AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಂಟರಿಷ್ಟರಿದ್ದಾರೋ ಗೊತ್ತಿಲ್ಲ, ಆಪ್ತರು ಯಾರೂ ಜತೆಗಿಲ್ಲ, ಕಸದ ಟ್ರಾಲಿಯಲ್ಲಿ ಸ್ಮಶಾನಕ್ಕೆ ಹೊರಟ ಅನಾಥ ಶವ

ಕೆಲವರು ಯಾರೂ ಇಲ್ಲದೆ ಅನಾಥರಾಗುತ್ತಾರೆ ಇನ್ನೂ ಕೆಲವರು ಎಲ್ಲರೂ ಇದ್ದೂ ಕೂಡ ಅನಾಥರಾಗುತ್ತಾರೆ. ವ್ಯಕ್ತಿಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಸಂಬಂಧಿಕರು ಯಾರಾದರೂ ಇದ್ದಾರೋ ಇಲ್ಲವೋ ಎಂಬುದು ಯಾರಿಗೂ ತಿಳಿದಿಲ್ಲ, ಆಪ್ತರು ಯಾರೂ ಜತೆಗಿಲ್ಲ ಅಂತಿಮವಾಗಿ ಕಸದ ಟ್ರಾಲಿಯನ್ನು ಶವವನ್ನು ಸ್ಮಶಾನಕ್ಕೆ ಸಾಗಿಸಿರುವ ಘಟನೆ ಪಂಜಾಬ್​ನ ಫಾಗ್ವಾರಾದಲ್ಲಿ ನಡೆದಿದೆ. ಕಸ ಸಂಗ್ರಹಿಸಲು ಬಳಸುವ ಪುರಸಭೆ ವಾಹನದಲ್ಲಿ ಶವವನ್ನು ಸಾಗಿಸಲಾಯಿತು.

ನೆಂಟರಿಷ್ಟರಿದ್ದಾರೋ ಗೊತ್ತಿಲ್ಲ, ಆಪ್ತರು ಯಾರೂ ಜತೆಗಿಲ್ಲ, ಕಸದ ಟ್ರಾಲಿಯಲ್ಲಿ ಸ್ಮಶಾನಕ್ಕೆ ಹೊರಟ ಅನಾಥ ಶವ
ಶವImage Credit source: India Today
ನಯನಾ ರಾಜೀವ್
|

Updated on: Nov 20, 2025 | 9:18 AM

Share

ಪಂಜಾಬ್, ನವೆಂಬರ್ 20: ಕೆಲವರು ಯಾರೂ ಇಲ್ಲದೆ ಅನಾಥರಾಗುತ್ತಾರೆ ಇನ್ನೂ ಕೆಲವರು ಎಲ್ಲರೂ ಇದ್ದೂ ಕೂಡ ಅನಾಥರಾಗುತ್ತಾರೆ. ವ್ಯಕ್ತಿಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಸಂಬಂಧಿಕರು ಯಾರಾದರೂ ಇದ್ದಾರೋ ಇಲ್ಲವೋ ಎಂಬುದು ಯಾರಿಗೂ ತಿಳಿದಿಲ್ಲ, ಆಪ್ತರು ಯಾರೂ ಜತೆಗಿಲ್ಲ ಅಂತಿಮವಾಗಿ ಕಸದ ಟ್ರಾಲಿಯನ್ನು ಶವ(DeadBody)ವನ್ನು ಸ್ಮಶಾನಕ್ಕೆ ಸಾಗಿಸಿರುವ ಘಟನೆ ಪಂಜಾಬ್​ನ ಫಾಗ್ವಾರಾದಲ್ಲಿ ನಡೆದಿದೆ. ಕಸ ಸಂಗ್ರಹಿಸಲು ಬಳಸುವ ಪುರಸಭೆ ವಾಹನದಲ್ಲಿ ಶವವನ್ನು ಸಾಗಿಸಲಾಯಿತು.

ಫಾಗ್ವಾರಾ ಸಿವಿಲ್ ಆಸ್ಪತ್ರೆಯಲ್ಲಿ ಅನಾಥ ಶವವನ್ನು ಕಸದ ಟ್ರಾಲಿಗೆ ಹಾಕುತ್ತಿರುವ ವಿಡಿಯೋವನ್ನು ವ್ಯಕ್ತಿಯೊಬ್ಬರು ಚಿತ್ರೀಕರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಅದರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ರೈಲ್ವೆ ನಿಲ್ದಾಣದಲ್ಲಿ ಶವ ಪತ್ತೆಯಾಗಿತ್ತು.

ಘಟನೆಯ ಬಗ್ಗೆ ಕೇಳಿದಾಗ, ಪುರಸಭೆಯ ವಾಹನದ ಚಾಲಕ, ವಾಹನವನ್ನು ಬಳಸಿಕೊಂಡು ವಾರಸುದಾರರಿಲ್ಲದ ಶವಗಳನ್ನು ಸ್ಮಶಾನಕ್ಕೆ ಸಾಗಿಸುವುದು ವಾಡಿಕೆಯ ಅಭ್ಯಾಸ ಎಂದು ಹೇಳಿದ್ದಾರೆ. ನಗರಸಭೆ ಅಧಿಕಾರಿಗಳಿಂದ ನಮಗೆ ಯಾವುದೇ ಸೌಲಭ್ಯಗಳು ಸಿಗದ ಕಾರಣ ನಾವು ಅಸಹಾಯಕರಾಗಿದ್ದೇವೆ ಎಂದು ಚಾಲಕ ಹೇಳಿದರು.

ಮತ್ತಷ್ಟು ಓದಿ: ಚರಂಡಿಯಲ್ಲಿ ಮಹಿಳೆಯ ತಲೆಯಿಲ್ಲದ ಬೆತ್ತಲೆ ಶವ ಪತ್ತೆ; ಬೆಚ್ಚಿಬಿದ್ದ ನೊಯ್ಡಾ

ಆಸ್ಪತ್ರೆ ಸಿಬ್ಬಂದಿ ಹೇಳುವಂತೆ ಶವವು ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ನಂತರ ಅದನ್ನು ಕಸ ಸಂಗ್ರಹಿಸುವ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಯಾರೂ ಶವವನ್ನು ಪಡೆಯಲು ಬಾರದ ಕಾರಣ, ಆಸ್ಪತ್ರೆಯು ಕಸದ ಟ್ರಾಲಿಯಲ್ಲಿ ಶವವನ್ನು ಸ್ಮಶಾನಕ್ಕೆ ಸಾಗಿಸಿತು.

ಈ ವಿಷಯದ ಬಗ್ಗೆ ಆಸ್ಪತ್ರೆಯ ಸಿವಿಲ್ ಸರ್ಜನ್‌ಗೆ ಪತ್ರ ಬರೆದು ವರದಿ ಕೋರಿದ್ದೇನೆ ಎಂದು ಫಾಗ್ವಾರಾ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಜಶಾನ್‌ಜಿತ್ ಸಿಂಗ್ ಹೇಳಿದ್ದಾರೆ. ಆದಾಗ್ಯೂ, ಆಸ್ಪತ್ರೆಯಲ್ಲಿ ಸರ್ಕಾರಿ ಆಂಬ್ಯುಲೆನ್ಸ್ ಇದ್ದು, ಅದನ್ನು ಏಕೆ ಬಳಸಿಕೊಂಡಿಲ್ಲ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಕಸ ಸಂಗ್ರಹಿಸುವ ವಾಹನದಲ್ಲಿ ಶವಗಳನ್ನು ಸಾಗಿಸಬಾರದು ಎಂದು ಅಧಿಕಾರಿ ಒಪ್ಪಿಕೊಂಡರು.

ಕಸ ಸಂಗ್ರಹಿಸುವ ವಾಹನದಲ್ಲಿ ಶವಗಳನ್ನು ಸಾಗಿಸುವ ಪದ್ಧತಿಯ ಬಗ್ಗೆ ತಮಗೆ ತಿಳಿದಿಲ್ಲ ಎಂದು ಫಾಗ್ವಾರಾ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ರಾಂಪಾಲ್ ಉಪ್ಪಲ್ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮತ್ತು ಹೊಣೆಗಾರರನ್ನು ಗುರುತಿಸಲು ತನಿಖೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್