರೀನಗರದಲ್ಲಿ ಸೋಮವಾರ ಅಧಿಕೃತ ಸಮಾರೋಪ ನಡೆದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ