ವಿಭಜಿತ ಪ್ರಪಂಚವು ಸವಾಲುಗಳನ್ನು ಪರಿಹರಿಸಲು ಸಾಧ್ಯವಿಲ್ಲ: ಅಂತರ ಸಂಸದೀಯ ಒಕ್ಕೂಟದಲ್ಲಿ ಭಾರತ

|

Updated on: Oct 28, 2023 | 4:47 PM

ನಾವು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಉತ್ಸಾಹದಲ್ಲಿ ಜಗತ್ತನ್ನು ನೋಡಬೇಕು. ಈ ಉತ್ಸಾಹದಲ್ಲಿ ಆಫ್ರಿಕನ್ ಯೂನಿಯನ್ ಅನ್ನು ಜಿ20ನ ಖಾಯಂ ಸದಸ್ಯರನ್ನಾಗಿ ಮಾಡಲು ಭಾರತ ಪ್ರಸ್ತಾಪಿಸಿದ್ದು ಎಲ್ಲಾ G20 ಸದಸ್ಯ ರಾಷ್ಟ್ರಗಳು ಇದನ್ನು ಒಪ್ಪಿಕೊಂಡಿರುವುದು ನಮಗೆ ಸಂತೋಷವಾಗಿದೆ ಎಂದ ಡಾ.ಸಸ್ಮಿತ್ ಪಾತ್ರಾ.

ವಿಭಜಿತ ಪ್ರಪಂಚವು ಸವಾಲುಗಳನ್ನು ಪರಿಹರಿಸಲು ಸಾಧ್ಯವಿಲ್ಲ: ಅಂತರ ಸಂಸದೀಯ ಒಕ್ಕೂಟದಲ್ಲಿ ಭಾರತ
ಡಾ ಸಸ್ಮಿತ್ ಪಾತ್ರಾ
Follow us on

ಲುವಾಂಡಾ ಅಕ್ಟೋಬರ್ 28: ಅಂಗೋಲಾದ (Angola) ಲುವಾಂಡಾದಲ್ಲಿ ಶುಕ್ರವಾರ ನಡೆದ 147ನೇ ಇಂಟರ್ ಪಾರ್ಲಿಮೆಂಟರಿ ಯೂನಿಯನ್ (IPU) ಅಸೆಂಬ್ಲಿಯಲ್ಲಿ ಮಾತನಾಡಿ ರಾಜ್ಯಸಭಾ ಸದಸ್ಯ ಡಾ.ಸಸ್ಮಿತ್ ಪಾತ್ರಾ (Dr Sasmit Patra), ಮಾನವೀಯತೆ ಎದುರಿಸುತ್ತಿರುವ ದೊಡ್ಡ ಸವಾಲುಗಳನ್ನು ಎದುರಿಸಲು ಜಗತ್ತನ್ನು ಒಳಗೊಳ್ಳುವ ವಿಧಾನಕ್ಕೆ ಕರೆ ನೀಡಿದ್ದು, ಜಾಗತಿಕ ನಂಬಿಕೆಯ ಕೊರತೆಯನ್ನು ಹೋಗಲಾಡಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಕರೆಯನ್ನು ಪುನರುಚ್ಚರಿಸಿದರು.

ವಿಶ್ವದಾದ್ಯಂತ ಏನಾಗುತ್ತಿದೆ ಎಂಬುದರ ಬಗ್ಗೆ ವಿಶ್ವದ ಯುವಜನರು ಗೊತ್ತಿಲ್ಲದೇನಿಲ್ಲ ಎಂದು ಕೆಲವು ದಿನಗಳ ಹಿಂದೆ ನವದೆಹಲಿಯಲ್ಲಿ ನಡೆದ ಜಿ -20 ಅಂಗವಾಗಿ ಪಿ -20 ವೇದಿಕೆಯಲ್ಲಿ ಭಾರತದ ಪ್ರಧಾನ ಮಂತ್ರಿ ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು. ವಿಭಜಿತ ಜಗತ್ತು ಮಾನವೀಯತೆ ಎದುರಿಸುತ್ತಿರುವ ಪ್ರಮುಖ ಸವಾಲುಗಳಿಗೆ ಪರಿಹಾರಗಳನ್ನು ನೀಡಲು ಸಾಧ್ಯವಿಲ್ಲ. ಇದು ಎಲ್ಲರ ಬೆಳವಣಿಗೆ ಮತ್ತು ಯೋಗಕ್ಷೇಮದ ಸಮಯವಾಗಿದೆ.ನಾವು ಜಾಗತಿಕ ನಂಬಿಕೆಯ ಕೊರತೆಯನ್ನು ನೀಗಿಸಬೇಕು ಮತ್ತು ಮಾನವ ಕೇಂದ್ರಿತ ಚಿಂತನೆಯಲ್ಲಿ ಮುನ್ನಡೆಯಬೇಕು


ಜಿ20 ಭಾರತ ಶೃಂಗಸಭೆಯ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯವನ್ನು ಪಾತ್ರಾ ಅವರು ಒತ್ತಿ ಹೇಳಿದ್ದು ಭಾರತದ ಪ್ರಸ್ತಾಪದ ನಂತರ ಆಫ್ರಿಕನ್ ಯೂನಿಯನ್ G20 ಯ ಶಾಶ್ವತ ಸದಸ್ಯತ್ವವನ್ನು ಪಡೆಯುವುದನ್ನು ಉಲ್ಲೇಖಿಸಿದ್ದಾರೆ.

“ನಾವು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಉತ್ಸಾಹದಲ್ಲಿ ಜಗತ್ತನ್ನು ನೋಡಬೇಕು. ಈ ಉತ್ಸಾಹದಲ್ಲಿ ಆಫ್ರಿಕನ್ ಯೂನಿಯನ್ ಅನ್ನು ಜಿ20ನ ಖಾಯಂ ಸದಸ್ಯರನ್ನಾಗಿ ಮಾಡಲು ಭಾರತ ಪ್ರಸ್ತಾಪಿಸಿದ್ದು ಎಲ್ಲಾ G20 ಸದಸ್ಯ ರಾಷ್ಟ್ರಗಳು ಇದನ್ನು ಒಪ್ಪಿಕೊಂಡಿರುವುದು ನಮಗೆ ಸಂತೋಷವಾಗಿದೆ. ಕೆಲವು ದಿನಗಳ ಹಿಂದೆ ನವದೆಹಲಿಯಲ್ಲಿ ನಡೆದ P20 ವೇದಿಕೆಯಲ್ಲಿ ಪ್ಯಾನ್ ಆಫ್ರಿಕಾ ಸಂಸತ್ತಿನ ಭಾಗವಹಿಸುವಿಕೆಯನ್ನು ನೋಡಿ ನಮಗೆ ತುಂಬಾ ಸಂತೋಷವಾಯಿತು ಎಂದು ಪಾತ್ರಾ ಹೇಳಿದ್ದಾರೆ.

ಇದನ್ನೂ ಓದಿ: ಒಡಿಶಾ: ಅಮೃತ ಕಲಶ ಯಾತ್ರೆಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭಾಗಿ

ಇದಕ್ಕೂ ಮೊದಲು, G20 ಸದಸ್ಯರು ಮತ್ತು ಇತರ ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಪ್ರತಿನಿಧಿಸುತ್ತಿರುವ P20 ಶೃಂಗಸಭೆಯ ಮುಖ್ಯ ಭಾಷಣದಲ್ಲಿ ಪ್ರಧಾನಿ ಮೋದಿ “ಸ್ಪೀಕರ್ ಓಂ ಬಿರ್ಲಾ ಅವರು ಸಂಸತ್ತಿನ ಹೊಸ ಕಟ್ಟಡಕ್ಕೆ ನಿಮ್ಮನ್ನು ಕರೆದೊಯ್ಯುತ್ತಾರೆ ಎಂದು ನನಗೆ ಹೇಳಲಾಗಿದೆ. ಹಲವಾರು ವರ್ಷಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದ್ದಾರೆ.ಭಯೋತ್ಪಾದಕರು ನಮ್ಮ ಸಾವಿರಾರು ಜನರ ಪ್ರಾಣವನ್ನು ತೆಗೆದುಕೊಂಡಿದ್ದಾರೆ.ಸುಮಾರು 20 ವರ್ಷಗಳ ಹಿಂದೆ, ಹಳೆಯ ಸಂಸತ್ತಿನ ಕಟ್ಟಡದ ಬಳಿಯೇ ಇರುವ ಹಳೆಯ ಸಂಸತ್ ಭವನವು ಭಯೋತ್ಪಾದಕರ ದಾಳಿಗೆ ಒಳಗಾಯಿತ ದಾಳಿಯ ಸಮಯದಲ್ಲಿ ಸಂಸತ್ ನಲ್ಲಿ ಅಧಿವೇಶನ ನಡೆಯುತ್ತಿತ್ತು ಎಂದು ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ ಎಂದಿದ್ದರು.

ಐಪಿಯು ರಾಷ್ಟ್ರೀಯ ಸಂಸತ್ತುಗಳ ಜಾಗತಿಕ ಸಂಸ್ಥೆಯಾಗಿದೆ. ಇದು 1889 ರಲ್ಲಿ ಸಂಸದೀಯ ರಾಜತಾಂತ್ರಿಕತೆ ಮತ್ತು ಸಂವಾದದ ಮೂಲಕ ಶಾಂತಿಯನ್ನು ಉತ್ತೇಜಿಸಲು ಮೀಸಲಾಗಿರುವ ಸಂಸದೀಯ ಸದಸ್ಯರ ಒಂದು ಸಣ್ಣ ಗುಂಪಿನಂತೆ ಪ್ರಾರಂಭವಾಯಿತು. ನಂತರ 180 ಸದಸ್ಯರು ಮತ್ತು 14 ಸಹವರ್ತಿ ಸದಸ್ಯರೊಂದಿಗೆ ಜಾಗತಿಕ ಸಂಸ್ಥೆಯಾಗಿ ಬೆಳೆದಿದೆ. IPU ಸಂಸದೀಯ ರಾಜತಾಂತ್ರಿಕತೆಯನ್ನು ಸುಗಮಗೊಳಿಸುತ್ತದೆ ಮತ್ತು ಪ್ರಪಂಚದಾದ್ಯಂತ ಶಾಂತಿ, ಪ್ರಜಾಪ್ರಭುತ್ವ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಸಂಸತ್ತುಗಳು ಮತ್ತು ಸಂಸದರಿಗೆ ಅಧಿಕಾರ ನೀಡುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ